ಪೋಪ್‌ ಫಾನ್ಸಿಸ್‌, ಮಾಜಿ ಪೋಪ್‌ಗೆ ಕೊರೋನಾ ಲಸಿಕೆ

By Suvarna NewsFirst Published Jan 15, 2021, 11:12 AM IST
Highlights

ಪೋಪ್‌ ಫ್ರಾನ್ಸಿಸ್‌ (84) ಮತ್ತು ಹಿಂದಿನ ಪೋಪ್‌ ಬೆನೆಡಿಕ್ಟ್ ಅವರಿಗೆ ಕೊರೋನಾ ಲಸಿಕೆ | ವ್ಯಾಟಿಕನ್‌ನಲ್ಲಿ 825 ಜನರಿದ್ದು, ಈವರೆಗೆ ಅಲ್ಲಿಯ 27 ಜನರಿಗೆ ಸೋಂಕು

ವ್ಯಾಟಿಕನ್(ಜ.15)‌: ಕ್ರೈಸ್ತರ ಅತ್ಯುನ್ನತ ಧರ್ಮ ಗುರುಗಳಾದ ಪೋಪ್‌ ಫ್ರಾನ್ಸಿಸ್‌ (84) ಮತ್ತು ಹಿಂದಿನ ಪೋಪ್‌ ಬೆನೆಡಿಕ್ಟ್ ಅವರಿಗೆ ಗುರುವಾರ ಕೊರೋನಾ ಲಸಿಕೆ ನೀಡಲಾಯಿತು.

ವಿಶ್ವದ ಅತಿಚಿಕ್ಕ ದೇಶವಾಗಿರು ವ್ಯಾಟಿಕನ್‌ನಲ್ಲಿ 825 ಜನರಿದ್ದು, ಈವರೆಗೆ ಅಲ್ಲಿಯ 27 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಅಲ್ಲಿ ಫೈಝರ್‌ ಲಸಿಕೆ ವಿತರಣೆ ಆರಂಭವಾಗಿದೆ. ಇದರ ಭಾಗವಾಗಿ ಪೋಪ್‌ಗೆ ಮೊದಲ ಲಸಿಕೆ ನೀಡಲಾಗಿದೆ ಎಂದು ವ್ಯಾಟಿಕನ್‌ ತನ್ನ ಮಾಹಿತಿಯಲ್ಲಿ ತಿಳಿಸಿದೆ.

ಕೊರೋನಾ ಮೂಲ ಪತ್ತೆಗೆ ಚೀನಾಕ್ಕೆ ಬಂದ ತಜ್ಞರು: ಇಬ್ಬರಿಗೆ ಸೋಂಕು

ಬುಧವಾರ ಪ್ರಾರಂಭಿಸಲಾದ ವ್ಯಾಟಿಕನ್‌ನ ವ್ಯಾಕ್ಸಿನೇಷನ್ ಕಾರ್ಯಕ್ರಮದಡಿಯಲ್ಲಿ, "ಕೋವಿಡ್ -19 ಲಸಿಕೆಯ ಮೊದಲ ಪ್ರಮಾಣವನ್ನು ಪೋಪ್ ಫ್ರಾನ್ಸಿಸ್ ಮತ್ತು ಪೋಪ್ ಎಮೆರಿಟಸ್‌ಗೆ ನೀಡಲಾಗಿದೆ" ಎಂದು ವಕ್ತಾರ ಮ್ಯಾಟಿಯೊ ಬ್ರೂನಿ ಹೇಳಿದ್ದಾರೆ.

ವಾರಾಂತ್ಯದಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಫ್ರಾನ್ಸಿಸ್ ಲಸಿಕೆ ಪಡೆಯುವಂತೆ ಜನರಿಗೆ ಸೂಚನೆ ನೀಡಿದ್ದರು. ಲಸಿಕೆಗಳು ಶ್ರೀಮಂತ ದೇಶಗಳಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಲಭ್ಯವಾಗುವ ಬಗ್ಗೆ ಫ್ರಾನ್ಸಿಸ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

click me!