
ಯೆಮೆನ್ (ಜು.15) ಭಾರತದ ರಾಜತಾಂತ್ರಿಕ ಮಾತುಕತೆ, ಮತ್ತೊಂದೆಡೆ ಭಾರತೀಯ ಪ್ರಾರ್ಥನೆ ಫಲಿಸಿದೆ. ಜುಲೈ 16ಕ್ಕೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ಮೂಲಕ ನರ್ಸ್ ನಿಮಿಷಾ ಪ್ರಿಯಾಗೆ ಯಮೆನ್ ದೇಶ ತಾತ್ಕಾಲಿಕ ಬ್ರೇಕ್ ಹಾಕಿದೆ ಎಂದು ವರದಿಯಾಗಿದೆ. ಭಾರತದ ಸೂಫಿ ವಿದ್ವಾಂಸರ ಜೊತೆ ಭಾರತ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಇದರ ಪರಿಣಾಮ ಜುಲೈ 16ರಂದು ನಿಗಧಿಯಾಗಿದ್ದ ಗಲ್ಲು ಶಿಕ್ಷೆಯನ್ನು ಯೆಮೆನ್ ಮುಂದೂಡಿದೆ. ಯೆಮೆನ್ ಹಾಗೂ ಭಾರತದ ಮಹತ್ವದ ಮಾತುಕತೆಯಿಂದ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.
2017ರಲ್ಲಿ ತಲಾಲ್ ಅಬ್ದೋ ಮಹೆದಿ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ ಯೆಮೆನ್ ಕೋರ್ಟ್, ಗಲ್ಲು ಶಿಕ್ಷೆ ವಿಧಿಸಿತ್ತು.ಜುಲೈ 16ಕ್ಕೆ ಗಲ್ಲು ಶಿಕ್ಷೆ ನಿಗಧಿಯಾಗಿತ್ತು.
ನಿಮಿಷಾ ಪ್ರಿಯಾಗೆ ಯೂಸುಫ್ ಅಲಿ ಸಂಪೂರ್ಣ ಬೆಂಬಲ
ಯೆಮನ್ ಜೈಲಿನಲ್ಲಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾಳ ಬಿಡುಗಡೆಗೆ ಬೆಂಬಲ ನೀಡುವುದಾಗಿ ಉದ್ಯಮಿ ಎಂ.ಎ. ಯೂಸುಫ್ ಅಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. ನಿಮಿಷಾ ಪ್ರಿಯಾಳ ಬಿಡುಗಡೆಗೆ ಯೂಸುಫ್ ಅಲಿ ಮಧ್ಯಪ್ರವೇಶಿಸುತ್ತಿರುವುದಾಗಿ ನ್ಯಾಯಮೂರ್ತಿ ಕುರ್ಯನ್ ಜೋಸೆಫ್ ತಿಳಿಸಿದ್ದಾರೆ. ಚರ್ಚೆ ಮತ್ತು ಹಣ ಸಂಗ್ರಹಣೆಯಲ್ಲಿ ಯೂಸುಫ್ ಅಲಿಯವರ ಸಹಕಾರ ಇರುತ್ತದೆ ಎಂದವರು ಹೇಳಿದರು. ನಿಮಿಷಾ ಪ್ರಿಯಾಳ ಬಿಡುಗಡೆಗೆ ಅನಧಿಕೃತ ಮಾತುಕತೆಗಳು ನಡೆಯುತ್ತಿವೆ. ಯೆಮನ್‌ಗೆ ಯಾರು ಹೋಗಬೇಕೆಂದು ಕೇಂದ್ರ ಸರ್ಕಾರ ಶೀಘ್ರದಲ್ಲೇ ತೀರ್ಮಾನಿಸಲಿದೆ. ಭಾರತದ ತಂಡವು ಯೆಮನ್‌ನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ