ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮಗನನ್ನು ಕೊಲೆ ಮಾಡಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ. ಯಾದಗಿರಿಯಲ್ಲಿ ಆಸ್ತಿ ವಿಚಾರವಾಗಿ ಮೈದುನ ಅತ್ತಿಗೆಗೆ ವಿಷ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಬಂಧಿಸುವಂತೆ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.
ವಿಜಯಪುರ: ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ತಾಳಿಕೋಟಿ ತಾಲೂಕಿನ
ಕೊಡಗಾನೂರ ಗ್ರಾಮದ ಮೌನೇಶ ಬಸವರಾಜ ಬಡಿಗೇರ (20) ಜನವರಿ 30 ರಂದು ಕೊಡಗಾನೂರ ಮನೆಯಿಂದ ನಾಪತ್ತೆಯಾಗಿದ್ದ. ಫೆ.2 ಎಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದ ಕಾಲುವೆಯಲ್ಲಿ ಶವ ಪತ್ತೆಯಾಗಿತ್ತು.
ಇದೀಗ ಈ ಪ್ರಕರಣ ತಿರುವು ಪಡೆದುಕೊಂಡಿದೆ. ನನ್ನ ಮಗ ಮೌನೇಶ ಬಡಿಗೇರನನ್ನು ಕೊಲೆ ಮಾಡಿ ಬಿಸಾಕಿದ್ದಾರೆ ಎಂದು ಯುವಕನ ತಾಯಿ ಆರೋಪಿಸಿದ್ದಾರೆ. ಮೌನೇಶ ತಾಳಿಕೋಟೆ ಪಟ್ಟಣದ ಯುವತಿಯನ್ನು ಪ್ರೀತಿಸುತ್ತಿದ್ದ, ಅವರ ಕುಟುಂಬದವರೆ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ಯುವತಿಯ ಕುಟುಂಬಸ್ಥರು ನನ್ನ ಮಗನಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಎರಡು ವರ್ಷಗಳಿಂದ ತಾಳಿಕೋಟೆ ಪಟ್ಟಣದ ಯುವತಿಯನ್ನು ಮಗ ಮೌನೇಶ ಪ್ರೀತಿಸುತ್ತಿದ್ದ ಎಂದು ಒಟ್ಟು 9 ಜನರ ವಿರುದ್ಧ ಮುದ್ದೇಬಿಹಾಳ ಠಾಣೆಯಲ್ಲಿ ಮೌನೇಶ ತಾಯಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
undefined
Illegal Road Digging in Bengaluru: ಅನುಮತಿ ಇಲ್ಲದೆ ರಸ್ತೆ ಅಗೆದರೆ ಪೊಲೀಸರಿಂದಲೂ ಕ್ರಮ!
ಅತ್ತಿಗೆಗೆ ವಿಷ ಹಾಕಿ ಕೊಲೆ ಮಾಡಿದ ಮೈದುನ, ಕುಟುಂಬಸ್ಥರ ಆಕ್ರೊಶ:ಯಾದಗಿರಿ (ಫೆ.4): ಯಾದಗಿರಿ (Yadgir) ತಾಲೂಕಿನ ಕುರಕುಂಬಳ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮೈದುನ ಅತ್ತಿಗೆಗೆ ವಿಷ ಹಾಕಿ ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಮಾಡುವಂತೆ ಕುಟುಂಬಸ್ಥರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಬಂಧನ ಮಾಡದೇ ಪೋಲಿಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ನಾವು ಕೈಮುಗಿಯುತ್ತೇವೆ ಆರೋಪಿಗಳನ್ನು ಬಂಧನ ಮಾಡಿ ಎಂದು ಕುಟುಂಬಸ್ಥರು ಪೊಲೀಸರಿಗೆ ಕೈಮುಗಿದು ನೋವು ತೊಡಿಕೊಂಡಿದ್ದಾರೆ. ಇದೇ ವೇಳೆ ಪೋಲಿಸರು ಮತ್ತು ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ.
ಇದಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನರಿತ ಪೋಲಿಸರು ಮಾರ್ಗ ಮಧ್ಯ ಶವ ತಡೆದು , ಆರೋಪಿಗಳನ್ನು ಬಂಧಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಶಾಂತಿಬಾಯಿ ಕುಟುಂಬಸ್ಥರು ಪೊಲೀಸರನ್ನು ತರಾಟೆಗೆತ್ತಿಕೊಂಡಿದ್ದಾರೆ.
ಯಾದಗಿರಿ ತಾಲೂಕಿನ ಕುರಕುಂಬಳ ಗ್ರಾಮದಲ್ಲಿ ಜನವರಿ 30 ರಂದು ಆಸ್ತಿ ವಿಚಾರವಾಗಿ ಶಾಂತಿಬಾಯಿ ಎಂಬುವವರಿಗೆ ಮೈದುನ ಮನು ಪವಾರ ಹಲ್ಲೆ ಮಾಡಿ ವಿಷ ಕುಡಿಸಿದ್ದ. ತೀವ್ರ ಅಸ್ವಸ್ಥಗೊಂಡ ಶಾಂತಿಬಾಯಿ ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಾಂತಿಬಾಯಿ ಸಾವನ್ನಪ್ಪಿದ್ದು, ಕಲಬುರಗಿಯಿಂದ ಯಾದಗಿರಿಗೆ ಇಂದು ಅಂಬುಲೆನ್ಸ್ ನಲ್ಲಿ ಶಾಂತಿಬಾಯಿ ಶವ ತೆಗೆದುಕೊಂಡು ಕುಟುಂಬಸ್ಥರು ಬಂದಿದ್ದರು.
HIJAB ROW: ಹಿಜಾಬ್‌ಗೆ ಪ್ರತಿಯಾಗಿ ಹುಡುಗರಿಂದ ಕೇಸರಿ ಶಾಲ್; ಅನುಮತಿಸಿದ ಕಾಲೇಜು
ಚಿಕನ್ ಪಾಕ್ಸ್ ರೋಗಕ್ಕೆ ಇಬ್ಬರು ಮಕ್ಕಳು ಬಲಿ?: ಜಿಲ್ಲೆಯ ನಾಲ್ವರು ಮಕ್ಕಳಲ್ಲಿ ಚಿಕನ್ ಪಾಕ್ಸ್ (Chickenpox) ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಮಕ್ಕಳು (Children) ಸಾವನ್ನಪ್ಪಿದ್ದಾರೆಂದು (Death) ತಿಳಿದು ಬಂದಿದೆ. ಜಿಲ್ಲೆಯ ಚಿತ್ತಾಪುರ (Chittapur) ತಾಲೂಕಿನ ನಾಲವಾರ್ ಗ್ರಾಮದಲ್ಲಿ ಸ್ಟೇಷನ್ ಬಡಾವಣೆಯ ನಿವಾಸಿಗಳಾದ ಇಮ್ರಾನ್ ಪಟೇಲ್ (16) ಹಾಗೂ ರೆಹಮಾನ್ ಪಟೇಲ್ (14) ಸಾವಿಗೀಡಾದ ಬಾಲಕರು.
ಹಾಪೀಸಾ ಬೇಗಂ ಎಂಬುವರ ನಾಲ್ವರು ಮಕ್ಕಳಲ್ಲಿ ಚಿಕನ್ ಪಾಕ್ಸ್ ಸಾಂಕ್ರಾಮಿಕ ರೋಗ (Infectious Disease) ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಬೇಗಂ ತನ್ನ ಇಬ್ಬರು ಮಕ್ಕಳನ್ನು ಸೊಲ್ಲಾಪುರದ (Solapur) ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಚಿಕಿತ್ಸೆ (Treatment) ಫಲಿಸದೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆಂದು ಗೊತ್ತಾಗಿದೆ.
ಸದ್ಯ ಹಾಪೀಸಾ ಸೇರಿ ಇನ್ನಿಬ್ಬರು ಮಕ್ಕಳು ಸಹ ಚಿಕನ್ ಪಾಕ್ಸ್ ರೋಗದಿಂದ ಬಳಲುತ್ತಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ರಕ್ತದ ಮಾದರಿಯನ್ನು ಪಡೆದ ಆರೋಗ್ಯ ಇಲಾಖೆ (Department of Health) ಸಿಬ್ಬಂದಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.ಇದೇ ಬಡಾವಣೆಯ ಮತ್ತಿಬ್ಬರಲ್ಲಿಯೂ ಸಹ ಚಿಕನ್ ಪಾಕ್ಸ್ ರೋಗದ ಲಕ್ಷಣಗಳು ಕಂಡುಬಂದಿರುವುದಾಗಿ ಚಿತ್ತಾಪುರ ಟಿಎಚ್‌ಒ ಅಮರದೀಪ ತಿಳಿಸಿದ್ದಾರೆ.