Asianet Suvarna News Asianet Suvarna News

T20 World Cup: ರಾಷ್ಟ್ರೀಯ ತಂಡಕ್ಕೆ ಮೊದಲ ಆದ್ಯತೆ ನೀಡಿ : ಕಪೀಲ್‌ ದೇವ್!

*ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಆಟಗಾರರು ಆದ್ಯತೆ ನೀಡಿದ್ದಾರೆ
*ಸರಿಯಾಗಿ ವೇಳಾಪಟ್ಟಿ ಯೋಜಿಸುವುದು ಬಿಸಿಸಿಐ ಜವಾಬ್ದಾರಿ
*ಈಗ ಮಾಡಿದ ತಪ್ಪುಗಳನ್ನು ಪುನರಾವರ್ತಿಸಬೇಡಿ : Kapil Dev

national team should be given first preference said Indian former captain Kapil dev mnj
Author
Bengaluru, First Published Nov 8, 2021, 8:42 PM IST

ನವದೆಹಲಿ(ನ. 8) : ಟಿ20 ವಿಶ್ವಕಪ್‌ನಿಂದc(T20 World Cup) ಲೀಗ್‌ ಹಂತದಲ್ಲೆ ಹೊರಹೋಗಿರುವ  ಟೀಂ ಇಂಡಿಯಾ (Team India) ಬಗ್ಗೆ ಮಾತನಾಡಿದ ಭಾರತೀಯ ಕ್ರಿಕೆಟ್‌ ತಂಡದ  ಮಾಜಿ ನಾಯಕ ಕಪಿಲ್ ದೇವ್ (Kapil Dev)  "ದೇಶದ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕಿಂತ ಹಣದ ಅಬ್ಬರ ಹೆಚ್ಚಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (IPL) ಆದ್ಯತೆ ನೀಡಿದ್ದಾರೆ  ಎಂದು ಹೇಳಿದ್ದಾರೆ. "ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್ ಆಡಲು ಆದ್ಯತೆ ನೀಡಿದಾಗ, ನಾವು ಏನು ಹೇಳಬೇಕು? ಪ್ರತಿಯೊಬ್ಬ ಆಟಗಾರರು ತಮ್ಮ ದೇಶಕ್ಕಾಗಿ ಆಡುವಾಗ ಹೆಮ್ಮೆಪಡಬೇಕು ಎಂದು ನಾನು ನಂಬುತ್ತೇನೆ"  ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಪೀಲ್‌ ದೇವ್‌ ಹೇಳಿದ್ದಾರೆ.

ಕೊಹ್ಲಿ, ರವಿಶಾಸ್ತ್ರಿ ಸುದೀರ್ಘ ಜತೆಯಾಟಕ್ಕೆ ತೆರೆ : ಉತ್ತಮ ವಿದಾಯ ಸಿಗಲಿ ಎಂದ ವಾಸಿಂ ಅಕ್ರಮ್!

"ನಿಮ್ಮ ರಾಷ್ಟ್ರೀಯ ತಂಡಕ್ಕೆ ನೀವು ಮೊದಲ ಆದ್ಯತೆ ನೀಡಬೇಕು, ಅದಾದ ನಂತರ  ಫ್ರಾಂಚೈಸ್ ಅಥವಾ ಇತರ ಯಾವುದೇ ತಂಡಕ್ಕೆ ನೀವು ಆದ್ಯತೆ ನೀಡಬೇಕು ಎಂದು ನಾನು ನಂಬುತ್ತೇನೆ." ಫ್ರಾಂಚೈಸಿಗಳಿಗೆ (Franchise) ಕ್ರಿಕೆಟ್ ಆಡಬೇಡಿ ಎಂದು ನಾನು ಹೇಳುತ್ತಿಲ್ಲ ಆದರೆ ಆಟಗಾರರ ಭವಿಷ್ಯಕ್ಕಾಗಿ ಅವರ ಕ್ರಿಕೆಟ್ ವೇಳಾಪಟ್ಟಿಯನ್ನು ಸರಿಯಾಗಿ ಯೋಜಿಸುವುದು ಈಗ ಬಿಸಿಸಿಐ (BCCI) ಜವಾಬ್ದಾರಿಯಾಗಿದೆ. ಈ ಸೋಲಿನಿಂದ ನಾವು ಕಲಿಯುವುದು ಏನೆಂದರೆ, ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು. ಇದು ದೊಡ್ಡ ಪಾಠ ಎಂದು ಕಪೀಲ್‌ ದೇವ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ(Team India) ಗೆಲುವಿನ ಹಳಿ ಬಂದು ಅಬ್ಬರಿಸಲು ಆರಂಭಿಸಿದಾಗಲೇ ಟೂರ್ನಿಯಿಂದಲೇ ಹೊರಬಿದ್ದಿದೆ. ಇದಕ್ಕೆ ಕಾರಣ ಆರಂಭಿಕ ಎರಡು ಪಂದ್ಯದ ಸೋಲು. ಹೀಗಾಗಿ ಇತರ ತಂಡದ ಫಲಿತಾಂಶದ ಮೇಲೆ ಟೀಂ ಇಂಡಿಯಾ ಅವಲಂಬಿತವಾಗಿತ್ತು. ಆದರೆ ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವಿನ ಮೂಲಕ ಟೀಂ ಇಂಡಿಯಾ ಹೊರಬಿದ್ದಿದೆ. 2012ರ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಕೌಟ್ ಹಂತ ಪ್ರವೇಶಿಸದೇ ಹೊರಬಿದ್ದ ಅಪಖ್ಯಾತಿಗೆ ಗುರಿಯಾಗಿದೆ.ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನವನ್ನು ಸೋಲಿಸಿ ಗ್ರೂಪ್ 2 ರಿಂದ ಎರಡನೇ ಸೆಮಿಫೈನಲ್ ಸ್ಥಾನವನ್ನು ಕಾಯ್ದಿರಿಸಿದ. ಈ ಮೂಲಕ ಭಾರತದ ಸೆಮಿಪೈನಲ್‌ ತಲುಪುವ ಬಾಗಿಲು ಮುಚ್ಚಿದಂತಾಗಿದೆ.

T20 World Cup 2021| ಪಂದ್ಯದ ಜೊತೆ ಹೃದಯ ಗೆದ್ದ ಟೀಂ ಇಂಡಿಯಾ, ಸೋತ ತಂಡಕ್ಕೆ ಪ್ರೋತ್ಸಾಹ!

ಆಫ್ಘಾನಿಸ್ತಾನ(Afghanistan) ಹಾಗೂ ನ್ಯೂಜಿಲೆಂಡ್(New zealand) ನಡುವಿನ ಪಂದ್ಯದ ಮೇಲೆ ಟೀಂ ಇಂಡಿಯಾ ಭವಿಷ್ಯ ನಿಂತಿತ್ತು. ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ಮುಗ್ಗರಿಸಿತು. 8 ವಿಕೆಟ್ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ಸೆಮಿಫೈನಲ್(Semifinal) ಪ್ರವೇಶಿಸಿತು. ಆದರೆ ನ್ಯೂಜಿಲೆಂಡ್ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಪ್ರವೇಶದ ಕೊನೆಯ ಆಸೆಯೊಂದು ನುಚ್ಚು ನೂರಾಯಿತು.

ಭಾರತ ನಮೀಬಿಯಾ ತಂಡಗಳು ಮೊದಲ ಮುಖಾಮುಖಿ!

ಟಿ20 ಮಾದರಿಯಲ್ಲಿ ಉಭಯ ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಈ ಪಂದ್ಯದಲ್ಲಿ ಗೆದ್ದರೆ ಗ್ರೂಪ್‌-2ರಲ್ಲಿ ತೃತೀಯ ಸ್ಥಾನಿಯಾಗಿ ಭಾರತ ತನ್ನ ಈ ಬಾರಿಯ ಟಿ20 ವಿಶ್ವಕಪ್‌ ಅಭಿಯಾನವನ್ನು ಮುಕ್ತಾಯಗೊಳಿಸಲಿದೆ. ಅತ್ತ, ತಾನಾಡಿದ 4ರಲ್ಲಿ ಮೂರು ಪಂದ್ಯಗಳಲ್ಲಿ ಸೋತಿರುವ ನಮೀಬಿಯಾ (Namibia) ಒಂದು ವೇಳೆ ಗೆದ್ದದ್ದೇ ಆದಲ್ಲಿ, ಭಾರತ ಗ್ರೂಪ್‌-2ರಲ್ಲಿ 4ನೇ ಸ್ಥಾನಿಯಾಗುವ ಅಪಾಯವೂ ಇದೆ.

ಆದರೆ, ಆಫ್ಘನ್‌ ಹಾಗೂ ಸ್ಕಾಟ್ಲೆಂಡ್‌ ವಿರುದ್ಧ ಭಾರೀ ಲಯಕ್ಕೆ ಬಂದಂತೆ ಕಂಡು ಬಂದಿದ್ದ ಭಾರತೀಯ ಆಟಗಾರರು ನಮೀಬಿಯಾ ವಿರುದ್ಧ ಆಡಲಿರುವ ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಟಿ20 ವಿಶ್ವಕಪ್‌ ಅಭಿಯಾನ ಮುಗಿಸಲು ಕಾತರಿಸುತ್ತಿದ್ದಾರೆ. ಈ ಪಂದ್ಯದಲ್ಲೂ ಭಾರತೀಯ ಬ್ಯಾಟರ್‌ಗಳಿಂದ ಸ್ಫೋಟಕ ಆಟ ನಿರೀಕ್ಷಿಸಲಾಗಿದೆ. 4 ವರ್ಷದ ಬಳಿಕ ಭಾರತ ಪರ ಟಿ20 ಪಂದ್ಯವಾಡಿದ ಸ್ಪಿನ್‌ ಮಾಸ್ಟರ್‌ ಆರ್‌.ಅಶ್ವಿನ್‌ ತಂಡದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

Follow Us:
Download App:
  • android
  • ios