ಕದನ ವಿರಾಮ ಶ್ರೇಯ ನೀಡದ್ದಕ್ಕೆ ಸಿಟ್ಟಿಗೆದ್ದು ಟ್ರಂಪ್‍ ತೆರಿಗೆ ದಾಳಿ?

Kannadaprabha News   | Kannada Prabha
Published : Aug 08, 2025, 04:28 AM IST
Donald Trump

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಕನಿಷ್ಠ 30 ಬಾರಿ ಹೇಳಿಕೆ ನೀಡಿದ್ದ ಟ್ರಂಪ್‌ ಹೇಳಿಕೆಗೆ ಭಾರತ ಮನ್ನಣೆ ನೀಡದೇ ಹೋಗಿದ್ದು ಅವರು ಭಾರತದ ಮೇಲೆ ಹೆಚ್ಚಿನ ತೆರಿಗೆ ದಾಳಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಕನಿಷ್ಠ 30 ಬಾರಿ ಹೇಳಿಕೆ ನೀಡಿದ್ದ ಟ್ರಂಪ್‌ ಹೇಳಿಕೆಗೆ ಭಾರತ ಮನ್ನಣೆ ನೀಡದೇ ಹೋಗಿದ್ದು ಅವರು ಭಾರತದ ಮೇಲೆ ಹೆಚ್ಚಿನ ತೆರಿಗೆ ದಾಳಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಈ ಬಗ್ಗೆ ಅಮೆರಿಕ ವಿಲ್ಸನ್ ಸೆಂಟರ್‌ನ ದಕ್ಷಿಣ ಏಷ್ಯಾ ನಿರ್ದೇಶಕ ಮೈಕೆಲ್ ಕುಗೆಲ್ಮನ್ ಮಾತನಾಡಿದ್ದು, ‘ಇದು ಭಾರತ ಮತ್ತು ಅಮೆರಿಕ ಕಳೆದ ಎರಡು ದಶಕಗಳಲ್ಲಿ ಎದುರಿಸಿದ ಅತ್ಯಂತ ಬಿಕ್ಕಟ್ಟಿನ ಸಮಯ. ಉಭಯ ದೇಶಗಳ ಸಂಬಂಧದಲ್ಲಿ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರಿದೆ. ಇತ್ತೀಚೆಗೆ ಈ ದೇಶಗಳ ನಡುವೆ ಸಂಬಂಧ ಹೇಗೆ ಬೆಳೆಯುತ್ತಿದೆ ಎನ್ನುವುದನ್ನು ಗಮನಿಸಿದರೆ ಈ ಘೋಷಣೆ ಅಚ್ಚರಿಯಲ್ಲ’ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಟ್ರಂಪ್ ಕದನ ವಿರಾಮ ಸುಳ್ಳು ಭಾರತ ಒಪ್ಪದಿರುವುದು ಕಾರಣ ಎಂದಿದ್ದಾರೆ.

ಭಾರತದ ಮೇಲೆ ಟ್ರಂಪ್ ಶೇ.50 ಸುಂಕ; ಇಸ್ರೇಲ್ ಪ್ರಧಾನಿ ನೆತನ್ಯಾಹು ಫಸ್ಟ್ ರಿಯಾಕ್ಷನ್, ಶೀಘ್ರದಲ್ಲಿ ಭಾರತಕ್ಕೆ ಭೇಟಿ?

ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇಕಡಾ 50 ರಷ್ಟು ಸುಂಕವನ್ನು ಇಡೀ ಜಗತ್ತು ಗಮನಿಸುತ್ತಿದೆ. ಏತನ್ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ (ಆಗಸ್ಟ್ 7, 2025) ಸುಂಕ ಸಮಸ್ಯೆಯನ್ನು ಪರಿಹರಿಸುವುದು ಭಾರತ ಮತ್ತು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿರುತ್ತದೆ ಎಂದು ಹೇಳಿದರು. ಅವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 6, 2025 ರಂದು ಘೋಷಿಸಲಾದ ಈ ಸುಂಕವು ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ಒಳಗೊಂಡಿದ್ದು, ಆಗಸ್ಟ್ 27, 2025 ರಿಂದ ಜಾರಿಗೆ ಬರಲಿದೆ. ಇದು ಯಾವುದೇ ದೇಶದ ಮೇಲೆ ಅಮೆರಿಕ ವಿಧಿಸಿದ ಅತ್ಯಧಿಕ ಸುಂಕಗಳಲ್ಲಿ ಒಂದಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಕ್ರಮವನ್ನು 'ದುರದೃಷ್ಟಕರ' ಎಂದು ಬಣ್ಣಿಸಿ, ರೈತರು, ಮೀನುಗಾರರು ಮತ್ತು ಹೈನುಗಾರಿಕೆ ವಲಯದ ಜನರ ಹಿತಾಸಕ್ತಿಗಳಿಗೆ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ (ಆಗಸ್ಟ್ 7, 2025) ಜೆರುಸಲೆಮ್‌ನಲ್ಲಿ ಭಾರತೀಯ ರಾಯಭಾರಿ ಜೆಪಿ ಸಿಂಗ್ ಅವರೊಂದಿಗಿನ ಭೇಟಿಯಲ್ಲಿ, ಈ ಸುಂಕ ಸಮಸ್ಯೆಯನ್ನು ಪರಿಹರಿಸುವುದು ಭಾರತ ಮತ್ತು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿರುವ ಅವರು, ಗುಪ್ತಚರ ಮಾಹಿತಿ ಹಂಚಿಕೆ, ಭಯೋತ್ಪಾದನೆ ನಿಗ್ರಹ, ಭದ್ರತೆ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಸಹಕಾರವನ್ನು ವೃದ್ಧಿಸಲು ವಿಶಾಲ ಅವಕಾಶಗಳಿವೆ ಎಂದು ಒತ್ತಿಹೇಳಿದ್ದಾರೆ.ಈ ಬೆಳವಣಿಗೆಯು ಜಾಗತಿಕ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಭಾರತದ ಮುಂದಿನ ಕ್ರಮಗಳ ಕಡೆ ಎಲ್ಲರ ಗಮನ ನೆಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!