Asianet Suvarna News Asianet Suvarna News

ಸೈಬರ್ ವಂಚನೆಗೆ ಬ್ರೇಕ್ ಹಾಕಲು ಎಸ್ ಬಿಐ ಕಾರ್ಡ್ ಜೊತೆಗೆ ಕೈಜೋಡಿಸಿದ ಗೃಹ ಸಚಿವಾಲಯ;OTP ರವಾನೆಯಲ್ಲಿ ಹೊಸ ವಿಧಾನ

ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ತಡೆ ಹಾಕಲು ಬಿಗಿ ಕ್ರಮಗಳ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿಯೇ ಗೃಹ ಸಚಿವಾಲಯ ಎಸ್ ಬಿಐ ಕಾರ್ಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 
 

Home Ministry Ties Up With SBI Card To Combat Rising Cyber Threats All You Need To Know anu
Author
First Published Apr 24, 2024, 12:51 PM IST

ನವದೆಹಲಿ (ಏ.24): ಕೇಂದ್ರ ಗೃಹ  ಸಚಿವಾಲಯವು ಎಸ್ ಬಿಐ ಕಾರ್ಡ್ಸ್ ಹಾಗೂ ಪಾವತಿ ಸೇವೆಗಳ ನಿಗಮ (ಎಸ್ ಬಿಐ ಕಾರ್ಡ್) ಹಾಗೂ ದೂರಸಂಪರ್ಕ ನಿರ್ವಾಹಕರ ಸಹಭಾಗಿತ್ವದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಸೈಬರ್ ವಂಚನೆ ಹಾಗೂ ಫಿಶಿಂಗ್ ಅಟ್ಯಾಕ್ ಗಳು ಹೆಚ್ಚುತ್ತಿದ್ದು, ಅದರ ತಡೆಗೆ ವಿಶೇಷವಾದ ಪರಿಹಾರವನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಒನ್ -ಟೈಮ್-ಪಾಸ್ ವರ್ಡ್ (ಒಟಿಪಿ) ಕಳುವಾಗಿರುವ ಬಗ್ಗೆ ಗ್ರಾಹಕರಿಗೆ ಆ ಕ್ಷಣದಲ್ಲೇ ಅಲರ್ಟ್ ನೀಡಲಾಗುತ್ತದೆ. ಈ ಮೂಲಕ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತಗೊಳಿಸಲು ಸರ್ಕಾರ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಅಮಾಯಕರ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಕನ್ನ ಹಾಕಲು ಸೈಬರ್ ಖದೀಮರು ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಸೈಬರ್ ವಂಚನೆ ತಡೆಗೆ ಸೂಕ್ತ ಕ್ರಮ ಜಾರಿಗೆ ಸರ್ಕಾರ ಮುಂದಾಗಿದೆ.

ಈ ಪ್ರಸ್ತಾವಿತ ಯೋಜನೆ ಗ್ರಾಹಕರು ಇರುವ ತಾಣವನ್ನು ಟ್ರ್ಯಾಕ್ ಮಾಡಲು ಟೆಲಿಕಾಮ್ ಡೇಟಾಬೇಸ್ ಬಳಸಲಿದೆ. ಹಾಗೆಯೇ ಒಟಿಪಿಯನ್ನು ಸರಿಯಾದ ವ್ಯಕ್ತಿಗೆ ಕಳುಹಿಸಿರೋದನ್ನು ಖಚಿತಪಡಿಸಿಕೊಳ್ಳಲಿದೆ. ಇನ್ನು ಗ್ರಾಹಕರಿರುವ ಸ್ಥಳವನ್ನು ಒಟಿಪಿ ಕಳುಹಿಸಬೇಕಿರುವ ಸ್ಥಳದ ಜೊತೆಗೆ ಹೋಲಿಕೆ ಮಾಡಿ ನೋಡಲಿದೆ. ಒಂದು ವೇಳೆ ಈ ಎರಡೂ ಸ್ಥಳಗಳು ಬೇರೆಯಾಗಿದ್ದಲ್ಲಿ ಈ ಬಗ್ಗೆ ಗ್ರಾಹಕರಿಗೆ ಅಲರ್ಟ್ ಕಳುಹಿಸುವ ಮೂಲಕ ಫಿಶಿಂಗ್ ಅಟ್ಯಾಕ್ ನಡೆಯುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ನೀಡಲಿದೆ.

ಬಿಟ್‌ ಕಾಯಿನ್‌ ಹೂಡಿಕೆ ಹೆಸರಲ್ಲಿ 87 ಲಕ್ಷ ರೂ. ದೋಖಾ: ಮೈಸೂರಲ್ಲಿ ಮಹಾನ್‌ ವಂಚಕರು

ಸೈಬರ್ ವಂಚಕರು ಹೊಸ ಹೊಸ ವಿಧಾನಗಳ ಮೂಲಕ ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಸೈಬರ್ ವಂಚಕರ ಈ ನಡೆಯನ್ನು ಗಮನಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ವಂಚನೆ ಅಪಾಯಗಳನ್ನು ತಪ್ಪಿಸಲು ಡಿಜಿಟಲ್ ಪಾವತಿ ವಹಿವಾಟುಗಳಲ್ಲಿ ಹೆಚ್ಚುವರಿ ದೃಢೀಕರಣ ಫ್ಯಾಕ್ಟರ್ ಅಳವಡಿಕೆಗೆ ಸೂಚಿಸಿದೆ. ಈಗಿರುವ ಭದ್ರತಾ ಕ್ರಮಗಳ ಹೊರತಾಗಿ ವಂಚಕರು ಒಟಿಪಿ ಕದಿಯಲು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ಮೂಲಕ ಹಳೆಯ ಸುರಕ್ಷತಾ ವಿಧಾನಗಳನ್ನು ಬಲಹೀನಗೊಳಿಸಿದ್ದಾರೆ. 

ಒಟಿಪಿ ಡೆಲಿವರಿ ವಿಧಾನದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೈಬರ್ ವಂಚನೆ ತಡೆಗೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಎರಡು ವಿಧಾನಗಳನ್ನು ಬಳಸಲು ಮುಂದಾಗಿದೆ. ಗ್ರಾಹಕರ ಸಾಧನದಲ್ಲಿ ಅಲರ್ಟ್ ಕಾಣಿಸುವಂತೆ ಮಾಡೋದು ಅಥವಾ ಒಟಿಪಿಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡೋದು. ಟೆಲಿಕಾಮ್ ಪ್ರೊವೈಡರ್ಸ್ ಹಾಗೂ ಬ್ಯಾಂಕುಗಳಿಂದ ಆ ಕ್ಷಣದ ಮಾಹಿತಿಗಳನ್ನು ಕಲೆ ಹಾಕುವ ಮೂಲಕ ಒಟಿಪಿ ಡೆಲಿವರಿ ತಾಣ ಸರಿಯಾಗಿದೆಯಾ ಎಂದು ಪರಿಶೀಲಿಸಿ ಹಾಗೂ ಅನುಮಾನಾಸ್ಪದ ಚಟುವಟಿಕೆಗಳನ್ನು ಸಮರ್ಪಕವಾಗಿ ಗುರುತಿಸುವ ಗುರಿಯನ್ನು ಈ ವ್ಯವಸ್ಥೆ ಹೊಂದಿದೆ.

ಸೈಬರ್‌ ವಂಚಕರಿಂದ ಹಣ ವಾಪಸ್‌ ಪಡೆಯೋಕೆ ಗುಡ್‌ ಐಡಿಯಾ! ಗೋಲ್ಡನ್‌ ಅವರ್‌ನಲ್ಲಿ ಈ ಕೆಲಸ ಮಾಡಿ

 ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಅಥವಾ ಡಿಜಿಟಲ್ ಪಾವತಿ ಪ್ರಮಾಣ ಹೆಚ್ಚಿದಂತೆ ಆನ್ ಲೈನ್ ವಂಚನೆ ಪ್ರಕರಣಗಳು ಕೂಡ ಏರಿಕೆಯಾಗಿವೆ. ಆನ್ ಲೈನ್ ವಂಚಕರು ವಂಚನೆಗೆ ಹೊಸ ಹೊಸ ವಿಧಾನಗಳನ್ನು ಬಳಸುವ ಮೂಲಕ ಅಮಾಯಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅದೆಷ್ಟೇ ವಿದ್ಯಾವಂತರಾಗಿದ್ದರೂ ಒಂದು ಕ್ಷಣ ಮೈ ಮರೆತರೂ ಇಂಥ ವಂಚಕರ ಬಲೆಯಲ್ಲಿ ಸಿಲುಕುವುದು ಗ್ಯಾರಂಟಿ. ಇಂಥ ಫಿಶಿಂಗ್ ಕ್ರೈಮ್ ಗಳಿಗೆ ವಂಚಕರು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡುವುದು, ಬ್ಯಾಂಕ್ ವೆಬ್ ಸೈಟ್ ಗಳನ್ನೇ ಹೋಲುವ ನಕಲಿ ಲಿಂಕ್ ಗಳನ್ನು ಕಳುಹಿಸಿ ಆನ್ ಲೈನ್ ಬ್ಯಾಂಕಿಂಗ್ ಐಡಿ, ಪಾಸ್ ವರ್ಡ್ ಮಾಹಿತಿಗಳನ್ನು ಕಲೆ ಹಾಕುವ ಮೂಲಕ ವಂಚಿಸಲಾಗುತ್ತಿದೆ. ಇನ್ನು ಆನ್ ಲೈನ್ ಮಾರುಕಟ್ಟೆಗಳಿಂದ ವಸ್ತುಗಳ ಖರೀದಿ ಅಥವಾ ರಿಟರ್ನ್ಸ್ ಮಾಡುವಾಗ ಕೂಡ ಈ ವಂಚಕರ ಕೈಗೆ ಸಿಕ್ಕಿಬಿದ್ದು, ಹಣ ಕಳೆದುಕೊಂಡವರ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. 

Follow Us:
Download App:
  • android
  • ios