ಸ್ನೇಹಿತೆ ವಾಣಿಯ ಜೊತೆಗೆ ಪದೇ ಪದೇ ರೀಲ್ಸ್​ ಮಾಡುತ್ತಿರುವ ನಿವೇದಿತಾ ಗೌಡ ಈಗ ಆಕೆಯ ಜೊತೆಗಿನ ಸಂಬಂಧದ ಬಗ್ಗೆ ಬರೆದು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಏನಿದು? 

ಇಷ್ಟು ದಿನ ಒಂಟಿಯಾಗಿಯೋ ಅಥವಾ ಆಗ ಪತಿಯಾಗಿದ್ದ ಚಂದನ್​ ಶೆಟ್ಟಿ ಜೊತೆಗೋ ರೀಲ್ಸ್​ ಮಾಡುತ್ತಿದ್ದ ನಿವೇದಿತಾ ಗೌಡ ಇದೀಗ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್​ ಮಾಡುತ್ತಿದ್ದಾರೆ. ಹಲವು ರೀಲ್ಸ್​ಗಳಲ್ಲಿ ಇಬ್ಬರೂ ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಆದರೆ ಪ್ರತಿಬಾರಿ ಇವರ ಈ ಹೊಸ ಗೆಳತಿಯ ಬಗ್ಗೆ ಫ್ಯಾನ್ಸ್​ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾರೆ. ವಾಣಿ ಅವರು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದಾಗಲೇ ಹಲವಾರು ರೀಲ್ಸ್​ ಮಾಡಿ ಶೇರ್​ ಮಾಡಿದ್ದಾರೆ. ಇದೀಗ ಅವರು ನಿವೇದಿತಾ ಜೊತೆ ರೀಲ್ಸ್​ ಮಾಡುವುದು ಹೆಚ್ಚಾಗುತ್ತಿದೆ.

ಇದೀಗ ವಾಣಿ ಅವರ ಹುಟ್ಟುಹಬ್ಬಕ್ಕೆ ಅವರಿಗೆ ವಿಶ್​ ಮಾಡಿದ್ದಾರೆ ನಿವೇದಿತಾ. ಇದರಲ್ಲಿ ವಾಣಿ ನಿವೇದಿತಾಗೆ ಹೂವು ಕೊಟ್ಟು ಪ್ರಪೋಸ್​ ಮಾಡಿದ್ದರೆ, ನಿವೇದಿತಾ ಶೀರ್ಷಿಕೆಯಲ್ಲಿ ಇಡೀ ಜಗತ್ತಿನಲ್ಲಿ ನನ್ನ ಆತ್ಮೀಯ ಗೆಳೆತಿಗೆ ಹುಟ್ಟುಹಬ್ಬದ ಶುಭಾಶಯಗಳು.... ನೀನು ತುಂಬಾ ಸುಂದರವಾಗಿದ್ದೀಯ, ಆದರೆ ಅದೇ ಸಮಯದಲ್ಲಿ ತುಂಬಾ ಮೂರ್ಖನಾಗಿದ್ದೀಯ... ನಿನ್ನೊಂದಿಗೆ ನಾನು ಯಾವಾಗಲೂ ನಗುತ್ತಿದ್ದೇನೆ... ನೀನು ನನ್ನ ಹೆಂಡತಿಯಂತೆ... ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ಹಾಗೂ ನಿವೇದಿತಾ ಬರೆದಿರುವ ಶೀರ್ಷಿಕೆ ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಅಷ್ಟಕ್ಕೂ ನಿವೇದಿತಾ ಗೌಡ ಅವರ ಅರ್ಥ, ತಾವಿಬ್ಬರೂ ಎಷ್ಟು ಸ್ನೇಹಿತೆಯರು ಎನ್ನುವುದು ಆಗಿದೆಯಷ್ಟೇ. ಇದರಲ್ಲಿ ನಿವೇದಿತಾ ದೂರ ಹೋದರೆ, ತಾವು ಹೇಗೆ ಆಕೆಯನ್ನು ಮಿಸ್​ ಮಾಡಿಕೊಳ್ಳುತ್ತೇವೆ ಎಂದು ವಾಣಿ ಕಣ್ಣೀರಿನ ಮೂಲಕ ತಿಳಿಸಿದ್ದರೆ, ಇವರಿಬ್ಬರೂ ಬೇರೆ ಬೇರೆ ಸಮಯದಲ್ಲಿ ಖುಷಿಯಾಗಿ ಇರುವ ಕ್ಷಣಗಳನ್ನೂ ಸೆರೆ ಹಿಡಿಯಲಾಗಿದೆ. ಆದರೆ ಪ್ರಪೋಸ್​ ಮಾಡಿರುವುದು, ಹೆಂಡತಿ ಎಂದೆಲ್ಲಾ ಹೇಳಿರುವುದು ಜೊತೆಗೆ ಇಬ್ಬರೂ ಅಸಭ್ಯವಾಗಿ ವರ್ತಿಸುವುದನ್ನು ನೋಡಿರುವ ನೆಟ್ಟಿಗರು ಎಂಥ ಕಾಲ ಬಂತಪ್ಪಾ ಎನ್ನುತ್ತಿದ್ದಾರೆ. 

ಅಷ್ಟಕ್ಕೂ, ವಿಚ್ಛೇದನದ ಬಳಿಕ, ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​ ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ.

ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಈ ಸ್ನೇಹಿತೆಯ ಜೊತೆಗಿನ ರೀಲ್ಸ್​ನಲ್ಲಿ ಕೆಲವೊಮ್ಮ ಕಮೆಂಟ್ಸ್​ ಸೆಕ್ಷನ್​ ಆಫ್​ ಮಾಡೋದು ಎಂದು ನೆಟ್ಟಿಗರನ್ನು ಚಿಂತೆಗೀಡು ಮಾಡುತ್ತಿದೆ.

 

View post on Instagram