ಬ್ರಿಟನ್ ವೈರಸ್ ಆತಂಕದ ನಡುವೆ ಬಯಲಾಯ್ತು ಮತ್ತೊಂದು ಶಾಕಿಂಗ್ ವಿಚಾರ!...

ಒಂದೆಡೆ ಕೊರೋನಾ ಬೆನ್ನಲ್ಲೇ, ಬ್ರಿಟನ್‌ನ ಹೊಸ ತಳಿಯ ಕೊರೋನಾ ಜನರ ನಿದ್ದೆಗೆಡಿಸಿದ್ದರೆ, ಅತ್ತ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಬಟಾ ಬಯಲಾಗಿದೆ. 

ಕಾಶ್ಮೀರ ಚುನಾವಣೆ, ಕಮಲ ಕಮಾಲ್: ಗುಪ್ಕಾರ್ ಗೆದ್ದರೂ ಬಿಜೆಪಿ ದೊಡ್ಡ ಪಕ್ಷ!...

 ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಮೊತ್ತಮೊದಲ ಬಾರಿ ನಡೆದ ಜಿಲ್ಲಾ ಅಭಿವೃದ್ಧಿ ಪರಿಷತ್‌ ಚುನಾವಣೆಯಲ್ಲಿ ಫಾರೂಖ್‌ ಅಬ್ದುಲ್ಲಾ ನೇತೃತ್ವದ ಗುಪ್ಕಾರ್‌ ಕೂಟ 110 ಸ್ಥಾನ ಜಯಿಸಿ ಅತಿದೊಡ್ಡ ಕೂಟವಾಗಿ ಹೊರಹೊಮ್ಮಿದೆ. ಆದರೆ 75 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಆಕ್ಸ್‌ಫರ್ಡ್‌ ಲಸಿಕೆ ಭಾರತದಲ್ಲಿ ತುರ್ತು ಬಳಕೆಗೆ ಮುಂದಿನ ವಾರ ಅನುಮತಿ?...

ಬ್ರಿಟನ್ನಿನಲ್ಲಿ ಕೊರೋನಾ ವೈರಸ್‌ನ ಹೊಸ ಪ್ರಭೇದ ಪತ್ತೆಯಾಗಿ ಭಾರತದಲ್ಲೂ ತೀವ್ರ ಆತಂಕ ಮೂಡಿರುವ ಬೆನ್ನಲ್ಲೇ ಮುಂದಿನ ವಾರವೇ ಆಕ್ಸ್‌ಫರ್ಡ್‌-ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಗೆ ಭಾರತ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಬಿಸಿಸಿಐ ಪ್ರಧಾನ ವ್ಯವಸ್ಥಾಪಕ ಕೆವಿಪಿ ರಾವ್ ತಲೆದಂಡ...

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತನ್ನ ಪ್ರಧಾನ ವ್ಯವಸ್ಥಾಪಕ ಕೆವಿಪಿ ರಾವ್ ಅವರ ತಲೆದಂಡವಾಗಿದೆ. ದೇಶದ ಪರ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಕೆವಿಪಿ ರಾವ್ ಧನ್ಯವಾದ ಅರ್ಪಿಸಿದ್ದಾರೆ.

ಬ್ರೇಕಪ್‌ ಆಗಿ ತಿಂಗಳಿಗೇ ಸಾಲ್ಟ್ ಬೇ ಜೊತೆ ಲಿಂಕ್‌ಅಪ್‌? ಬಾಯಿಬಿಟ್ಟ ಕೃಷ್ಣಾ ಶ್ರಾಫ್‌!...

ಬಾಲಿವುಡ್‌ ಹಿರಿಯ ನಟ ಜಾಕಿ ಶ್ರಾಫ್ ಮಗಳು ಕೃಷ್ಣಾ ಅವರ ವೈಯಕ್ತಿಕ ಜೀವನ ಯಾವಾಗಲೂ  ಚರ್ಚೆಯಲ್ಲಿರುತ್ತದೆ. ಎಬೊನ್ ಹೈಮ್ಸ್‌ನ ಜೊತೆ ಬ್ರೇಕಪ್‌ ಮಾಡಿಕೊಂಡು, ತಿಂಗಳೊಳಗೆ ದುಬೈ ಶೆಫ್‌ ಜೊತೆ ಲಿಂಕಪ್ ಸುದ್ದಿ ವರದಿಯಾಗಿದೆ.

BSNLನಿಂದ 199 ರೂ. ಪ್ರಿಪೇಡ್ ಪ್ಲ್ಯಾನ್, ನಿತ್ಯ 2ಜಿಬಿ ಹೈಸ್ಪೀಡ್ ಇಂಟರ್ನೆಟ್!...

ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಿಂದ ತೀವರ್ ಸ್ಪರ್ಧೆಯನ್ನು ಎದುರಿಸುತ್ತಿರುವ ಭಾರತ್ ಸಂಚಾರ್ ನಿಗಮ ಲಿ.(ಬಿಎಸ್‌ಎನ್‌ಎಲ್), ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ಲ್ಯಾನ್‌ಗಳನ್ನು ಘೋಷಿಸುತ್ತಿದೆ. ತೀವ್ರ ಪೈಪೋಟಿಯ ಹೊರತಾಗಿಯೂ ಬಿಎಸ್‌ಎನ್‌ಎಲ್ ಸರ್ವವ್ಯಾಪಿ ನೆಟ್‌ವರ್ಕ್‌ನಿಂದಾಗಿ ಗ್ರಾಹಕರ ಮೆಚ್ಚಿನ ಕಂಪನಿಯಾಗಿದೆ.

ಆನ್‌ಲೈನ್‌ ಸಾಲ ನೀಡಿಕೆ ಆ್ಯಪ್‌ ಬಳಸಿದ್ದೀರಾ? ಇಲ್ಲಿದೆ ಶಾಕಿಂಗ್ ನ್ಯೂಸ್...

ಜನರಿಗೆ ಯಾವುದೇ ಖಾತರಿ ಇಲ್ಲದೇ ದೀಢೀರ್‌ ಸಾಲ ನೀಡುವ ಡಿಜಿಟಲ್‌ ಸಾಲದ ವೇದಿಕೆಗಳು ಹಾಗೂ ಮೊಬೈಲ್‌ ಆ್ಯಪ್‌ಗಳ ಆಮಿಷಕ್ಕೆ ಬಲಿ ಆಗದಂತೆ ರಿಸವ್‌ರ್‍ ಬ್ಯಾಂಕ್‌ ಬುಧವಾರ ಎಚ್ಚರಿಕೆ ನೀಡಿದೆ.

ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋ ಟ್ವೀಟ್ ಮಾಡಿ ಟೆಸ್ಲಾಗೆ ಚಾಲೆಂಜ್ ಹಾಕಿದ ಮಹೀಂದ್ರ!...

ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿರುತ್ತಾರೆ. ಕುತೂಹಲಕರ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ, ದೇಶದ ಗಮನಸೆಳೆದಿದ್ದಾರೆ. ಈಗಾಗಲೇ ಹಲವು ಮಾಹಿತಿಗಳು, ಘೋಷಣೆಗಳನ್ನು, ಬಹುಮಾನಗಳನ್ನು ಆನಂದ್ ಮಹೀಂದ್ರ ಘೋಷಿಸಿದ್ದಾರೆ. ಇದೀಗ ಆನಂದ್ ಮಹೀಂದ್ರ ಧರ್ಮಸ್ಥಳದ ಎತ್ತಿನ ಗಾಡಿ ಕುರಿತು ಟ್ವೀಟ್ ಮಾಡಿದ, ಅಮೆರಿಕದ ಟೆಸ್ಲಾ ಕಂಪನಿ ಸಿಇಓಗೆ ಚಾಲೆಂಜ್ ಹಾಕಿದ್ದಾರೆ

25 ಕೋಟಿ ರೂ ಕಾರಿಗೆ 52 ಕೋಟಿ ರೂ ನಂಬರ್ ಪ್ಲೇಟ್; ದುಬಾರಿ ರಿಜಿಸ್ಟ್ರೇಶನ್‌ಗೆ ದಂಗಾದ ಪೊಲೀಸ್!...

ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸುವ ಬಹುತೇಕರು ತಮಗಿಷ್ಟವಾದ ನಂಬರ್ ಪ್ಲೇಟ್ ಖರೀದಿಸುತ್ತಾರೆ. ಇದಕ್ಕಾಗಿ  ಹೆಚ್ಚು ಹಣ ವ್ಯಯಿಸುತ್ತಾರೆ. ಲಕ್ಷ, ಕೋಟಿ ರೂಪಾಯಿ ಖರ್ಚು ಮಾಡಿ ತಮಗೆ ಬೇಕಾದ, ತಮ್ಮ ಅದೃಷ್ಠದ ನಂಬರ್ ಖರೀದಿಸುತ್ತಾರೆ. ಹೀಗೆ 25 ಕೋಟಿ ರೂಪಾಯಿ ನೀಡಿ ವಿಶ್ವದ ಅತ್ಯಂತ ದುಬಾರಿ ಬುಗಾಟಿ ಚಿರೋನ್ ಕಾರು ಖರೀದಿಸಿ ಮಾಲೀಕ, ನಂಬರ್ ಪ್ಲೇಟ್‌ಗಾಗಿ ಕಾರಿಗಿಂತ ಎರಡು ಪಟ್ಟು ಹಣ ಖರ್ಚು ಮಾಡಿದ್ದಾರೆ. 

ಈಗ ಅಯೋಧ್ಯೆ ಮಸೀದಿ ನಿರ್ಮಾಣ ವಿವಾದ!...

ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದ ಅಂತ್ಯಗೊಳ್ಳುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ಹೊಸ ವಿವಾದ ಶುರುವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ನಿರ್ಮಾಣವಾಗಲಿರುವ ಮಸೀದಿ ವಕ್ಫ್ ಕಾಯ್ದೆಗೆ ವಿರುದ್ಧವಾದುದು ಹಾಗೂ ಶರಿಯತ್‌ ಕಾನೂನಿನ ಪ್ರಕಾರ ಅಕ್ರಮ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸದಸ್ಯ ಜಫರ್ಯಾಬ್‌ ಜಿಲಾನಿ ಆರೋಪಿಸಿದ್ದಾರೆ.