ಕೊರೋನಾ ಹೆಚ್ಚಳ: 'ಅಲಕ್ಷಿಸಿದರೆ ಮತ್ತೆ ಲಾಕ್‌ಡೌನ್‌'

By Kannadaprabha News  |  First Published Aug 4, 2021, 10:58 AM IST

*  ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
*  ನಿಯಾಮವಳಿ ಮೀರಿದರೆ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರು ಸೂಚನೆ
*  ಕೋವಿಡ್‌ ನಿಯಾಮವಳಿ ಕಡ್ಡಾಯವಾಗಿ ಪಾಲಿಸಬೇಕು


ಕೊಟ್ಟೂರು(ಆ.04): ಕೊರೋನಾ 3ನೇ ಅಲೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮ​ವಾ​ಗಿ ತಾಲೂಕು ಮತ್ತು ಕೊಟ್ಟೂರು ಪಟ್ಟಣದ ಜನತೆ ಕೋವಿಡ್‌ ನಿಯಾಮವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಬರಮಾಡಿಕೊಳ್ಳಬೇಕಾದೀತು ಎಂದು ತಹಶೀಲ್ದಾರ್‌ ಎಂ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ. 

ತಾಲೂಕು ಕಾರ್ಯಾಲಯದಲ್ಲಿ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು, ಡಾಬಾ ಹೋಟೆಲ್‌ ಮಾಲೀಕರು ಮತ್ತಿತರ ಸಭೆಯನ್ನು ಕರೆದು ಮಾತನಾಡಿದ ಅವರು ಸಾರ್ವಜನಿಕರು ಅಂಗಡಿಗಳಿಗೆ ಮತ್ತು ಹೋಟೆಲ್‌ಗಳಿಗೆ ಬರುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸೂಚಿಸಬೇಕು. ಸಾಮಾಜಿಕ ಅಂತರ ಕಾಪಾಡಲೆಂದೆ ಅಂಗಡಿಗಳವರು ಬಾಕ್ಸ್‌ಗಳ ಅಂತರದಲ್ಲಿ ಮಾರ್ಕ್ ಮಾಡಬೇಕು. ನಿಯಾಮವಳಿಗಳನ್ನು ಮೀರಿದರೆ ಪೊಲೀಸರು ಎಫ್‌ಐಆರ್‌ ದಾಖಲಿಸುವಂತೆ ಸೂಚಿಸುವುದಾಗಿ ಹೇಳಿದರು.

Latest Videos

undefined

ಮಾರ್ಚ್‌ನಲ್ಲಿ ​ ಗಡ್ಡಧಾರಿ ವ್ಯಕ್ತಿ ಸಿಎಂ-ಮೈಲಾರಲಿಂಗೇಶ್ವರನ ಭವಿಷ್ಯ: ಯಾರು ಆ ಗಡ್ಡಧಾರಿ?

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಎಸ್‌. ಗೀರೀಶ್‌, ಆರೋಗ್ಯ ಅಧಿಕಾರಿ ಬದ್ಯಾ ನಾಯ್ಕ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕಿ ಅನುಷಾ, ಎಸ್‌.ಐ. ರುದ್ರಮುನಿ, ಉಪ ತಹಸೀಲ್ದಾರ್‌ ನಾಗರಾಜ, ಕಂದಾಯ ಪರಿವೀಕ್ಷಕ ಎಸ್‌.ಎಂ. ಹಾಲಸ್ವಾಮಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
 

click me!