Asianet Suvarna News Asianet Suvarna News

ಈ ತಂಡವೇ ನೋಡಿ ಆರ್‌ಸಿಬಿಯ ಅಸಲಿ ವಿಲನ್..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಈ ಸೀಸನ್ನಲ್ಲಿ RCBಗೆ ತಂಡದ ಬೌಲರ್‌ಗಳೇ ತಂಡಕ್ಕೆ ಮುಳುವಾಗಿದ್ದಾರೆ. ಆದ್ರೆ, IPL ಹಿಸ್ಟ್ರಿಯಲ್ಲಿ ಬೆಂಗಳೂರು ತಂಡದ ಅಸಲಿ ವಿಲನ್ ಅಂದ್ರೆ, ಅದು ಹೈದ್ರಾಬಾದ್. 2009ರಿಂದ ಹೈದ್ರಾಬಾದ್, ಬೆಂಗಳೂರು ತಂಡಕ್ಕೆ ಬಿಟ್ಟುಬಿಡದೇ ಕಾಡ್ತಿದೆ.

IPL 2024 Sunrisers Hyderabad is  a real villein for Royal Challengers Bengaluru here you know kvn
Author
First Published Apr 17, 2024, 1:45 PM IST

ಬೆಂಗಳೂರು: ಈ ಬಾರಿಯ IPLನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಸುಳಿಗೆ ಸಿಲುಕಿ ಒದ್ದಾಡ್ತಿದೆ. ಫಾಫ್ ಡು ಪ್ಲೆಸಿಸ್ ಪಡೆಗೆ ತಂಡದ ಬೌಲರ್‌ಗಳೇ ವಿಲನ್ ಆಗಿ ಪರಿಣಮಿಸಿದ್ದಾರೆ. ಆದ್ರೆ, IPL ಇತಿಹಾಸದಲ್ಲಿ ಆರ್‌ಸಿಬಿಯ ಅಸಲಿ ವಿಲನ್ ಯಾರು ಗೊತ್ತಾ..? ಬೆಂಗಳೂರು ತಂಡದ ಕಪ್ ಗೆಲುವಿನ ಆಸೆಗೆ ಅಡ್ಡಿಯಾಗಿರೋದ್ಯಾರು ಗೊತ್ತಾ..? ಈ ಸ್ಟೋರಿ ನೋಡಿ ಗೊತ್ತಾಗುತ್ತೆ.

ಬೆಂಗಳೂರಿನ ಕಪ್ ಆಸೆಗೆ ಹೈದ್ರಾಬಾದ್ ಅಡ್ಡಿ..!

ಯೆಸ್, IPLನಲ್ಲಿ ಒಮ್ಮೆಯೂ ಕಪ್ ಗೆಲ್ಲದ ತಂಡಗಳ ಪೈಕಿ RCBಯೂ ಒಂದು. ಘಟಾನುಘಟಿ ಆಟಗಾರರಿದ್ದಾಗಲೂ ಬೆಂಗಳೂರಿನ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗ್ಲಿಲ್ಲ. ಈ ಬಾರಿಯ IPLನಲ್ಲೂ ಅದೇ ರಿಪೀಟ್ ಆಗಿದೆ. ಸೋಲುಗಳಿಗೆ ತಂಡದ ಬೌಲಿಂಗ್ ವಿಭಾಗವೇ ಪ್ರಮುಖ ಕಾರಣ. ತಮ್ಮ ಫ್ಲಾಪ್ ಶೋ ಮೂಲಕ, ತಂಡಕ್ಕೆ ವಿಲನ್ ಆಗಿದ್ದಾರೆ.

ಕಾಮೆಂಟೇಟರ್ To ಗ್ರೇಟ್ ಫಿನಿಶರ್: ಟೀಕಾಕಾರರ ಬಾಯಿ ಮುಚ್ಚಿಸಿದ ಡಿಕೆ ಬಾಸ್‌..!

ಹೌದು, ಈ ಸೀಸನ್ನಲ್ಲಿ RCBಗೆ ತಂಡದ ಬೌಲರ್‌ಗಳೇ ತಂಡಕ್ಕೆ ಮುಳುವಾಗಿದ್ದಾರೆ. ಆದ್ರೆ, IPL ಹಿಸ್ಟ್ರಿಯಲ್ಲಿ ಬೆಂಗಳೂರು ತಂಡದ ಅಸಲಿ ವಿಲನ್ ಅಂದ್ರೆ, ಅದು ಹೈದ್ರಾಬಾದ್. 2009ರಿಂದ ಹೈದ್ರಾಬಾದ್, ಬೆಂಗಳೂರು ತಂಡಕ್ಕೆ ಬಿಟ್ಟುಬಿಡದೇ ಕಾಡ್ತಿದೆ.

2009ರ ಐಪಿಎಲ್‌ ಫೈನಲ್‌ನಲ್ಲಿ RCBಗೆ ಸೋಲು..!

ಯೆಸ್, ಐಪಿಎಲ್‌ನ 2ನೇ ಸೀಸನ್ನಲ್ಲೇ ಆರ್‌ಸಿಬಿ ಫೈನಲ್‌ಗೆ ಎಂಟ್ರಿ ನೀಡಿತ್ತು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದ್ರಾಬಾದ್ RCBಗೆ 144 ರನ್‌ಗ ಳ ಗುರಿ ನೀಡಿತ್ತು. ಈ ಗುರಿಯನ್ನ ಬೆನ್ನಟಿದ್ದ ಅನಿಲ್ ಕುಂಬ್ಳೆ ಪಡೆ, 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ಗಳಿಸಲಷ್ಟೇ ಶಕ್ತವಾಗಿತ್ತು. 6 ರನ್ಗಳಿಂದ ಸೋಲಿಗೆ ಶರಣಾಗಿತ್ತು. 

2016ರ IPL ಸಮರದಲ್ಲಿ 8 ರನ್‌ಗಳ ಸೋಲು..!

ಇನ್ನು 2016ರ IPLನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ RCB, ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೆ ಎಂಟ್ರಿ ನೀಡಿತ್ತು. ಫೈನಲ್ ಫೈಟ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು RCBಗೆ  209 ರನ್ಗಳ ಬಿಗ್ ಟಾರ್ಗೆಟ್  ನೀಡಿತ್ತು. ಆದ್ರೆ, ಕೊಹ್ಲಿ ಮತ್ತು ಕ್ರಿಸ್ ಗೇಲ್‌ ಅವರ ಅಬ್ಬರದ ಅರ್ಧಶತಕದ ಹೊರತಾಗಿಯೂ ಕೇವಲ 8 ರನ್ಗಳಿಂದ ಕಪ್ ಮಿಸ್ ಮಾಡಿಕೊಂಡಿತ್ತು. 

47 ಕೋಟಿ ಪಡೆದ ನಾಲ್ವರು ಬೆಂಚ್ ಕಾದ್ರು..! RCB ಮ್ಯಾನೇಜ್‌ಮೆಂಟ್ ಪ್ಲಾನ್ ಅರ್ಥ ಆಯ್ತಾ?

RCB ದಾಖಲೆಯನ್ನೂ ಬಿಡ್ತಿಲ್ಲ ಸನ್‌ರೈಸರ್ಸ್..!

2020ರ ಸೀಸನ್‌ನ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, RCB ವಿರುದ್ಧ ಗೆದ್ದು ಬೀಗಿತ್ತು. ಆ ಮೂಲಕ ಮತ್ತೊಮ್ಮೆ RCB ಕಪ್ ಆಸೆಗೆ ತಣ್ಣೀರೆರೆಚಿತ್ತು. ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಕೇವಲ RCBಯ ಕಪ್ ಆಸೆಗೆ ಅಡ್ಡಿಯಾಗಿಲ್ಲ. RCBಯ ದಾಖಲೆಗಳನ್ನ ಬ್ರೇಕ್ ಮಾಡಿದೆ. 

2013ರ IPLನಲ್ಲಿ RCB ಪುಣೆ ವಾರಿಯರ್ಸ್ ವಿರುದ್ಧ RCB 263 ರನ್ ಕಲೆಹಾಕಿತ್ತು. ಈ ದಾಖಲೆಯನ್ನ ಬ್ರೇಕ್ ಮಾಡೋದು ಸಾಧ್ಯನೇ ಇಲ್ಲ ಅಂತ ಹೇಳಲಾಗಿತ್ತು. ಆದ್ರೆ, ಈ ಸೀಸನ್ವೊಂದರಲ್ಲೇ SRH ಎರಡು ಬಾರಿ 263 ರನ್ ದಾಖಲೆಯನ್ನ ಪುಡಿ ಪುಡಿ ಮಾಡಿದೆ. ಒಟ್ಟಿನಲ್ಲಿ ಹೈದ್ರಾಬಾದ್, ಬೆಂಗಳೂರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚಾಂಪಿಯನ್ಸ್ ಕನಸಿಗೆ ಕಂಟಕವಾಗಿದೆ. 

ಸ್ಪೋರ್ಟ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Follow Us:
Download App:
  • android
  • ios