
ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರು ಪಾಕಿಸ್ತಾನ ಸೇನೆಯ ಜಂಟಿ ಸೇನಾ ಸಿಬ್ಬಂದಿ ಸಮಿತಿಯ ಮುಖ್ಯಸ್ಥ ಜನರಲ್ ಸಾಹಿರ್ ಶಂಶದ್ ಮಿರ್ಜಾ ಅವರಿಗೆ ಉಡುಗೊರೆಯಾಗಿ ನೀಡಿದ ‘ವಿಜಯದ ಕಲೆ’ (ಆರ್ಟ್ ಆಫ್ ಟ್ರಯಂಪ್) ಕಲಾಕೃತಿ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಮ್ಯಾಪ್‌ನಲ್ಲಿ ಅಸ್ಸಾಂ ಮತ್ತು ಭಾರತದ ಇತರೆ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವಾಗಿ ಬಿಂಬಿಸಲಾಗಿದೆ. ಈ ಉಡುಗೊರೆ ಕೇವಲ ರಾಜತಾಂತ್ರಿಕ ಸೂಚಕ ಆಗಿರಲಿಕ್ಕಿಲ್ಲ, ಉದ್ದೇಶಪೂರ್ವಕವಾಗಿ ನೀಡಿರುವಂತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರು ಕಳೆದ ವಾರಾಂತ್ಯದಲ್ಲಿ ಢಾಕಾಗೆ ಭೇಟಿ ನೀಡಿದ್ದಾಗ ಯೂನುಸ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಈ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಾಗಿದೆ.
ಯೂನುಸ್ ಈಶಾನ್ಯ ಭಾರತದ ರಾಜ್ಯಗಳ ವಿಚಾರ ಎತ್ತುತ್ತಿರುವುದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದೆ ಈಶಾನ್ಯ ಭಾರತದ ರಾಜ್ಯಗಳ ಕುರಿತು ವಿದೇಶಿ ನೆಲದಲ್ಲೂ ಅವರು ಪ್ರಸ್ತಾಪ ಮಾಡಿದ್ದರು. ಏಪ್ರಿಲ್‌ನಲ್ಲಿ ಚೀನಾಗೆ ನೀಡಿದ್ದ ಮೊದಲ ಭೇಟಿಯಲ್ಲಿ ಯೂನುಸ್ ಅವರು ಬಾಂಗ್ಲಾ ಮಾತ್ರ ಈ ಭಾಗದಲ್ಲಿ ಸಾಗರದ ಏಕೈಕ ರಕ್ಷಕ ಎಂದು ಹೇಳಿದ್ದರು. ಈಶಾನ್ಯ ಭಾರತದ ರಾಜ್ಯಗಳು ಬಾಂಗ್ಲಾದಿಂದ ಸುತ್ತುವರಿದಿರುವ ಹಿನ್ನೆಲೆಯಲ್ಲಿ ಚೀನಾಗೆ ಈ ಪ್ರದೇಶದಲ್ಲಿ ಮಹತ್ವದ ಪಾತ್ರ ವಹಿಸುವಂತೆ ಪರೋಕ್ಷವಾಗಿ ಆಹ್ವಾನ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ