55 ವರ್ಷವಾದ್ರೂ ಸುವೇಂದು ಅಧಿಕಾರಿ ಬ್ಯಾಚುಲರ್, ಮದುವೆ ಆಗದಿರಲು ಕಾರಣ ಏನು?
ಪಶ್ಚಿಮ ಬಂಗಾಳದ ಪ್ರಬಲ ಬಿಜೆಪಿ ನಾಯಕ ಸುವೇಂದು ಅಧಿಕಾರಿ 55ನೇ ವಯಸ್ಸಿನಲ್ಲೂ ಅವಿವಾಹಿತರಾಗಿದ್ದಾರೆ. ಅವರು ಯಾಕೆ ಮದುವೆಯಾಗಿಲ್ಲ ಎಂಬ ಕುತೂಹಲಕಾರಿ ಕಾರಣ ಇಲ್ಲಿದೆ.
india-news May 04 2026
Author: Mahmad Rafik Image Credits:ANI
Kannada
ಬಂಗಾಳದ ಮುಂದಿನ ಸಿಎಂ ಸುವೇಂದು ಅಧಿಕಾರಿ?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದೊಡ್ಡ ಗೆಲುವಿನ ಹಿಂದೆ ಸುವೇಂದು ಅಧಿಕಾರಿ ಪಾತ್ರ ದೊಡ್ಡದಿದೆ. ಮಮತಾ ಬ್ಯಾನರ್ಜಿ ಪಕ್ಷವನ್ನು ತೊರೆದು ಬಿಜೆಪಿಗೆ ಬಂದ ಇವರು, ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
Image credits: ANI
Kannada
ಸುವೇಂದು ಅಧಿಕಾರಿಯ ಸೀಕ್ರೆಟ್ಸ್
ಸುವೇಂದು ಅವರ ವೈಯಕ್ತಿಕ ಜೀವನದ ರಹಸ್ಯಗಳು ಕೆಲವೇ ಜನರಿಗೆ ಗೊತ್ತು. ಅದರಲ್ಲಿ ಒಂದು ಸೀಕ್ರೆಟ್ ಅಂದರೆ, ಅವರು 55 ವರ್ಷವಾದರೂ ಇನ್ನೂ ಬ್ರಹ್ಮಚಾರಿ. ಹಾಗಿದ್ರೆ, ಅವರು ಸಿಂಗಲ್ ಆಗಿ ಉಳಿದಿರಲು ನಿಜವಾದ ಕಾರಣವೇನು?
Image credits: ANI
Kannada
ಅವಿವಾಹಿತನಾಗಿರುವುದರ ಪ್ರಯೋಜನ ತಿಳಿಸಿದ ಸುವೇಂದು
ಒಂದು ಸಂದರ್ಶನದಲ್ಲಿ ಸುವೇಂದು ಅಧಿಕಾರಿ, ಅವಿವಾಹಿತನಾಗಿರುವುದಕ್ಕೂ ಸಾಕಷ್ಟು ಪ್ರಯೋಜನಗಳಿವೆ ಎಂದು ಹೇಳಿದ್ದರು. ಕೆಲಸ ಮಾಡಲು ಹೆಚ್ಚು ಸಮಯ ಸಿಗುತ್ತದೆ. ಯಾಕಂದ್ರೆ ಯಾವುದೇ ಕೌಟುಂಬಿಕ ಜವಾಬ್ದಾರಿ ಇರಲ್ಲ ಎಂದಿದ್ದರು.
Image credits: ANI
Kannada
ಈ ಕಾರಣಕ್ಕೆ ಸುವೇಂದು ಮದುವೆ ಆಗಲೇ ಇಲ್ಲ
1987ರಿಂದಲೇ ರಾಜಕೀಯಕ್ಕೆ ಬಂದು ಸಂಪೂರ್ಣವಾಗಿ ತೊಡಗಿಸಿಕೊಂಡೆ. ನನಗಾಗಿಯೇ ಸಮಯ ಸಿಗದಿದ್ದಾಗ, ಕುಟುಂಬಕ್ಕೆಲ್ಲಿಂದ ಸಮಯ ಕೊಡಲಿ? ಆಗಲೇ ನಾನು ಅವಿವಾಹಿತನಾಗಿಯೇ ಉಳಿಯಲು ನಿರ್ಧರಿಸಿದೆ ಎಂದು ಅಧಿಕಾರಿ ಹೇಳಿದ್ದರು.
Image credits: ANI
Kannada
ಮೋದಿ, ಯೋಗಿ, ಅಟಲ್ ಕೂಡ ಬ್ರಹ್ಮಚಾರಿಗಳೇ!
ದೇಶ ಸೇವೆ ಮಾಡುವ ಪ್ರಧಾನಿ ಮೋದಿ ಕೂಡ ಅವಿವಾಹಿತರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಬ್ರಹ್ಮಚಾರಿ. ಅಟಲ್ ಬಿಹಾರಿ ವಾಜಪೇಯಿ ಅವರೂ ದೇಶಕ್ಕಾಗಿ ಮದುವೆಯಾಗಿರಲಿಲ್ಲ ಎಂದು ಅಧಿಕಾರಿ ಉಲ್ಲೇಖಿಸಿದ್ದರು.
ಸುವೇಂದು ಅಧಿಕಾರಿ ಯಾರನ್ನು ಆದರ್ಶವಾಗಿ ಸ್ವೀಕರಿಸುತ್ತಾರೆ?
ದಿ. ಸತೀಶ್ ಸಮಂತೊ, ದಿ. ಸುಶೀಲ್ ಧರಾ, ದಿ. ಅಜಯ್ ಮುಖರ್ಜಿ. ಈ ಮೂವರೂ ಅವಿವಾಹಿತರು. ನಾನು ಈ ಮೂವರನ್ನು ಅನುಸರಿಸುತ್ತಾ, 'ಜನರಿಗೆ ಸಮರ್ಪಿತ'ನಾಗಿರಲು ಅವಿವಾಹಿತನಾಗಿಯೇ ಉಳಿದಿದ್ದೇನೆ' ಎಂದು ಅಧಿಕಾರಿ ಹೇಳಿದ್ದಾರೆ.