ವೆಲ್ವೆಟ್ ಸೀರೆಗಳು ನೋಡಲು ಸುಂದರವಾಗಿ ಕಾಣುತ್ತವೆ. ಆದರೆ ಅವುಗಳ ನಿರ್ವಹಣೆ ಸ್ವಲ್ಪ ಕಷ್ಟ. ನಿಮ್ಮ ದುಬಾರಿ ವೆಲ್ವೆಟ್ ಸೀರೆ ಹಾಳಾಗದಂತೆ ನೋಡಿಕೊಳ್ಳಲು ಇಲ್ಲಿವೆ ಕೆಲವು ಸುಲಭ ಟಿಪ್ಸ್.
fashion Aug 12 2026
Author: Mahmad Rafik Image Credits:instagram
Kannada
ವೆಲ್ವೆಟ್ ಸೀರೆ ಮೆಂಟೈನ್
ವೆಲ್ವೆಟ್ ಸೀರೆಯನ್ನು ಸರಿಯಾಗಿ ಮೆಂಟೈನ್ ಮಾಡಿದರೆ, ಹೊಳಪು ಮತ್ತು ಸೌಂದರ್ಯ ದೀರ್ಘಕಾಲ ಉಳಿಯುತ್ತದೆ. ಅಷ್ಟೇ ಅಲ್ಲ, ಎಷ್ಟು ಬಾರಿ ಉಟ್ಟರೂ ಹೊಸದರಂತೆಯೇ ಕಾಣಿಸುತ್ತದೆ.
Image credits: instagram
Kannada
ಸೀರೆ ಆರೈಕೆಗೆ ವಿಶೇಷ ಟಿಪ್ಸ್
ವೆಲ್ವೆಟ್ ಸೀರೆ ಉಟ್ಟ ನಂತರ ಮೆಂಟೈನ್ ಹೇಗೆ ಮಾಡಬೇಕು ಎಂಬುದರ ಕುರಿತು ಕೆಲವು ವಿಶೇಷ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಸೀರೆ ಬಾಳಿಕೆ ಬರುತ್ತದೆ.
Image credits: instagram
Kannada
ವೆಲ್ವೆಟ್ ಸೀರೆ ತೊಳೆಯುವ ವಿಧಾನ
ವೆಲ್ವೆಟ್ ಸೀರೆಯನ್ನು ಎಂದಿಗೂ ವಾಷಿಂಗ್ ಮೆಷಿನ್‌ನಲ್ಲಿ ಹಾಕಬೇಡಿ. ಬದಲಾಗಿ, ತಣ್ಣೀರಿನಲ್ಲಿ ಅದ್ದಿ, ಕೈಗಳಿಂದ ನಿಧಾನವಾಗಿ ಮತ್ತು ಮೃದುವಾಗಿ ಸ್ವಚ್ಛಗೊಳಿಸಿ.
Image credits: Velvet Saree
Kannada
ಒಣಗಿಸುವ ಸರಿಯಾದ ರೀತಿ
ವೆಲ್ವೆಟ್ ಸೀರೆಯನ್ನು ತೊಳೆದ ತಕ್ಷಣ ಬಿಸಿಲಿನಲ್ಲಿ ಒಣಗಲು ಹಾಕಬೇಡಿ. ಹೀಗೆ ಮಾಡುವುದರಿಂದ ಸೀರೆಯ ಬಣ್ಣ ಮಾಸಬಹುದು. ನೆರಳಿನಲ್ಲಿ ಒಣಗಿಸುವುದು ಉತ್ತಮ.
Image credits: Velvet Saree
Kannada
ಇಸ್ತ್ರಿ ಮಾಡುವಾಗ ಜಾಗರೂಕರಾಗಿರಿ
ವೆಲ್ವೆಟ್ ಸೀರೆಗೆ ಇಸ್ತ್ರಿ ಮಾಡುವಾಗ ಎಚ್ಚರವಿರಲಿ. ಬಿಸಿ ಇಸ್ತ್ರಿ ಪೆಟ್ಟಿಗೆಯನ್ನು ನೇರವಾಗಿ ಸೀರೆಯ ಮೇಲೆ ಇಡಬೇಡಿ. ಇದು ಸೀರೆಯ ಬಟ್ಟೆಗೆ ಹಾನಿ ಉಂಟುಮಾಡಬಹುದು.
Image credits: Velvet Saree
Kannada
ಸೀರೆಯನ್ನು ಇಡುವ ವಿಧಾನ
ವೆಲ್ವೆಟ್ ಸೀರೆಯನ್ನು ಯಾವಾಗಲೂ ಗಾಳಿಯಾಡುವ ಮತ್ತು ತೇವಾಂಶ ಇಲ್ಲದ ಜಾಗದಲ್ಲಿ ಇಡಬೇಕು. ಇದರಿಂದ ಫಂಗಸ್ ಅಥವಾ ಕೆಟ್ಟ ವಾಸನೆ ಬರುವುದನ್ನು ತಡೆಯಬಹುದು.