ಅಮೆರಿಕ ಅಧ್ಯಕ್ಷರ ತಿಂಗಳ ಸ್ಯಾಲರಿ ಎಷ್ಟು? ಖರ್ಚು ವೆಚ್ಚದ ರೂಪದಲ್ಲೂ ಸಿಗುತ್ತಿದೆ ಲಕ್ಷ ಲಕ್ಷ

Published : Aug 08, 2025, 06:26 PM IST
Donald Trump

ಸಾರಾಂಶ

ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸ್ಯಾಲರಿಯನ್ನು ವೈಟ್ ಹೌಸ್ ನವೀಕರಣಕ್ಕೆ ನೀಡಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷರ ತಿಂಗಳ ವೇತನ ಚರ್ಚೆಯಾಗುತ್ತಿದೆ. ಎಷ್ಟಿದೆ ಅಮೆರಿಕ ಅಧ್ಯಕ್ಷರ ವೇತನ ಗೊತ್ತಾ?

ವಾಶಿಂಗ್ಟನ್ (ಆ.08) ವಿಶ್ವದ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಅಮೆರಿಕ ಬಹುತೇಕ ರಾಷ್ಟ್ರದ ಮೇಲೆ ಹಿಡಿತ ಹೊಂದಿದೆ. ಅಮೆರಿಕ ಅಧ್ಯಕ್ಷ ಪಟ್ಟ ಅತ್ಯಂತ ಪ್ರಭಾವಿ ಹಾಗೂ ಅತೀ ಹೆಚ್ಚಿನ ಅಧಿಕಾರ ಹೊಂದಿರುವ ಸ್ಥಾನವಾಗಿದೆ. ಅಮೆರಿಕ ಅಧ್ಯಕ್ಷರಾದರೆ ಸಿಗುವ ಸವಲತ್ತು, ಭದ್ರತೆ ಟಾಪ್ ಕ್ಲಾಸ್. ಸದ್ಯ ಡೋನಾಲ್ಡ್ ಟ್ರಂಪ್ ತಮ್ಮ ಸ್ಯಾಲರಿಯನ್ನು ವೈಟ್ ಹೌಸ್ ನವೀಕರಣಕ್ಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್ ಸ್ಯಾಲರಿ ಭಾರಿ ಚರ್ಚೆಯಾಗುತ್ತಿದೆ. ಅಮೆರಿಕ ಅಧ್ಯಕ್ಷರ ಸ್ಯಾಲರಿ ಬರೋಬ್ಬರಿ 3.5 ಕೋಟಿ ರೂಪಾಯಿ. ಇದರ ಜೊತೆಗೆ ಲಕ್ಷ ರೂಪಾಯಿ ಭತ್ಯೆ, ಖರ್ಚು ವೆಚ್ಚುಗಳು ಇವೆ. ಇಷ್ಟೇ ಅಲ್ಲ ಪ್ರಯಾಣ, ಭದ್ರತೆ, ವೌಟ್ ಹೌಸ್ ಮನೆ ಸೇರಿದಂತೆ ಹಲವು ಇತರ ಸೌಲಭ್ಯಗಳಿವೆ.

ಅಮೆರಿಕ ಅಧ್ಯಕ್ಷರ ಸ್ಯಾಲರಿ ವಿವರ

ಅಮೆರಿಕ ಅಧ್ಯಕ್ಷರು ಮಾಸಿಕ ವೇತನ 3,50,46,862 ರೂಪಾಯಿ (400,000 ಅಮೆರಿಕನ್ ಡಾಲರ್). ಪ್ರತಿ ತಿಂಗಳು ಸದ್ಯ ಅಧ್ಯಕ್ಷರಾಗಿರು ಡೋನಾಲ್ಡ್ ಟ್ರಂಪ್ 3.5 ಕೋಟಿ ರೂಪಾಯಿ ಜೇಬಿಗಿಳಿಸುತ್ತಿದ್ದಾರೆ. ಇದರ ಜೊತೆ ಖರ್ಚು ವೆಚ್ಚಕ್ಕಾಗಿ 50,000 ಅಮೆರಿಕನ್ ಡಾಲರ್ ಪ್ರತಿ ತಿಂಗಳು ಸಿಗಲಿದೆ. ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 43.80 ಲಕ್ಷ ರೂಪಾಯಿ. ನಿಖರ ಮೊತ್ತ 43,80,708 ರೂಪಾಯಿ. ಇದು ತೆರಿಗೆ ರಹಿತ ಮೊತ್ತವಾಗಿದೆ. ಪ್ರಯಾಣಕ್ಕಾಗಿ ಪ್ರತಿ ತಿಂಗಳು 87,61,416 ರೂಪಾಯಿ ಸಿಗಲಿದೆ. ಸರ್ಕಾರದ ಅದೀಕೃತ ಪ್ರವಾಸ, ವಿದೇಶಿ ಪ್ರವಾಸ ಹೊರತುಪಡಿಸಿದ ಪ್ರಯಾಣಕ್ಕಾಗಿ ಭತ್ಯೆ ಸಿಗಲಿದೆ. ಇನ್ನು ಮನೋರಂಜನೆಗಾಗಿ 16,64,621 ರೂಪಾಯಿ ಸಿಗಲಿದೆ.

ವೈಟ್ ಹೌಸ್ ಸೇರಿ ಹಲವು ಐಷಾರಾಮಿತನ ಸೌಲಭ್ಯ

ಅಮೆರಿಕ ಅಧ್ಯಕ್ಷರಿಗೆ ವೈಟ್ ಹೌಸ್ ಮನೆ, ಕಚೇರಿ ಸೌಲಭ್ಯಗಳು ಸಿಗಲಿದೆ. ಇನ್ನು ಮನೆಗೆ ಸಿಬ್ಬಂದಿ, ಅಡುಗೆ ಸಿಬ್ಬಂದಿ ಸೇರಿದಂತೆ ಇತರ ಸಿಬ್ಬಂದಿ ವರ್ಗಗಳು ಸಿಗಲಿದೆ. ಅಧ್ಯಕ್ಷರಿಗೆ ಅತ್ಯುನ್ನತ ಭದ್ರತೆ, ಪ್ರಯಾಣಕ್ಕೆ ಅಧಿಕೃತ ಕಾರು, ಕಾರು ಚಾಲಕ ಸೇರಿದಂತೆ ಇತರ ಸೌಲಭ್ಯಗಳಿವೆ.

ವೈಟ್‌ಹೌಸ್ ನವೀಕರಣಕ್ಕೆ ತಮ್ಮ ಸ್ಯಾಲರಿ ನೀಡಿದ ಟ್ರಂಪ್

ಅಮೆರಿಕ ಅಧ್ಯಕ್ಷರ ಇತಿಹಾಸದಲ್ಲಿ ವೈಟ್ ಹೌಸ್ ನವೀಕರಣಕ್ಕೆ ತಮ್ಮ ವೇತನ ನೀಡಿದ ಎರಡನೇ ಅಧ್ಯಕ್ಷ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ವಾಶಿಂಗ್ಟನ್ ತಮ್ಮ ವೇತನದಲ್ಲಿ ವೈಟ್ ಹೌಸ್ ನವೀಕರಣ ಮಾಡಿದ್ದರು. ಇದೀಗ ಡೋನಾಲ್ಡ್ ಟ್ರಂಪ್ ವೈಟ್ ಹೌಸ್ ನವೀಕರಣಕ್ಕೆ ತಮ್ಮ ವೇತನ ನೀಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಐತಿಹಾಸಿಕ, ಅತೀ ಸುಂದರ ಮನೆ ನವೀಕರಣ ಅತೀ ಅವಶ್ಯಕತವಾಗಿತ್ತು. ಹಲವು ವರ್ಷಗಳಿಂದ ನವೀಕರಣವಾಗದೇ ಬಾಕಿ ಉಳಿದಿತ್ತು. ನವೀಕರಣದಿಂದ ವೈಟ್ ಹೌಸ್ ಮತ್ತಷ್ಟು ಸುಂದರವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಎಲ್ಲೂ ವಿಚಾರದಲ್ಲೂ ಮುಗೂ ತೂರಿಸಿ ನೊಬೆಲ್ ಪ್ರಶಸ್ತಿಗೆ ಹಂಬಲಿಸುತ್ತಿರುವ ಟ್ರಂಪ್ ಇಲ್ಲೂ ಕೂಡ ಯಡವಟ್ಟು ಮಾಡಿದ್ದಾರೆ. ಕಾರಣ ವೈಟ್ ಹೌಸ್ ನವೀಕರಣಕ್ಕೆ ಟ್ರಂಪ್ ಹಾಗೂ ಜಾರ್ಜ್ ವಾಶಿಂಗ್ಟನ್ ಮಾತ್ರವಲ್ಲ, ಜಾನ್ ಎಫ್ ಕೆನಡಿ, ಹರ್ಬರ್ಟ್ ಹೂವರ್ ಸೇರಿದಂತೆ ಕೆಲ ಅಧ್ಯಕ್ಷರೂ ತಮ್ಮ ವೇತನ ನೀಡಿ ನವೀಕರಣಕ್ಕೆ ಸಹಕರಿಸಿದ್ದಾರೆ. ಆದರೆ ಟ್ರಂಪ್ ಇಲ್ಲೂ ಕೂಡ ಮೈಲೇಜ್ ತೆಗೆದುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!