ಹಿಂದಿಯ ಅನುಪಮಾ ಸೀರಿಯಲ್ ಸೆಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ್ದು, ಸಂಪೂರ್ಣ ಸೆಟ್ ಧಗಧಗಿಸಿ ಉರಿದಿದೆ. ಆಗಿದ್ದೇನು?
ಹಿಂದಿಯ ಖ್ಯಾತ ಸೀರಿಯಲ್ ಅನುಪಮಾ ಸೀರಿಯಲ್ ಸೆಟ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಆಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈ ಫಿಲ್ಮ್ ಸಿಟಿಯಲ್ಲಿರುವ ಈ ಸೆಟ್‌ನಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ಸೆಟ್ ಧಗಧಗಿಸಿ ಉರಿದಿದೆ. ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿವೆ. ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ ಸಂಘ (ಎಐಸಿಡಬ್ಲ್ಯೂಎ) ಒತ್ತಾಯಿಸಿದೆ. ಬೆಂಕಿಯಿಂದಾಗಿ ಸೆಟ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಬೆಳಿಗ್ಗೆ 7:00 ಗಂಟೆಗೆ ಆರಂಭವಾಗಬೇಕಿದ್ದ ಚಿತ್ರೀಕರಣಕ್ಕೆ ಕೇವಲ ಎರಡು ಗಂಟೆಗಳ ಮೊದಲು ಬೆಂಕಿ ಕಾಣಿಸಿಕೊಂಡಿದೆ. ದಿನದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಅಪಘಾತದ ಸಮಯದಲ್ಲಿ ಹಲವಾರು ಕಾರ್ಮಿಕರು ಮತ್ತು ಸಿಬ್ಬಂದಿ ಸೆಟ್‌ನಲ್ಲಿ ಹಾಜರಿದ್ದರು. ಆದಾಗ್ಯೂ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಈ ಘಟನೆಯು ಇಡೀ ಮನರಂಜನಾ ಉದ್ಯಮವನ್ನು ಹಾಗೂ ಜನರನ್ನು ಆಘಾತಗೊಳಿಸಿದೆ. ಸ್ಥಳೀಯರು ಮತ್ತು ಅಭಿಮಾನಿಗಳು ಸೆಟ್‌ನ ಹಿಂದೆ ಕೆಲಸ ಮಾಡುವ ನಟರು ಮತ್ತು ಸದಸ್ಯರ ಯೋಗಕ್ಷೇಮ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. AICWA ಅಧ್ಯಕ್ಷ ಸುರೇಶ್ ಶ್ಯಾಮ್‌ಲಾಲ್ ಗುಪ್ತಾ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. AICWA ಇಂತಹ ವಿಷಯಗಳನ್ನು ರಾಜ್ಯ ವಿಧಾನಸಭೆಗೆ ಕೊಂಡೊಯ್ಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಅಗ್ನಿ ಅವಘಡಗಳು ವರದಿಯಾಗಿವೆ. ಆದರೆ ಸರ್ಕಾರ ನಿರ್ಣಾಯಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ" ಎಂದು ಹೇಳಿದ್ದಾರೆ. "ಇಲ್ಲಿಯವರೆಗೆ, ನಿರ್ಲಕ್ಷ್ಯ ವಹಿಸಿದ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು ಅಥವಾ ಟಿವಿ ಚಾನೆಲ್‌ಗಳ ವಿರುದ್ಧ ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಯಾವುದೇ ಕಡ್ಡಾಯ ಅಗ್ನಿಶಾಮಕ ಲೆಕ್ಕಪರಿಶೋಧನೆಗಳನ್ನು ಜಾರಿಗೊಳಿಸಲಾಗಿಲ್ಲ ಮತ್ತು ಮಹಾರಾಷ್ಟ್ರದ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದಾದ್ಯಂತ ನಿಜವಾದ ಅಗ್ನಿ ಸುರಕ್ಷತಾ ವ್ಯವಸ್ಥೆಗಳು ಜಾರಿಯಲ್ಲಿಲ್ಲ" ಎಂದು ಅವರು ಆರೋಪಿಸಿದ್ದಾರೆ.
ಅದೇ ಇನ್ನೊಂದೆಡೆ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಅಧ್ಯಕ್ಷ ಬಿ.ಎನ್. ತಿವಾರಿ ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲವೂ ವಿಮಾ ಕ್ಲೇಮ್‌ಗಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 'ಪ್ರತಿ ಬಾರಿ ಸೆಟ್ ಸುಟ್ಟುಹೋದಾಗ ಮತ್ತು ನಂತರ ವಿಮಾ ಕ್ಲೇಮ್ ತೆಗೆದುಕೊಳ್ಳಲಾಗುತ್ತದೆ. ಇದು ಈಗ ಸಾಮಾನ್ಯ ವಿಷಯವಾಗಿದೆ. ಇಂತಹ ಘಟನೆಗಳು ಅಪಘಾತಕ್ಕಿಂತ ಹೆಚ್ಚು ಯೋಜಿತವಾಗಿ ಕಾಣುತ್ತವೆ. ಫಿಲ್ಮ್ ಸಿಟಿಯಲ್ಲಿ ಯಾವುದೇ ಅಗ್ನಿ ಸುರಕ್ಷತಾ ಲೆಕ್ಕಪರಿಶೋಧನೆ ಇಲ್ಲ. ಸಿಲಿಂಡರ್‌ಗಳನ್ನು ಇಡಲಾಗುತ್ತದೆ, ಆದರೆ ಅವುಗಳ ಡೆಡ್‌ಲೈನ್ ದಿನಾಂಕ ಏನೆಂದು ಯಾರೂ ನೋಡುವುದಿಲ್ಲ. ಬೆಂಕಿಯನ್ನು ನಂದಿಸುವ ವ್ಯವಸ್ಥೆಗಳು ಪ್ರದರ್ಶನಕ್ಕಾಗಿ ಮಾತ್ರ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಈ ವಿಷಯದ ಬಗ್ಗೆ, ಬಿ.ಎನ್. ತಿವಾರಿ ಅವರು, ಬೆಂಕಿ ದಕ್ಷಿಣ ಭಾಗದಿಂದ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ, ಆದರೆ ವಾಸ್ತವದಲ್ಲಿ ಯಾರಿಗೂ ಇನ್ನೂ ಸತ್ಯ ತಿಳಿದಿಲ್ಲ ಎಂದು ಹೇಳಿದರು. ಯಾವುದೇ ವರದಿ ಸ್ಪಷ್ಟವಾಗಿಲ್ಲ. ಈ ಬಗ್ಗೆ ನಾವು ಮೌನವಾಗಿರಲು ಸಾಧ್ಯವಿಲ್ಲ. ದೊಡ್ಡ ನಿರ್ಮಾಪಕರು ಮತ್ತು ಚಲನಚಿತ್ರ ನಿರ್ಮಾಪಕರನ್ನು ನೇರವಾಗಿ ಆರೋಪಿಸಿದ ಅವರು, 'ಸತ್ಯವೆಂದರೆ ಸಂಜಯ್ ಲೀಲಾ ಬನ್ಸಾಲಿಯಂತಹ ನಿರ್ದೇಶಕರು ಸಹ ವಿಮಾ ಕ್ಲೇಮ್‌ಗಾಗಿ ಸೆಟ್‌ಗೆ ಬೆಂಕಿ ಹಚ್ಚಿದ್ದಾರೆ. ವಾಸ್ತವವಾಗಿ, ಇದು ಈಗ ನಿಲ್ಲಬೇಕು. ಇಲ್ಲದಿದ್ದರೆ ಪ್ರತಿಯೊಂದು ಸೆಟ್ ಒಂದು ದಿನ ವಿಮೆಗೆ ನೆಪವಾಗುತ್ತದೆ. ಈ ವಿಷಯದಲ್ಲಿ ಒಕ್ಕೂಟವು ಈಗ ನೇರ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.