Asianet Suvarna News Asianet Suvarna News

Fact Check: ಕರ್ನಾಟಕದ ಮಕ್ಕಳು ಸನಾತನ ಧರ್ಮ ರಕ್ಷಣೆಗೆ ಮುಂದಾಗಿದ್ದಾರೆ, ವೈರಲ್ ಫೋಟೋ ಉತ್ತರಾಂಚ ಘಟಿಕೋತ್ಸವದ್ದು!

ಹಿಜಾಬ್ ಗದ್ದಲದ  ಮಧ್ಯೆ ಸೋಷಿಯಲ್‌ ಮೀಡಿಯಾಗಳಲ್ಲಿ ವಿದ್ಯಾರ್ಥಿನಿಯರು ಕೇಸರಿ ಶಾಲು ಹೊದ್ದಿರುವ ಫೋಟೋವೊಂದು ವೈರಲ್‌ ಆಗುತ್ತಿದ್ದು ಕರ್ನಾಟಕದ ವಿದ್ಯಾರ್ಥಿನಿಯರು ಧರ್ಮ ರಕ್ಷಣೆಗಾಗಿ  ಕಟಿಬದ್ಧರಾಗಿದ್ದಾರೆ ಎಂಬ ಸಂದೇಶದೊಂದಿಗೆ ಪೋಸ್ಟ್‌ ಮಾಡಲಾಗಿದೆ. ಆದರಿದು ಉತ್ತರಾಂಚಲ ವಿವಿಯ ಘಟಿಕೋತ್ಸವದ ಫೋಟೋ. 

Amid Karnataka hijab row old photo of students in saffron shawls from Uttaranchal University Circulated  with false claim mnj
Author
Bengaluru, First Published Feb 18, 2022, 1:34 PM IST

Fact Check: ಕರ್ನಾಟಕದ ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್‌ (Hijab Row) ಕಿಡಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್‌ ಗದ್ದಲ ಮುಂದುವರಿದಿದ್ದು, ಕಗ್ಗಂಟಾಗಿ ಪರಿಣಮಿಸಿದೆ. ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಸ್ತೃತ ಪೀಠ ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹಿಜಾಬ್‌ -ಕೇಸರಿ ಕುರಿತಾದ ಸಾಕಷ್ಟು ಸಂದೇಶಗಳು ಹರಿದಾಡುತ್ತಿವೆ. ಈಗ ಸೋಷಿಯಲ್‌ ಮೀಡಿಯಾಗಳಲ್ಲಿ (Social Media) ವಿದ್ಯಾರ್ಥಿನಿಯರು ಕೇಸರಿ ಶಾಲು ಹೊದ್ದಿರುವ (Saffron Shawl) ಫೋಟೋವೊಂದು ವೈರಲ್‌ ಆಗುತ್ತಿದ್ದು ಕರ್ನಾಟಕದ ವಿದ್ಯಾರ್ಥಿನಿಯರು ಧರ್ಮ ರಕ್ಷಣೆಗಾಗಿ  ಕಟಿಬದ್ಧರಾಗಿದ್ದಾರೆ ಎಂಬ ಸಂದೇಶದೊಂದಿಗೆ ಪೋಸ್ಟ್‌ ಮಾಡಲಾಗಿದೆ.  

Claim: ಫೇಸ್‌ಬುಕ್‌ನಲ್ಲಿ ವಿದ್ಯಾರ್ಥಿನಿಯರು ಕೇಸರಿ ಶಾಲು ಹೊದ್ದಿರುವ ಫೋಟೋ ಪೋಸ್ಟ್ ಮಾಡಿ, "ಈಗ ಕರ್ನಾಟಕದ ಮಕ್ಕಳನ್ನು ನೋಡಿದರೆ, ಸನಾತರ ಧರ್ಮ ರಕ್ಷಣೆಗಾಗಿ ಹೊಸ ಸಸಿಗಳು ಚಿಗುರುತ್ತಿವೆ ಎಂದೆನಿಸುತ್ತಿದೆ. ಧರ್ಮ ರಕ್ಷಣೆಗಾಗಿ ಈ ಮಕ್ಕಳು ನಮಗಿಂತಲೂ ಕಟಿಬದ್ಧರಾಗಿದ್ದಾರೆ. ಈಗ ಮಕ್ಕಳನ್ನು ದೇಶವನ್ನು ರಕ್ಷಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಜೈ ಶ್ರೀ ರಾಮ್ ಜೈ ಜೈ ಸನಾತನ ಧರ್ಮ" ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಇದೀಗ ಹಿಜಾಬ್ ಗೊಂದಲ ಇರುವ ಸಂದರ್ಭದಲ್ಲಿಯೇ ಈ ಫೋಟೋ ಹೆಚ್ಚು ವೈರಲ್ ಆಗುತ್ತಿದೆ. 

Amid Karnataka hijab row old photo of students in saffron shawls from Uttaranchal University Circulated  with false claim mnj


ಕರ್ನಾಟಕದ ಹಿಜಾಬ್‌ ಗದ್ದಲದ ನಡುವೆ ಹಲವಾರು ಹಳೆ ವಿಡಿಯೋಗಳು ಹಾಗೂ ಇಂಥಹ ಕೆಲವೊಂದು ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿವೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಮತ್ತು ಇಲ್ಲಿ ನೋಡಬಹುದು. 

Amid Karnataka hijab row old photo of students in saffron shawls from Uttaranchal University Circulated  with false claim mnj


ಆದರೆ ಈ ಚಿತ್ರಗಳು  2020ರಲ್ಲಿ ಉತ್ತರಾಂಚಲ ವಿಶ್ವವಿದ್ಯಾಲಯದ ಘಟಿಕೋತ್ಸವದ ಫೋಟೋಗಳಾಗಿದ್ದು ಇವುಗಳನ್ನೇ ಬಳಸಿ ಕರ್ನಾಟಕದ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಧರ್ಮ ರಕ್ಷಣೆಗಾಗಿ ಕಟಿಬದ್ಧರಾಗಿದ್ದಾರೆ ಎಂಬ ತಪ್ಪು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. 

Fact Check: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಮೂಲಕ ಚೆಕ್ ಮಾಡಿದಾಗ ಸುಲಭವಾಗಿ ಲಭ್ಯವಾಗುತ್ತದೆ. ಇದರಲ್ಲಿ ಮಕ್ಕಳು ಕೇಸರಿ ಶಾಲು ಹೊದ್ದು, ಫೆಬ್ರವರಿ 29, 2020ರಲ್ಲಿ ಉತ್ತರಾಂಚಲ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ (Uttaranchal University) ಪಾಲ್ಗೊಂಡಿರುವ ಸಾಕಷ್ಟು ವೀಡಿಯೋಗಳು ಹಾಗೂ ಫೋಟೋಗಳು ಲಭ್ಯವಾಗುತ್ತವೆ. ಅಲ್ಲದೇ ವಿವಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯ್ಲಲಿಯೂ ವಿವಿ ಹೊಸ ವಸ್ತ್ರ ಸಂಹಿತೆಯೊಂದಿಗೆ ಘಟಿಕೋತ್ಸವ ಮಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅದನ್ನು ಇಲ್ಲಿ ನೋಡಬಹುದು. 

ಇನ್ನು ಮತ್ತೊಮ್ಮೆ ಇದನ್ನು ಪರೀಕ್ಷಿಸಲು  ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ರಾಕೇಶ್ ಕಷ್ಣ ಎಂಬುವವರ ಈ ಟ್ವೀಟ್ ಲಭ್ಯವಾಗುತ್ತದೆ. ರಾಕೇಶ್ ಕಷ್ಣ ಎಂಬುವರು ಮಾರ್ಚ್ 18, 2021ರಂದೇ ಮಾಡಿರುವ ಟ್ವೀಟಿನಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಉತ್ತರಾಖಾಂಡದ ಉತ್ತರಾಂಚಲ ವಿಶ್ವವಿದ್ಯಾಲಯದಲ್ಲಿ ಬ್ರಿಟಿಷ್ ಕಾಲದ ಕಪ್ಪು ಕೋಟ್, ಟೋಪಿಗೆ ವಿದಾಯ ಹೇಳಿದ್ದು, ವಿದ್ಯಾರ್ಥಿಗಳು ಕೇಸರಿ ಶಾಲು ಹಾಗೂ ಕುರ್ತಾ ಧರಿಸಿ ಗ್ರಾಜುಯೇಷನ್ ಡೇಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗುತ್ತದೆ. ಆ ಮೂಲಕ ಈ ಪೋಟೋ ತುಂಬಾ ಹಳೆಯದ್ದು ಮತ್ತು ಕರ್ನಾಟಕದ್ದು ಅಲ್ಲ ಎಂಬುವುದು ಸ್ಪಷ್ಟವಾಗಿ ವೇದ್ಯವಾಗುತ್ತದೆ. 

 

 

ಇನ್ನು ಈ ಗೂಗಲ್ ಡ್ರೈವ್ ಲಿಂಕಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿರುವ ವಿದ್ಯಾರ್ಥಿನಿ ಪದವಿ  ಪಡೆಯುತ್ತಿರುವುದನ್ನು ಕಾಣಬಹುದು. ‌ಅಲ್ಲದೇ ವಿದ್ಯಾರ್ಥಿಗಳು ಕೇಸರಿ ಶಾಲಿನೊಂದಿಗೆ ನೀಲಿ ಮತ್ತು ನೇರಳೆ ಸೇರಿದಂತೆ ಇತರ ಬಣ್ಣದ ಶಾಲುಗಳನ್ನು ಧರಿಸಿರುವುದು ನೋಡಬಹುದು. ಹಾಗಾಗಿ ಈ ಪೋಟೋ ಉತ್ತರಾಂಚಲ ವಿವಿಯದ್ದೇ ಎಂಬುದಾಗಿ ತೀರ್ಮಾನಕ್ಕೆ ಬರಬಹುದು.

Amid Karnataka hijab row old photo of students in saffron shawls from Uttaranchal University Circulated  with false claim mnj

ಈ ಮೂಲಕ ಈ ಫೋಟೋ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಫೋಟೋ ಕ್ಲಿಕ್ಕಿಸಿದ್ದು ಹೌದಾದರೂ, ಇದರೊಂದಿಗೆ ಹರಿದಾಡುತ್ತಿರುವ ಕ್ಲೈಮ್ ತಪ್ಪೆಂದು ಸುಲಭವಾಗಿ ನಿರ್ಣಯಕ್ಕೆ ಬರಬಹುದು. ಹೀಗಾಗಿ ಉತ್ತರಾಂಚಲ ವಿಶ್ವವಿದ್ಯಾಲಯದ ಘಟಿಕೋತ್ಸವದ ಫೋಟೋಗಳನ್ನು ಬಳಸಿ ಕರ್ನಾಟಕದ ಹಿಜಾಬ್‌ ವಿವಾದದ ಮಧ್ಯೆ ವಿದ್ಯಾರ್ಥಿನಿಯರು ಕೇಸರಿ ಶಾಲು ತೊಟ್ಟು ಸನಾತನ ಧರ್ಮ ರಕ್ಷಣೆಗೆ ಮುಂದಾಗಿದ್ದಾರೆ ಎಂಬ ತಪ್ಪು ಕ್ಲೇಮ್ ನೊಂದಿಗೆ ಈ ಫೋಟೋ ಹರಿದಾಡುತ್ತಿದೆ. ಕೇವಲ ಉತ್ತರಾಂಚಲ ವಿಶ್ವವಿದ್ಯಾಲಯದ ಮಾತ್ರವಲ್ಲ, ರಾಯ್ ವಿವಿ ಸೇರಿದಂತೆ ದೇಶ ವಿವಿಧ ಶಿಕ್ಷಣ ಸಂಸ್ಥೆಗಳೂ ಬ್ರಿಟಿಷ್ ಸಂಸ್ಕೃತಿಗೆ ವಿದಾಯ ಹೇಳಿ ಭಾರತೀಯ ಸಂಸ್ಕೃತಿಯನ್ನು ಘಟಿಕೋತ್ಸವ ಸಂದರ್ಭದಲ್ಲಿ ಅಳವಡಿಸಿಕೊಂಡಿದ್ದನ್ನು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿವೆ. 

Follow Us:
Download App:
  • android
  • ios