Asianet Suvarna News Asianet Suvarna News

ಫುಟ್ಬಾಲ್‌ ಪಂದ್ಯ ಡ್ರಾ ಆಗಿದ್ದಕ್ಕೆ ರೆಫ್ರಿ ಮೇಲೆ ತಂಡದ ಮಾಲಿಕ ದಾಳಿ! ವಿಡಿಯೋ ವೈರಲ್

ಅಂಕಾರಗುಕು ತಂಡದ ವಿರುದ್ಧ 96ನೇ ನಿಮಿಷದಲ್ಲಿ ಕಾಯ್ಕುರ್‌ ರಿಜೆಸ್ಪೊರ್‌ ತಂಡ ಗೋಲು ಬಾರಿಸಿ ಪಂದ್ಯ 1-1ರಿಂದ ಸಮಬ ಸಾಧಿಸಿತು. ಇದರಿಂದ ಉದ್ರಿಕ್ತಗೊಂಡ ಅಂಕಾರಗುಕು ಮಾಲಿಕ ಫಾರೂಕ್‌ ಕೊಕಾ ಮೈದಾನಕ್ಕೆ ಆಗಮಿಸಿ ರೆಫ್ರಿ ಹಲೀಲ್‌ ಉಮುತ್‌ ಮುಖಕ್ಕೆ ಗುದ್ದಿದ್ದಾರೆ.

Turkish football league suspended after Ankaragucu president punches referee kvn
Author
First Published Dec 13, 2023, 11:15 AM IST

ಅಂಕಾರ(ಡಿ.13): ಕೊನೆ ಕ್ಷಣದಲ್ಲಿ ಎದುರಾಳಿ ತಂಡ ಗೋಲು ಬಾರಿಸಿ ಪಂದ್ಯ ಡ್ರಾ ಮಾಡಿಕೊಂಡಿದ್ದಕ್ಕೆ ಕೋಪಗೊಂಡ ಮತ್ತೊಂದು ತಂಡದ ಮಾಲಿಕ, ರೆಫ್ರಿ ಮೇಲೆ ಮೈದಾನದಲ್ಲೇ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಸೋಮವಾರ ಟರ್ಕಿ ಸೂಪರ್‌ ಲೀಗ್‌ನಲ್ಲಿ ಈ ಪ್ರಸಂಗ ಜರುಗಿದೆ. 

ಅಂಕಾರಗುಕು ತಂಡದ ವಿರುದ್ಧ 96ನೇ ನಿಮಿಷದಲ್ಲಿ ಕಾಯ್ಕುರ್‌ ರಿಜೆಸ್ಪೊರ್‌ ತಂಡ ಗೋಲು ಬಾರಿಸಿ ಪಂದ್ಯ 1-1ರಿಂದ ಸಮಬ ಸಾಧಿಸಿತು. ಇದರಿಂದ ಉದ್ರಿಕ್ತಗೊಂಡ ಅಂಕಾರಗುಕು ಮಾಲಿಕ ಫಾರೂಕ್‌ ಕೊಕಾ ಮೈದಾನಕ್ಕೆ ಆಗಮಿಸಿ ರೆಫ್ರಿ ಹಲೀಲ್‌ ಉಮುತ್‌ ಮುಖಕ್ಕೆ ಗುದ್ದಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಕಾಲಿನಿಂದ ರೆಫ್ರಿಯನ್ನು ಒದ್ದಿದ್ದಾನೆ. ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಟರ್ಕಿ ಅಧ್ಯಕ್ಷ ಎರ್ದೊಗಾನ್‌ ಕೂಡಾ ಖಂಡಿಸಿದ್ದಾರೆ. ಘಟನೆ ಬಳಿಕ ಲೀಗ್‌ನ ಎಲ್ಲಾ ಪಂದ್ಯಗಳನ್ನು ಅಮಾನತುಗೊಳಿಸಲಾಗಿದೆ.

ಕಿರಿಯರ ಹಾಕಿ ವಿಶ್ವಕಪ್‌: ಸೆಮೀಸ್‌ಗೇರಿದ ಭಾರತ

ಕೌಲಾಲಂಪುರ: ಎಫ್‌ಐಎಚ್‌ ಕಿರಿಯರ ಹಾಕಿ ವಿಶ್ವಕಪ್‌ನಲ್ಲಿ 2 ಬಾರಿ ಚಾಂಪಿಯನ್‌ ಭಾರತ ಸೆಮಿಫೈನಲ್‌ ಪ್ರವೇಶಿಸಿದೆ. ನೆದರ್‌ಲೆಂಡ್ಸ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ 4-3 ಗೋಲುಗಳ ಗೆಲುವು ಲಭಿಸಿತು.

Ind vs SA: ಹರಿಣಗಳ ಹೊಡೆತಕ್ಕೆ ಬೆಚ್ಚಿದ ಟೀಂ ಇಂಡಿಯಾ..!

ಮೊದಲಾರ್ಧದಲ್ಲಿ 0-2, 3ನೇ ಕ್ವಾರ್ಟರ್‌ ಮುಕ್ತಾಯಕ್ಕೆ 2-3ರಲ್ಲಿ ಹಿನ್ನಡೆಯಲ್ಲಿದ್ದ ಭಾರತ, ಕೊನೆ ಕ್ವಾರ್ಟರ್‌ನಲ್ಲಿ ಅತ್ಯಾಕರ್ಷಕ ಆಟ ಪ್ರದರ್ಶಿಸಿ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿತು. ಆದಿತ್ಯ(34ನೇ ನಿಮಿಷ), ಅರೈಜಿತ್‌(35), ಸೌರಭ್‌ ಆನಂದ್‌(52), ಉತ್ತಮ್‌ ಸಿಂಗ್‌(57) ಭಾರತದ ಪರ ಗೋಲು ಬಾರಿಸಿದರು. ಕೊನೆ 2 ನಿಮಿಷದಲ್ಲಿ 6 ಪೆನಾಲ್ಟಿ ಕಾರ್ನರ್‌ಗಳನ್ನು ರಕ್ಷಿಸಿದ ಗೋಲ್‌ಕೀಪರ್‌, ಕರ್ನಾಟಕದ ಮೋಹಿತ್‌ ಎಚ್‌.ಎಸ್‌. ಭಾರತದ ಜಯದ ರೂವಾರಿಯಾದರು. ಕಳೆದ ಬಾರಿ 4ನೇ ಸ್ಥಾನಿಯಾಗಿದ್ದ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಡಿ.14ರಂದು ಜರ್ಮನಿ ಸವಾಲು ಎದುರಾಗಲಿದೆ.

ಪ್ಯಾರಾ ಗೇಮ್ಸ್‌: ರಾಜ್ಯಕ್ಕೆ ಬ್ಯಾಡ್ಮಿಂಟನಲ್ಲಿ 5 ಮೆಡಲ್‌

ನವದೆಹಲಿ: ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ ಕರ್ನಾಟಕ ಪ್ರಾಬಲ್ಯ ಮುಂದುವರಿಸಿದ್ದು, ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಸೇರಿ 5 ಪದಕ ಬಾಚಿಕೊಂಡಿದೆ.

ಮಹಿಳಾ ಸಿಂಗಲ್ಸ್‌ ಡಬ್ಲ್ಯುಎಚ್‌1 ವಿಭಾಗದಲ್ಲಿ ಪಲ್ಲವಿ ಚಿನ್ನಕ್ಕೆ ಕೊರಳೊಡ್ಡಿದರು. ಮಹಿಳಾ ಸಿಂಗಲ್ಸ್‌ ಡಬ್ಲ್ಯುಎಚ್‌2 ಸ್ಪರ್ಧೆಯಲ್ಲಿ ಅಮ್ಮೊ ಮೋಹನ್‌, ಪುರುಷರ ಸಿಂಗಲ್ಸ್‌ ಡಬ್ಲ್ಯುಎಚ್‌2 ವಿಭಾಗದಲ್ಲಿ ಮಂಜುನಾಥ್‌ ಬೆಳ್ಳಿ ಪದಕ ಜಯಿಸಿದರು. ಪುರುಷರ ಸಿಂಗಲ್ಸ್‌ನ ಡಬ್ಲ್ಯುಎಚ್‌1 ವಿಭಾಗದಲ್ಲಿ ಇಂದೂಧರ, ಡಬ್ಲ್ಯುಎಚ್‌2 ವಿಭಾಗದಲ್ಲಿ ಸಿದ್ದಣ್ಣ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಐಪಿಎಲ್‌ ಹರಾಜಿಗೆ ಕ್ಷಣಗಣನೆ: 333 ಮಂದಿ ಹೆಸರು ಫೈನಲ್‌..!

ಅಥ್ಲೆಟಿಕ್ಸ್‌ನಲ್ಲಿ ಮತ್ತೆ 4 ಪದಕ

ಕರ್ನಾಟಕದ ಸ್ಪರ್ಧಿಗಳು ಅಥ್ಲೆಟಿಕ್ಸ್‌ನಲ್ಲಿ ಮತ್ತೆ 4 ಪದಕ ಜಯಿಸಿದರು. ಪುರುಷರ 400 ಮೀ. ಟಿ-11 ವಿಭಾಗದಲ್ಲಿ ರವಿಕುಮಾರ್‌, 5000 ಮೀ. ಟಿ-11 ವಿಭಾಗದಲ್ಲಿ ಕೇಶವಮೂರ್ತಿ ಬೆಳ್ಳಿ ಗೆದ್ದರು. ಮಹಿಳೆಯರ ಶಾಟ್‌ಪುಟ್‌ ಎಫ್‌-33 ವಿಭಾಗದಲ್ಲಿ ಮೇಧಾ, 200 ಮೀ. ಟಿ-11 ವಿಭಾಗದಲ್ಲಿ ಜ್ಯೋತಿ ಕಂಚು ಪಡೆದರು.

ಬೆಂಗಾಲ್‌ ಓಟಕ್ಕಿಲ್ಲ ಬ್ರೇಕ್!

ಬೆಂಗಳೂರು: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಾಲ್ ವಾರಿಯರ್ಸ್ ಪ್ರಾಬಲ್ಯ ಮುಂದುವರಿಸಿದ್ದು, ಮಂಗಳವಾರ ಪಾಟ್ನಾ ಪೈರೇಟ್ಸ್ ವಿರುದ್ಧ 60-42 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. ಇದು ಟೂರ್ನಿಯಲ್ಲಿ ಬೆಂಗಾಲ್‌ಗೆ 4 ಪಂದ್ಯಗಳಲ್ಲಿ 3ನೇ ಜಯ. ಮತ್ತೊಂದು ಪಂದ್ಯವನ್ನು ಟೈ ಮಾಡಿಕೊಂಡಿದ್ದ ಬೆಂಗಾಲ್, ಒಟ್ಟು 18 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ. ಅತ್ತ ಪಾಟ್ನಾಗಿದು ಈ ಆವೃತ್ತಿಯಲ್ಲಿ ಮೊದಲ ಸೋಲು.

ಆರಂಭದ ಕೆಲ ನಿಮಿಷ ಪಾಟ್ನಾ ಉತ್ತಮ ಪ್ರದರ್ಶನ ತೋರಿತಾದರೂ, ಬಳಿಕ ಬೆಂಗಾಲ್‌ನ ಪ್ರಾಬಲ್ಯದ ಮುಂದೆ ಮಂಕಾಯಿತು. ಮೊದಲಾರ್ಧಕ್ಕೆ 27-16ರ ಮುನ್ನಡೆ ಪಡೆದ ವಾರಿಯರ್ಸ್ ಕೊನೆವರೆಗೂ ಪಾಟ್ನಾ ಮೇಲೆ ಸವಾರಿ ಮಾಡಿ, ಈ ಬಾರಿ ಟೂರ್ನಿಯ ಗರಿಷ್ಠ ಅಂಕದ ಸಾಧನೆ ಮಾಡಿತು. ಬೆಂಗಾಲ್‌ನ ರೈಡರ್
ಗಳಾದ ಮಣೀಂದರ್ (15), ನಿತಿನ್ (14), ಶ್ರೀಕಾಂತ್ (12) ಸೂಪರ್- 10 ಸಾಧಿಸಿದರು. ಸಚಿನ್ (14), ಸುಧಾಕರ್ (14)ರ ಆಕರ್ಷಕ ರೈಡಿಂಗ್ ಪಾಟ್ನಾಕ್ಕೆ ಗೆಲುವು ತಂದುಕೊಡಲಿಲ್ಲ
 

Follow Us:
Download App:
  • android
  • ios