Asianet Suvarna News Asianet Suvarna News

ದುರಹಂಕಾರಕ್ಕೆ ಬೆಲೆ ತೆರುತ್ತಾರ ಹಾರ್ದಿಕ್ ಪಾಂಡ್ಯ? ಮುಂಬೈ ಇಂಡಿಯನ್ಸ್‌ಗೆ ಮತ್ತೆ ರೋಹಿತ್ ನಾಯಕತ್ವ..!

ಮೊನ್ನೆ ಮ್ಯಾಚ್ ಮುಗಿದ್ಮೇಲೆ, ಮೈದಾದಲ್ಲಿ ರೋಹಿತ್ ಮತ್ತು ಆಕಾಶ್ ಅಂಬಾನಿ ಫುಲ್ ಸೀರಿಯಸ್ ಆಗಿ ಚರ್ಚೆ ನಡೆಸಿದ್ರು. ಇದೇ ಈಗ ಮತ್ತೆ ಮುಂಬೈ ನಾಯಕತ್ವ ಮತ್ತೆ ರೋಹಿತ್ ಕೈ ಸೇರುತ್ತೆ ಅನ್ನೋ ಸುದ್ದಿ ಹರಡಲು ಕಾರಣವಾಗಿದೆ. 

IPL 2024 Rohit Sharma Akash Ambani have intense chat in Mumbai Indians dugout kvn
Author
First Published Mar 29, 2024, 3:29 PM IST

ಬೆಂಗಳೂರು(ಮಾ.29) ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಸತತ 2 ಸೋಲು ಕಂಡಿದೆ. ಇದ್ರಿಂದ ಮುಂಬೈ ಫ್ಯಾನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿರುದ್ಧ ತಿರುಗಿಬಿದಿದ್ದಾರೆ. ಇದ್ರಿಂದ ಹಾರ್ದಿಕ್ ನಾಯಕತ್ವಕ್ಕೆ ಕುತ್ತು ಬಂದಿದೆ. ಮತ್ತೊಂದೆಡೆ ಮುಂಬೈ ಫ್ರಾಂಚೈಸಿ ಪಾಂಡ್ಯರನ್ನ ನಾಯಕನ ಸ್ಥಾನದಿಂದ ಕೆಳಗಿಳಿಸೋ ಪ್ಲಾನ್ ಮಾಡಿದೆ.  ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.

ಮೈದಾನದಲ್ಲೇ ಪಾಂಡ್ಯರನ್ನ ಕೆಳಗಿಳಿಸೋ ಪ್ಲಾನ್ ರೆಡಿ..!

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ಮತ್ತೆ ರೋಹಿತ್ ಶರ್ಮಾಗೆ ಸಿಗುತ್ತಾ..?  ಅನ್ನೋ ಪ್ರಶ್ನೆ ಮೂಡಿದೆ. ಅರೇ.. ಇದೇನು..? ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ  ಮುಂಬೈ ಎರಡೇ ಪಂದ್ಯಗಳನ್ನಲ್ವಾ ಆಡಿರೋದು..? ಇಷ್ಟು ಬೇಗ ಹಾರ್ದಿಕ್ರನ್ನ ಹೇಗೆ ನಾಯಕನ ಪಟ್ಟದಿಂದ ಕೆಳಗಿಳಿಸ್ತಾರೆ ಅನ್ಕೊಂಡ್ರಾ..? ಹೌದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ  ಪಂದ್ಯದಲ್ಲಿ ಸೋತ ನಂತರ, ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗ್ತಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. 

ಬೆಂಗಳೂರಿನಲ್ಲಿಂದು IPL ಹಬ್ಬ; ಬದಲಾಗುತ್ತಾ RCB ಬ್ಯಾಟಿಂಗ್ ಆರ್ಡರ್?

ಮೊನ್ನೆ ಮ್ಯಾಚ್ ಮುಗಿದ್ಮೇಲೆ, ಮೈದಾದಲ್ಲಿ ರೋಹಿತ್ ಮತ್ತು ಆಕಾಶ್ ಅಂಬಾನಿ ಫುಲ್ ಸೀರಿಯಸ್ ಆಗಿ ಚರ್ಚೆ ನಡೆಸಿದ್ರು. ಇದೇ ಈಗ ಮತ್ತೆ ಮುಂಬೈ ನಾಯಕತ್ವ ಮತ್ತೆ ರೋಹಿತ್ ಕೈ ಸೇರುತ್ತೆ ಅನ್ನೋ ಸುದ್ದಿ ಹರಡಲು ಕಾರಣವಾಗಿದೆ. 

ಪಾಂಡ್ಯ ಬದಲು ರೋಹಿತ್ ಫೀಲ್ಡ್ ಸೆಟ್ ಮಾಡಿದ್ದೇಕೆ..? 

ಇನ್ನು ಈ ವೀಡಿಯೋ ಪಕ್ಕಕ್ಕಿಟ್ಟು ನೋಡಿದ್ರೆ, ಪಂದ್ಯದಲ್ಲಿ  ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಸ್ ಮುಂಬೈ ಬೌಲಿಂಗ್ ದಾಳಿಯನ್ನ ಧೂಳೀಪಟ ಮಾಡಿದ್ರು. ಇದ್ರಿಂದ ಪಾಂಡ್ಯ ತಲೆಮೇಲೆ ಕೈಹೊತ್ತು ಕೂತ್ರು. ಈ ವೇಳೆ ಅಖಾಡಕ್ಕಿಳಿದ ರೋಹಿತ್, ಫೀಲ್ಡ್‌ಸೆಟ್ ಮಾಡಿದ್ರು. ಖುದ್ದು ಪಾಂಡ್ಯಗೆ ನೀನು ಬೌಂಡರಿ ಲೈನ್‌ಗೆ ಹೋಗು ಅಂತ ಸೂಚಿಸಿದ್ರು. ಮೊದಲ ಪಂದ್ಯದಲ್ಲಿ ಹಾರ್ದಿಕ್, ರೋಹಿತ್ಗೆ ಬೌಂಡರಿ ಬಳಿ ತೆರಳುವಂತೆ ಹೇಳಿದ್ರು. ಎರಡನೇ ಪಂದ್ಯದಲ್ಲಿ ಸೀನ್ ಕಂಪ್ಲೀಟ್ ರಿವರ್ಸ್ ಆಯ್ತು.

ಐಪಿಎಲ್‌ನಲ್ಲಿ ನೋಬಾಲ್‌ ನಿರ್ಧರಿಸಲು ಇನ್ನು ಹೊಸ ಐಡಿಯಾ..!

ಮುಂಬೈಗೆ ಬಂದ್ಮೇಲೆ ಕ್ಯಾಪ್ಟನ್ಸಿ ಮರೆತ್ರಾ ಪಾಂಡ್ಯ..?

ಯೆಸ್, ನಾಯಕನಾಗಿ ಹಾರ್ದಿಕ್ ಗುಜರಾತ್ ಟೈಟಾನ್ಸ್‌ಗೆ ಕಪ್ ಗೆದ್ದು ಕೊಟ್ಟಿದ್ರು. ಅಲ್ಲದೇ, ಒಮ್ಮೆ  ತಂಡವನ್ನ ಫೈನಲ್‌ಗೆ ತಲುಪಿಸಿದ್ರು. ಆದ್ರೆ, ಮುಂಬೈಗೆ ಬಂದ್ಮೇಲೆ ಹಾರ್ದಿಕ್ ಕ್ಯಾಪ್ಟನ್ಸಿ ಇಂಪ್ಯಾಕ್ಟ್ಫುಲ್ ಆಗಿಲ್ಲ. ಗೇಮ್‌ಪ್ಲಾನ್, ಸ್ಟಾಟರ್ಜಿ ಯಾವುದೂ ವರ್ಕೌಟ್ ಆಗ್ತಿಲ್ಲ. ಬ್ಯಾಟಿಂಗ್‌ನಲ್ಲೂ ಮಿಂಚ್ತಿಲ್ಲ. ಇದ್ರಿಂದ ಹಾರ್ದಿಕ್ ಪಾಂಡ್ಯ ನಾಯಕತ್ವದ ವಿರುದ್ಧ ಫ್ಯಾನ್ಸ್ ಮತ್ತು ಮಾಜಿ ಕ್ರಿಕೆಟರ್ಸ್ ಕಿಡಿಕಾರ್ತಿದ್ದಾರೆ. 

ಹಿಟ್‌ಮ್ಯಾನ್ ಮುಂಬೈ ಇಂಡಿಯನ್ಸ್‌ನ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ..!

ರೋಹಿತ್ ಶರ್ಮಾ..! IPLನ ಮುಂಬೈ ಇಂಡಿಯನ್ಸ್‌ನ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್..! ಒಂದಲ್ಲ, ಎರಡಲ್ಲ 5 ಬಾರಿ ಮುಂಬೈಗೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟೆಲ್ಲಾ ಇದ್ರು, ಫ್ರಾಂಚೈಸಿ, ರೋಹಿತ್ರನ್ನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯರನ್ನ ಕರೆತಂದು ನಾಯಕನ ಸ್ಥಾನ ನೀಡಿದೆ. ರೋಹಿತ್ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಬಂದು ಕೂತಿದ್ದಾರೆ. ಹಾರ್ದಿಕ್ರನ್ನ ಮುಂಬೈ ಇಂಡಿಯನ್ಸ್ ನಾಯಕರಾಗಿ ರೋಹಿತ್ ಫ್ಯಾನ್ಸ್ ಒಪ್ಪಿಕೊಳ್ಳಲು ರೆಡಿಯಾಗಿಲ್ಲ. 

ಒಟ್ಟಿನಲ್ಲಿ ಸದ್ಯ ಮುಂಬೈ ತಂಡದಲ್ಲಾಗುತ್ತಿರೋ ಬೆಳವಣಿಗೆಗಳು, ಕೋಲ್ಡ್‌ವಾರ್‌ಗಳನ್ನ ನೋಡಿದ್ರೆ, ರೋಹಿತ್ ಶರ್ಮಾ ಮತ್ತೆ ನಾಯಕನಾದ್ರೂ ಅಚ್ಚರಿ ಇಲ್ಲ. 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Follow Us:
Download App:
  • android
  • ios