ಚೀನಾದ ವುಹಾನ್‌ನಲ್ಲಿ ಒಂದು ತಿಂಗಳ ಬಳಿಕ ಮತ್ತೆ ವೈರಸ್ ಪ್ರತ್ಯಕ್ಷ| ಇದರ ಬೆನ್ನಲ್ಲೇ ವುಹಾನ್‌ನಲ್ಲಿ 1.1 ಕೋಟಿ ಜನರಿಗೆ ಕೊರೋನಾ ಟೆಸ್ಟ್| 10 ದಿನದೊಳಗೆ ಎಲ್ಲ ನಾಗರಿಕರ ತಪಾಸಣೆ
ವುಹಾನ್(ಮೇ.13): ಕೊರೋನಾ ಸೋಂಕು ವಿಶ್ವದಲ್ಲೇ ಮೊದಲು ಕಾಣಿಸಿಕೊಂಡಿದ್ದ ಚೀನಾದ ವುಹಾನ್‌ನಲ್ಲಿ ಒಂದು ತಿಂಗಳ ಬಳಿಕ ಮತ್ತೆ ವೈರಸ್ ಪ್ರತ್ಯಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲ 1.1 ಕೋಟಿ ಜನರನ್ನು ಕೊರೋನಾ ತಪಾಸಣೆಗೆ ಒಳಪಡಿಸಲು ಚೀನಾ ಸರ್ಕಾರ ಯೋಜನೆ ಹಾಕಿಕೊಂಡಿದೆ.
35 ದಿನಗಳ ಬಳಿಕ ವುಹಾನ್‌ನಲ್ಲಿ ಮತ್ತೆ ಸೋಂಕು!
undefined
10 ದಿನದೊಳಗೆ ಎಲ್ಲ ನಾಗರಿಕರ ತಪಾಸಣೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಯಾವ ರೀತಿ ತಪಾಸಣೆ ನಡೆಸಬಹುದು ಎಂಬ ಯೋಜನಾ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ವುಹಾನ್‌ನಲ್ಲಿ 35 ದಿನಗಳ ಬಳಿಕ ಕಳೆದ ಶನಿವಾರ ಹಾಗೂ ಭಾನುವಾರ 6 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದವು. ಇದು ಏಪ್ರಿಲ್ 8ರಂದು ಲಾಕ್‌ಡೌನ್ ತೆರವಾಗಿದ್ದ ನಗರದಲ್ಲಿ ಆತಂಕ ಮೂಡಿಸಿದೆ.