Asianet Suvarna News Asianet Suvarna News

ಒಂದೇ ದಿನ ಬೆಂಗ್ಳೂರಲ್ಲಿ 19 ಕೊರೋನಾ ಕೇಸ್‌ ಪತ್ತೆ

ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದ್ದು, ಬುಧವಾರ ನಗರದಲ್ಲಿ ಕೋರೋನಾ ಸೋಂಕು ಪರೀಕ್ಷೆ ನಡೆಸಿದ 359 ಮಂದಿ ಪೈಕಿ 19 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 328 ಜನರಿಗೆ ನಡೆಸಿದ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 17 ಮಂದಿಗೆ ಹಾಗೂ 31 ಮಂದಿಗೆ ನಡೆಸಿದ ರ್‍ಯಾಪಿಡ್‌ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕು ಇರುವುದು ಖಚಿತಪಟ್ಟಿದೆ.

19 New Coronavirus Case on Dec 20th in Bengaluru grg
Author
First Published Dec 21, 2023, 4:32 AM IST

ಬೆಂಗಳೂರು(ಡಿ.21):  ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 19 ಹೊಸ ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿವೆ.

ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದ್ದು, ಬುಧವಾರ ನಗರದಲ್ಲಿ ಕೋರೋನಾ ಸೋಂಕು ಪರೀಕ್ಷೆ ನಡೆಸಿದ 359 ಮಂದಿ ಪೈಕಿ 19 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 328 ಜನರಿಗೆ ನಡೆಸಿದ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 17 ಮಂದಿಗೆ ಹಾಗೂ 31 ಮಂದಿಗೆ ನಡೆಸಿದ ರ್‍ಯಾಪಿಡ್‌ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕು ಇರುವುದು ಖಚಿತಪಟ್ಟಿದೆ.

ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!

19 ದಿನದಲ್ಲಿ 59 ಕೊರೋನಾ ಪ್ರಕರಣ:

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯದಲ್ಲಿ ಡಿಸೆಂಬರ್‌ 1ರಿಂದ 19ರ ಅವಧಿಯಲ್ಲಿ ಒಟ್ಟು 59 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಡಿ.16 ರಂದು 5 ಪ್ರಕರಣ, ಡಿ.17ರಂದು 4, ಡಿ.18ರಂದು 13 ಹಾಗೂ ಡಿ.19ರಂದು 17 ಪ್ರಕರಣ ಕಾಣಿಸಿಕೊಂಡಿವೆ. ಡಿ.1ರಿಂದ 15ರ ಅವಧಿಯಲ್ಲಿ 3ಕ್ಕಿಂತ ಕಡಿಮೆ ಪ್ರಕರಣ ಕಾಣಿಸಿಕೊಂಡಿದ್ದವು.

Follow Us:
Download App:
  • android
  • ios