Yadgir : ಸುರಪುರ ಶಾಸಕ ರಾಜೂಗೌಡಗೆ ಪಿತೃವಿಯೋಗ!

Published : Jan 01, 2022, 02:51 PM ISTUpdated : Jan 01, 2022, 03:07 PM IST
Yadgir : ಸುರಪುರ ಶಾಸಕ ರಾಜೂಗೌಡಗೆ ಪಿತೃವಿಯೋಗ!

ಸಾರಾಂಶ

*ಶಾಸಕ ರಾಜೂಗೌಡ ತಂದೆ ಶಂಭನಗೌಡ(75) ನಿಧನ *ಪಾರ್ಶ್ವವಾಯುಗೆ ತುತ್ತಾಗಿದ್ದ ರಾಜುಗೌಡ ತಂದೆ *ಅಬಕಾರಿ ಇಲಾಖೆಯಿಂದ ನಿವೃತ್ತಿ ಹೊಂದಿದ್ದ ಶಂಭನಗೌಡ  

ಯಾದಗಿರಿ (ಜ.1): ಜಿಲ್ಲೆಯ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ (MLA Raju Gowda) ತಂದೆ ಶಂಭನಗೌಡ(75) ನಿಧನರಾಗಿದ್ದಾರೆ. ಪಾರ್ಶ್ವವಾಯುಗೆ ತುತ್ತಾಗಿದ್ದ ಶಂಭನಗೌಡ ಅವರು ಇಂದು ಸುರಪುರದ ನಿವಾಸದಲ್ಲಿ ನಿಧನರಾಗಿದ್ದಾರೆ. ಶಂಭನಗೌಡಗೆ ಶಾಸಕ ರಾಜೂಗೌಡ ಸೇರಿದಂತೆ  ಮೂರು ಜನ ಮಕ್ಕಳಿದ್ದಾರೆ. ಶಾಸಕ ರಾಜೂಗೌಡ, ಹಣಮಂತ್ರಾಯಗೌಡ ಮತ್ತು ಮೈತ್ರಾದೇವಿ, ಶಂಭನಗೌಡ ಮೂರು ಮಕ್ಕಳು. 

ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಶಂಭನಗೌಡ ಇಲಾಖೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದರು. ಕಳೆದ 7-8 ತಿಂಗಳುಗಳಿಂದ ಪಾರ್ಶ್ವವಾಯು ನಿಂದ ಬಳಲುತ್ತಿದ್ದ ಶಂಭನಗೌಡ ಇಂದು ಇಹ ಲೋಕ ತ್ಯಜಿಸಿದ್ದಾರೆ. ನಾಳೆ ಸ್ವಗ್ರಾಮ ಕೊಡೇಕಲ್ ನಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಶಾಸಕ ರಾಜೂಗೌಡ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿBalan Pootheri: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ದಿನವೇ ಪತ್ನಿ ವಿಯೋಗ 

2020ರ ಜನವರಿಯಲ್ಲಿ ಶಾಸಕ ರಾಜುಗೌಡ ತಾಯಿ ತಿಮ್ಮಮ್ಮ ಶಂಬನಗೌಡ ನಾಯಕ್ ಬೆಂಗಳೂರಿನಲ್ಲಿ ವಿಧಿವಶರಾಗಿದ್ದರು.  ಪಾರ್ಶ್ವವಾಯುಗೆ ತುತ್ತಾಗಿದ್ದ 64 ವರ್ಷದ ತಿಮ್ಮಮ್ಮ ಅವರನ್ನ ಬೆಂಗಳೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೆ ನಿಧನಾರಾಗಿದ್ದರು. ರಾಜುಗೌಡ ಗೆಲುವಿಗಾಗಿ ಅವರ ತಾಯಿ ತಿಮ್ಮಮ್ಮ ಅವರು ಸಾಕಷ್ಟು ಶ್ರಮಿಸಿದ್ದರು. 

PREV
Read more Articles on
click me!

Recommended Stories

ಬೆಳೆದ ಬೆಳೆಗಳ ಕಾವಲಿಗೆ ನಿಂತ ಸನ್ನಿ ಸುಂದರಿ, ಯಾದಗಿರಿ ರೈತರ ಪ್ರಯೋಗ ಫುಲ್‌ ಸಕ್ಸಸ್‌!
ನಾನು ಯಾವ ಪ್ರತಿನಿಧಿಯಾಗಿಯೂ ಡಿ.ಕೆ.ಶಿವಕುಮಾರ್‌ ಭೇಟಿಯಾಗಿಲ್ಲ: ಸಚಿವ ಕೆ.ಜೆ.ಜಾರ್ಜ್‌