45500 ವರ್ಷ ಹಳೆಯ, ಅತಿಪುರಾತನ ಗುಹಾ ಚಿತ್ರ ಇಂಡೋನೇಷ್ಯಾದಲ್ಲಿ ಪತ್ತೆ

By Kannadaprabha News  |  First Published Jan 15, 2021, 12:56 PM IST

45,500 ವರ್ಷಗಳ ಹಿಂದೆ ಗುಹೆಯಲ್ಲಿ ಬಿಡಿಸಲಾಗಿರುವ ಕಾಡು ಹಂದಿಯ ಚಿತ್ರ | ಇಂಡೋನೇಷ್ಯಾದಲ್ಲಿ ಪತ್ತೆ


ಜಕಾರ್ತಾ(ಜ.15): 45,500 ವರ್ಷಗಳ ಹಿಂದೆ ಗುಹೆಯೊಂದರಲ್ಲಿ ಬಿಡಿಸಲಾಗಿರುವ ಕಾಡು ಹಂದಿಯ ಚಿತ್ರವೊಂದನ್ನು ಇಂಡೋನೇಷ್ಯಾದಲ್ಲಿ ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ.

ಇಂಡೋನೇಷ್ಯಾದ ದಕ್ಷಿಣ ಸುಲಾವೆಸಿ ಕಣಿವೆಯಲ್ಲಿ ಈ ಚಿತ್ರ ಪತ್ತೆಯಾಗಿದ್ದು, ಇದರಲ್ಲಿ ಇಲ್ಲಿನ ಸ್ಥಳೀಯ ತಳಿ ‘ವಾರ್ಟಿ ಕಾಡು ಹಂದಿ’ಯನ್ನು ಹೋಲುವ ಚಿತ್ರವಿದೆ. ‘ಲಿಯಾಂಗ್‌ ಟೆಡೊಂಗ್‌ ಸುಣ್ಣದ ಗುಹೆಯಲ್ಲಿ ಈ ಚಿತ್ರ ಪತ್ತೆಯಾಗಿದೆ.

Latest Videos

undefined

ಮದುರೈನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್‌ ಗಾಂಧಿ

ಕೆಂಪು ಕಾವಿ ವರ್ಣದಿಂದ ಈ ಚಿತ್ರವನ್ನು ಬಿಡಿಸಲಾಗಿದೆ. ಚಿತ್ರದಲ್ಲಿ ಕಾಡು ಹಂದಿಯು ಸಂಘರ್ಷಕ್ಕೆ ಇಳಿದಿರುವಂತೆ ಅಥವಾ ಬೇರೆ ಎರಡು ಹಂದಿಗಳೊಂದಿಗೆ ಸಂವಾದ ನಡೆಸುತ್ತಿರುವಂತೆ ಭಾಸವಾಗುತ್ತದೆ’ ಎಂದು ಆಸ್ಪ್ರೇಲಿಯಾದ ಗ್ರೀಫಿತ್‌ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಆ್ಯಡಂ ಬ್ರುಮ್‌ ತಿಳಿಸಿದ್ದಾರೆ. ಇದಕ್ಕೂ ಮೊದಲು 43,900 ವರ್ಷ ಹಳೆಯದಾದ ಗುಹ ಚಿತ್ರಕಲೆಯೇ ಇದುವರೆಗಿನ ಅತಿ ಪುರಾತನ ಚಿತ್ರಕಲೆಯಾಗಿತ್ತು.

click me!