Asianet Suvarna News Asianet Suvarna News

ಮನೆಯಲ್ಲಿ ತರಕಾರಿ ಅಡುಗೆ ಸಿದ್ಧಪಡಿಸೋದೆ ದುಬಾರಿ ಈಗ, ಮಾಂಸದೂಟವೇ ಜೇಬಿಗೆ ಹಿತ!

ಏಪ್ರಿಲ್ ತಿಂಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು ತರಕಾರಿ ಊಟಕ್ಕಿಂತ ಮಾಂಸದೂಟವೇ ಜೇಬಿಗೆ ಹಿತ ಎಂಬ ಅಭಿಪ್ರಾಯಕ್ಕೆ ಜನಸಾಮಾನ್ಯರು ಬರುವಂತೆ ಮಾಡಿದೆ. ವರದಿಯೊಂದರ ಪ್ರಕಾರ ಏಪ್ರಿಲ್ ತಿಂಗಳಲ್ಲಿ ತರಕಾರಿ ಊಟದ ಬೆಲೆಯಲ್ಲಿ ಶೇ.8ರಷ್ಟು ಏರಿಕೆಯಾಗಿದೆ. 

Rice Roti Rate In April Home cooked Veg Thali Costlier by 8 percent Non veg Meal Gets Cheaper anu
Author
First Published May 9, 2024, 6:22 PM IST

ನವದೆಹಲಿ (ಮೇ 9): ಸಸ್ಯಾಹಾರ ದೇಹಕ್ಕೇನೂ ಹಿತ. ಆದರೆ, ಜೇಬಿಗೆ ಮಾತ್ರ ಭಾರವಾಗ್ತಿದೆ. ಇದಕ್ಕಿಂತ ಮಾಂಸದೂಟನೇ ವಾಸಿ ಅನ್ನೋ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಏಪ್ರಿಲ್ ತಿಂಗಳಲ್ಲಿ ಕೋಳಿ ಮಾಂಸದ ಬೆಲೆಯಲ್ಲಿ ಇಳಿಕೆಯಾಗಿದ್ದರೆ, ಈರುಳ್ಳಿ, ಆಲುಗಡ್ಡೆ ಹಾಗೂ ಟೊಮ್ಯಾಟೋ ಮುಂತಾದ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದು ತಿಳಿಸಿದೆ. ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಆಂಡ್ ಅನಾಲಿಸೀಸ್ ಮಾಸಿಕ ವರದಿ 'ರೋಟಿ ರೈಸ್ ರೇಟ್' ಪ್ರಕಾರ ಈರುಳ್ಳಿ ಹಾಗೂ ಟೊಮ್ಯಾಟೋ ಬೆಲೆಯಲ್ಲಿನ ಏರಿಕೆ ಏಪ್ರಿಲ್ ತಿಂಗಳ ತರಕಾರಿ ಊಟದ ಸರಾಸರಿ ದರದಲ್ಲಿ ಶೇ.8ರಷ್ಟು ಏರಿಕೆಗೆ ಕಾರಣವಾಗಿದೆ.  ಆದರೆ, ಮಾಂಸದ ಕೋಳಿ ಬೆಲೆಯಲ್ಲಿನ ಇಳಿಕೆ ಮಾಂಸದೂಟದ ವೆಚ್ಚವನ್ನು ತಗ್ಗಿಸಿದೆ. ರೋಟಿ, ಈರುಳ್ಳಿ, ಟೊಮ್ಯಾಟೋ ಹಾಗೂ ಆಲುಗಡ್ಡೆಯನ್ನೊಳಗೊಂಡ ತರಕಾರಿಗಳು, ಅನ್ನ, ದಾಲ್, ಮೊಸರು ಹಾಗೂ  ಸಲಾಡ್ ಒಳಗೊಂಡ ಸಸ್ಯಾಹಾರದ ಥಾಲಿ ಬೆಲೆ ಏಪ್ರಿಲ್ ತಿಂಗಳಲ್ಲಿ ಪ್ಲೇಟ್ ಗೆ 27.4ರೂ.ಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಇದರ ಬೆಲೆ  25.4 ರೂ. ಇತ್ತು. ಅಲ್ಲದೆ, 2024ರ ಮಾರ್ಚ್ ತಿಂಗಳಿಗೆ ಹೋಲಿಸಿದ್ರೆ ಕೂಡ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ. ಮಾರ್ಚ್ ನಲ್ಲಿ ಈ ಥಾಲಿ ಬೆಲೆ 27.3ರೂ. ಇತ್ತು ಎಂದು ಕ್ರಿಸಿಲ್ ವರದಿ ತಿಳಿಸಿದೆ. 

ಬೆಲೆ ಹೆಚ್ಚಳಕ್ಕೆ ಕಾರಣವೇನು?
ತರಕಾರಿ ಥಾಲಿ ಬೆಲೆಯಲ್ಲಿ ಒಟ್ಟು ಹೆಚ್ಚಳವಾಗಿದೆ. ಇದಕ್ಕೆ ಈರುಳ್ಳಿ ಬೆಲೆಯಲ್ಲಿ ಶೇ.4ರಷ್ಟು, ಟೊಮ್ಯಾಟೋ ಬೆಲೆಯಲ್ಲಿ ಶೇ.40, ಆಲುಗಡ್ಡೆ ಬೆಲೆಯಲ್ಲಿ ಶಸೇ38, ಅಕ್ಕಿ ಬೆಲೆಯಲ್ಲಿ ಶೇ.14 ಹಾಗೂ ಕಾಳುಗಳ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿರೋದೆ ಕಾರಣ. ಇನ್ನು ಜೀರಿಗೆ, ಮೆಣಸು ಹಾಗೂ ಸಸ್ಯಜನ್ಯ ತೈಲದ ಬೆಲೆಯಲ್ಲಿ ಕ್ರಮವಾಗಿ ಶೇ.40, ಶೇ.31 ಹಾಗೂ ಶೇ.10ರಷ್ಟು ಇಳಿಕೆಯಾಗಿದೆ. ಇದು ತರಕಾರಿ ಥಾಲಿ ಬೆಲೆ ಇನ್ನಷ್ಟು ಹೆಚ್ಚಳವಾಗೋದನ್ನು ತಪ್ಪಿಸಿದೆ.

ರಾಗಿ ಇಳುವರಿ ಕುಂಠಿತ: ಮಾರಾಟಕ್ಕೆ ಹಿಂಜರಿಕೆ, ಕೇವಲ 6857 ರೈತರಿಂದ ಪೂರೈಕೆ!

ಇನ್ನು ನಾನ್ -ವೆಜ್ ಥಾಲಿ ವೆಜ್ ಥಾಲಿಯಲ್ಲಿರುವ ಎಲ್ಲ ಸಾಮಗ್ರಿಗಳನ್ನೇ ಳಗೊಂಡಿದೆ. ಆದರೆ, ಇಲ್ಲಿ ದಾಲ್ ಬದಲು ಕೋಳಿ ಮಾಂಸವನ್ನು ಬಳಸಲಾಗಿದೆ. ಹೀಗಾಗಿ ನಾನ್ ವೆಜ್ ಥಾಲಿ ಬೆಲೆಯಲ್ಲಿ ಏfರಿಲ್ ತಿಂಗಳಲ್ಲಿ 56.3ರೂ. ಇಳಿಕೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ಈ ಥಾಲಿ ಬೆಲೆ 58.9ರೂ. ಇತ್ತು. ಆದರೆ, ಈ ವರ್ಷದ ಮಾರ್ಚ್ ತಿಂಗಳಲ್ಲಿ ಈ ಥಾಲಿ ಬೆಲೆ 54.9 ರೂ. ಇತ್ತು. ಅಂದರೆ ಏಪ್ರಿಲ್ ತಿಂಗಳಲ್ಲಿ ನಾನ್ ವೆಜ್ ಥಾಲಿ ಬೆಲೆ ವೆಜ್ ಗಿಂತ ಹೆಚ್ಚಿದೆ. 

ಮಾಂಸದ ಕೋಳಿ ಬೆಲೆಯಲ್ಲಿ ಶೇ.12ರಷ್ಟು ಇಳಿಕೆಯಾಗಿದೆ. ಇದು ಸಮಗ್ರ ಬೆಲೆಯ ಶೇ.50ರಷ್ಟಿದೆ. ಇದು ನಾನ್ ವೆಜ್ ಊಟದ ಬೆಲೆಯಲ್ಲಿ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ. 

ಮಾರ್ಚ್ ಗೆ ಹೋಲಿಸಿದರೆ ಏಪ್ರಿಲ್ ತಿಂಗಳಲ್ಲಿ ನಾನ್ ವೆಜ್ ಥಾಲಿ ಬೆಲೆಯಲ್ಲಿ ಶೇ.3ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಮಾಂಸದ ಕೋಳಿ ಬೆಲೆಯಲ್ಲಿ ಶೇ.4ರಷ್ಟು ಏರಿಕೆಯಾಗಿರೋದೆ ಕಾರಣ. ಅಧಿಕ ಬೇಡಿಕೆ ಹಾಗೂ ಹೆಚ್ಚಿನ ವೆಚ್ಚದ ಹಿನ್ನೆಲೆಯಲ್ಲಿ ಈ ಹೆಚ್ಚಳ ಕಂಡುಬಂದಿದೆ ಎಂದು ವರದಿ ತಿಳಿಸಿದೆ. 

ಪನೀರ್ ಆರ್ಡರ್ ಮಾಡಿದ್ದೆ, ಚಿಕನ್ನಲ್ಲ; 50 ಲಕ್ಷ ರೂ ಪರಿಹಾರ ಕೇಳಿದ ಮಹಿಳೆ!

ತರಕಾರಿ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆಯಾಗಿದೆ. ಇದು ಅಡುಗೆಯ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಮನೆಯಲ್ಲಿ ತರಕಾರಿ ಅಡುಗೆ ತಯಾರಿ ಈಗ ದುಬಾರಿಯಾಗಿ ಪರಿಣಮಿಸಿದೆ. ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಕೋಳಿ ಮಾಂಸದ ಬೆಲೆಯಲ್ಲಿ ಇಳಿಕೆಯಾಗಿರೋದು ಮಾಂಸಪ್ರಿಯರಿಗೆ ಖುಷಿ ನೀಡಿದೆ. ಅಲ್ಲದೆ, ಮಾಂಸಾಹಾರಿಗಳು ತರಕಾರಿ ಅಡುಗೆಗಿಂತ ಮಾಂಸದ ಅಡುಗೆ ಮಾಡೋದೆ ಬೆಸ್ಟ್. ಇದರಿಂದ ದುಡ್ಡೂ ಉಳಿಯುತ್ತೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಕೂಡ. 


 

Follow Us:
Download App:
  • android
  • ios