- Home
- Entertainment
- Cine World
- ಬಿಷ್ಣೋಯ್ ಬೆದರಿಕೆಯಿಂದ ಸಲ್ಮಾನ್ ಖಾನ್‌ಗೆ ಹೊಸ ಬುಲೆಟ್‌ಪ್ರೂಫ್ ಕಾರು, ನಟನಲ್ಲಿರುವ ಕಾರುಗಳೆಷ್ಟು?
ಬಿಷ್ಣೋಯ್ ಬೆದರಿಕೆಯಿಂದ ಸಲ್ಮಾನ್ ಖಾನ್‌ಗೆ ಹೊಸ ಬುಲೆಟ್‌ಪ್ರೂಫ್ ಕಾರು, ನಟನಲ್ಲಿರುವ ಕಾರುಗಳೆಷ್ಟು?
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಎದುರಿಸುತ್ತಿರುವ ಸಲ್ಮಾನ್ ಖಾನ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಇದೀಗ ಹೊಸ ಬುಲೆಟ್‌ಪ್ರೂಫ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಬೆಲೆ, ವಿಶೇಷತೆ ಏನು?
- FB
- TW
- Linkdin
Follow Us
)
ಕಳೆದ ಹಲವು ವರ್ಷಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಬೆದರಿಕೆಯಲ್ಲೇ ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಆತಂಕ ಹೆಚ್ಚಾಗಿದೆ. ಹೀಗಾಗಿ ಸಲ್ಮಾನ್ ಖಾನ್ ಎಲ್ಲೇ ಹೋಗಬೇಕಿದ್ದರೂ ಬುಲೆಟ್‌ಪ್ರೂಫ್ ಕಾರಿನಲ್ಲಿ ಓಡಾಡುತ್ತಾರೆ. ಇದೀಗ ಸಲ್ಮಾನ್ ಖಾನ್ ಹೊಸ ಬುಲೆಟ್‌ಪ್ರೂಫ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅತೀ ದುಬಾರಿ ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರಿನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ Mercedes-Maybach GLS 600 SUV ಖರೀದಿಸಿದ್ದಾರೆ, ಇದರ ಬೆಲೆ ಸುಮಾರು 3.90 ಕೋಟಿ. ಇದು ಬುಲೆಟ್‌ಪ್ರೂಫ್ ಆಗಿರೋದ್ರಿಂದ ಬೆಲೆ 5 ಕೋಟಿಗಿಂತ ಹೆಚ್ಚಿರಬಹುದು.
ಸಲ್ಮಾನ್ ಖಾನ್ ಇತ್ತೀಚೆಗೆ ಖರೀದಿಸುವ ಕಾರುಗಳಿಗೆ ಬುಲೆಟ್‌ಪ್ರೂಫ್ ಕಸ್ಟಮೈಸ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಲ್ಮಾನ್ ಖಾನ್'ರ ಕಾರ್ ಕಲೆಕ್ಷನ್‌ನಲ್ಲಿ ರೇಂಜ್ ರೋವರ್ SV LWB 3.0 ಕೂಡ ಇದೆ, ಇದರ ಬೆಲೆ ಸುಮಾರು 4.4 ಕೋಟಿ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಕಳೆದ ವರ್ಷ ಸಲ್ಮಾನ್ ಖಾನ್ ಮನೆ ಬಳಿ ಶೂಟೌಟ್ ನಡೆಸಿದ್ದರು. ಸಲ್ಮಾನ್ ಖಾನ್ ಗುರಿಯಾಸಿ ದಾಳಿ ಮಾಡಲಾಗಿತ್ತು. ಈ ದಾಳಿ ಬಾಲಿವುಡ್ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಜೊತೆಗೆ ಬಿಷ್ಣೋಯ್ ಗ್ಯಾಂಗ್ ಬಹಿರಂಗ ಬೆದರಿಕೆ ಹಾಕಿತ್ತು. ಹೀಗಾಗಿ ಸಲ್ಮಾನ್ ಖಾನ್ ಓಡಾಟಕ್ಕೆ ಬುಲೆಟ್‌ಪ್ರೂಫ್ ಕಾರು ಖಲೀದಿಸಿದ್ರು. ಸಲ್ಮಾನ್ ಖಾನ್ ಬಳಿ ಬುಲೆಟ್‌ಪ್ರೂಫ್ ನಿಸ್ಸಾನ್ ಪೆಟ್ರೋಲ್ SUV ಕೂಡ ಇದೆ.
ಸಲ್ಮಾನ್ ಖಾನ್'ರ ಕಾರ್ ಕಲೆಕ್ಷನ್‌ನಲ್ಲಿ ಬುಲೆಟ್‌ಪ್ರೂಫ್ ಟೊಯೋಟಾ ಲ್ಯಾಂಡ್ ಕ್ರೂಸರ್ LC200 SUV ಕೂಡ ಇದೆ. ಸಲ್ಮಾನ್ ಖಾನ್ ಇತ್ತೀಚೆಗೆ ಬಳಸುತ್ತಿರುವ ಎಲ್ಲಾ ಕಾರುಗಳು ಬುಲೆಟ್ ಪ್ರೂಫ್ ಸುರಕ್ಷತೆ ಹೊಂದಿದೆ.
ಮೂರು ಬುಲೆಟ್‌ಪ್ರೂಫ್ ಕಾರು ಬಳಸುತ್ತಿರುವ ಸಲ್ಮಾನ್ ಖಾನ್ ಬಳಿ ಇತರ ಐಷಾರಾಮಿ ಕಾರುಗಳು ಇವೆ. ಈ ಪೈಕಿ ಸ್ಪೂರ್ಟ್ಸ್ ಕಾರು, ಸೆಡಾನ್, ಎಸ್‌ಯುವಿ ಕಾರುಗಳು ಸೇರಿವೆ. ಸಲ್ಮಾನ್ ಖಾನ್'ಗೆ ಸ್ಪೋರ್ಟ್ಸ್ ಕಾರುಗಳ ಹುಚ್ಚು ಕೂಡ ಇದೆ. ಅವರ ಕಲೆಕ್ಷನ್‌ನಲ್ಲಿ ಆಡಿ RS7 ಕೂಡ ಇದೆ.
ಸಲ್ಮಾನ್ ಖಾನ್'ರ ಅಚ್ಚುಮೆಚ್ಚಿನ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕೂಡ ಒಂದು. ಒಂದು ದಶಕಗಳ ಹಿಂದೆ ಖರೀದಿಸಿದ ಕಾರುಗಳ ಪೈಕಿ ಫ್ಯಾಂಟಮ್ ಕೂಡ ಒಂದು. ಆದರೆ ಇತ್ತೀಚಿನ ದಿನಗಳಲ್ಲಿ ಬುಲೆಟ್‌ಪ್ರೂಫ್ ಕಾರಿನಲ್ಲಿ ಓಡಾತ್ತಿರುವ ಕಾರಣ ಈ ಕಾರುಗಳನ್ನು ಹೆಚ್ಚಾಗಿ ಬಳಸುತ್ತಿಲ್ಲ.
ಸದ್ಯ ಸಲ್ಮಾನ್ ಖಾನ್ ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿಯಿದ್ದಾರೆ. ಇದರ ನಡುವೆ ಬಿಗ್ ಬಾಸ್ ರಿಯಾಲಿಟಿ ಶೋ ತಯಾರಿ ನಡೆಸುತ್ತಿದ್ದಾರೆ.