2023ರ ಮೊದಲ ತಿಂಗಳಾದ ಜನವರಿಯಲ್ಲಿ ಸುದ್ದಿ ಮಾಡಿದ ವಿಶ್ವದ ಪ್ರಮುಖ ಸುದ್ದಿಗಳಿವು.
ಬೆಂಗಳೂರು (ಡಿ.12): ಹೊಸ ವರ್ಷಕ್ಕೂ ಒಂದು ದಿನ ಮುನ್ನ ಮಾಜಿ ಪೋಪ್ ಬೆನಡಿಕ್ಟ್ ಸಾವಿನೊಂದಿಗೆ 2023 ಅರಂಭಗೊಂಡಿತ್ತು. ಅದರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಜತೆಗಿನ ಯುದ್ಧದಲ್ಲಿ ಎರಡು ದಿನಗಳ ಕದನ ವಿಮಾರಮವನ್ನು ಘೋಷಣೆ ಮಾಡಿದರು. ಅದರೊಂದಿಗೆ ಜನವರಿ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು ಬಿಬಿಸಿಯ ಮೋದಿ ಸಾಕ್ಷ್ಯಚಿತ್ರ. ಗುಜರಾತ್ ಗಲಭೆ ವಿಚಾರಗಳ ಅಂಶ ಇಟ್ಟುಕೊಂಡು ಮಾಡಿದ್ದ ಈ ಸಾಕ್ಷ್ಯಚಿತ್ರದಲ್ಲಿ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಕೇರಳದ ಕೆಲವು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರ ಕೂಡ ಈ ಡಾಕ್ಯುಮೆಂಟರಿಗೆ ನಿಷೇಧ ಹೇರುವ ತೀರ್ಮಾನ ಮಾಡಿತ್ತು. ಇನ್ನೊಂದೆಡೆ ಬಿಬಿಸಿ ತನ್ನ ಸಾಕ್ಷ್ಯಚಿತ್ರದ ಅಂಶಗಳು ಸತ್ಯ ಎಂದು ವಾದ ಮಾಡಿತ್ತು. ಇನ್ನೊಂದೆಡೆ ಚೀನಾ ಮೊಟ್ಟಮೊದಲ ಬಾರಿಗೆ ಕೋವಿಡ್-19 ವಿಚಾರವಾಗಿ ತನ್ನ ಮಾಹಿತಿಗಳನ್ನು ಜನವರಿಯಲ್ಲಿ ಹಂಚಿಕೊಂಡಿತ್ತು. ನೇಪಾಳದಲ್ಲಿ ಏರ್‌ಲೈನ್ಸ್ ಫೋಖಾರಾದಲ್ಲಿ ಅಪಘಾತಕ್ಕೆ ಈಡಾಗಿ 68 ಮಂದಿ ಸಾವಿಗೀಡಾದ ಘಟನೆ ನಡೆದಿತ್ತು.
ಕ್ರೈಸ್ತರ ಪರಮೋಚ್ಛ ಧರ್ಮಗುರು ಮಾಜಿ ಪೋಪ್ ಬೆನೆಡಿಕ್ಟ್ ನಿಧನ
ಬಹುಕಾಲದಿಂದಲೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕ್ರೈಸ್ತರ ಪರಮೋಚ್ಛ ಧರ್ಮಗುರು ಮಾಜಿ ಪೋಪ್ ಬೆನೆಡಿಕ್ಟ್ ನಿಧನರಾದರು. ಹೊಸ ವರ್ಷಾಚರಣೆಯ ಒಂದು ದಿನ ಮುನ್ನ ಇವರು ಮುಂಜಾನೆ 9:34 ರ ಸಮಯಕ್ಕೆ ನಿಧನರಾದರು. 2005ರಲ್ಲಿ ಧರ್ಮಗುರು ಹುದ್ದೆಗೇರಿದ ಬೆನೆಡಿಕ್ಟ್ (Benedict) 2013ರಲ್ಲಿ ಪೋಪ್ (pope)ಸ್ಥಾನದಿಂದ ಕೆಳಗಿಳಿದಿದ್ದರು. 1000 ವರ್ಷದಲ್ಲಿ ಪೋಪ್ ಹುದ್ದೆಗೇರಿದ ಮೊದಲ ಜರ್ಮನ್, ಕಳೆದ 600 ವರ್ಷಗಳಲ್ಲಿ ಹುದ್ದೆಯಿಂದ ಕೆಳಗಿಳಿದ ಮೊದಲ ಪೋಪ್ ಎಂಬ ದಾಖಲೆಯೂ ಇವರ ಹೆಸರಲ್ಲಿತ್ತು.
ಉಕ್ರೇನ್ ಮೇಲಿನ ಯುದ್ಧಕ್ಕೆ 2 ದಿನ ಬ್ರೇಕ್
ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥರ ಮನವಿಯ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಆರ್ಥೊಡಾಕ್ಸ್ ಕ್ರಿಸ್‌ಮಸ್‌ಗಾಗಿ ಉಕ್ರೇನ್‌ನಲ್ಲಿ 36 ಗಂಟೆಗಳ ಕದನ ವಿರಾಮಕ್ಕೆ ಆದೇಶ ಮಾಡಿದರು. ಚರ್ಚ್ ಮನವಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದ ಉಕ್ರೇನ್ ಇದನ್ನು ಟೀಕಿಸಿತ್ತು. ಜನವರಿ 6 ರಂದು 12:00 ಕ್ಕೆ ಕದನ ವಿರಾಮ ಪ್ರಾರಂಭವಾಗಲಿದೆ ಎಂದು ಪುಟಿನ್ ಆದೇಶಿಸಿದ್ದಾರೆ ಎಂದು ಕ್ರೆಮ್ಲಿನ್ ಹೇಳಿಕೆ ನೀಡಿತ್ತು.
ಗೋಧಿಹಿಟ್ಟಿಗಾಗಿ ಚರಂಡಿಗೆ ಇಳಿದ ಪಾಕಿಸ್ತಾನ
ಪಾಕಿಸ್ತಾನದ ದಿನಬಳಕೆಯ ಎಲ್ಲಾ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವ ಈರುಳ್ಳಿ ಒಂದೇ ವರ್ಷದಲ್ಲಿ ಶೇ.500ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಜನವರಿಯಲ್ಲಿ ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಕೆಜಿ 36 ರೂಪಾಯಿಗಳಾಗಿತ್ತು. ಈ ಬಾರಿಯ ಜನವರಿಯಲ್ಲಿ 220 ರೂಪಾಯಿ ಆಗಿದೆ. ಜನವರಿ 2022 ರಲ್ಲಿ ಹಣದುಬ್ಬರವು 13% ದರದಲ್ಲಿ ಏರುತ್ತಿದ್ದರೆ, ಪ್ರಸ್ತುತ ಅದು 25% ದರದಲ್ಲಿ ಹೆಚ್ಚುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಗೋಧಿಹಿಟ್ಟಿಗಾಗಿ ಪಾಕಿಸ್ತಾನದ ಜನರು ಚರಂಡಿಯಲ್ಲಿ ಬಿದ್ದು ಒದ್ದಾಡಿದ ವಿಡಿಯೋ ವೈರಲ್ ಆಗಿತ್ತು.
ಕೋವಿಡ್ ಅಸಲಿ ಸಂಖ್ಯೆ ಬಹಿರಂಗ ಮಾಡಿದ ಚೀನಾ
ವಿಶ್ವ ಆರೋಗ್ಯ ಸಂಸ್ಥೆಯ ಆಕ್ರೋಶದ ಬಳಿಕ ಚೀನಾ ಅಧಿಕಾರಿಗಳು ಶಾಂಘೈ ನಗರದಲ್ಲಿನ ಕೋವಿಡ್ ಅಸಲಿ ಪ್ರಕರಣ ಸಂಖ್ಯೆ ಬಹಿರಂಗ ಪಡಿಸಿದ್ದಾರೆ. ಶಾಂಘೈ ನಗರದಲ್ಲಿ ಶೇಕಡಾ 70 ರಷ್ಟು ಕೋವಿಡ್‌ಗೆ ತುತ್ತಾಗಿದ್ದಾರೆ ಎಂದು ವರದಿ ಬಹಿರಂಗ ಪಡಿಸಿದ್ದಾರೆ. ಸರಿಸುಮಾರಿ ಶಾಂಘೈ ನಗರದ 25 ಮಿಲಿಯನ್ ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿಸಿತ್ತು.
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳ ರಂಪಾಟ
ಆಸ್ಪ್ರೇಲಿಯಾದಲ್ಲಿ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ ಪರ ಹಾಗೂ ಭಾರತ ವಿರೋಧಿ ಬರಹಗಳನ್ನು ಗೀಚಲಾಗಿದೆ. ವಿಕ್ಟೋರಿಯಾದ ಕ್ಯಾರಂಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಸ್ಥಾನವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ. ಜ.12 ರಂದು ಇಂತದೇ ಕೃತ್ಯವನ್ನು ಮೆಲ್ಬರ್ನ್‌ನ ಸ್ವಾಮಿನಾರಾಯಣ ದೇವಾಲಯದಲ್ಲಿ ಎಸಗಲಾಗಿತ್ತು.
ನೇಪಾಳದಲ್ಲಿ ವಿಮಾನ ಪತನ, 68 ಸಾವು
ಐವರು ಭಾರತೀಯರು ಸೇರಿ 70 ಪ್ರಯಾಣಿಕರಿದ್ದ ನೇಪಾಳ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ಇನ್ನೇನು ಲ್ಯಾಂಡ್ ಆಗಬೇಕು ಎನ್ನುಷ್ಟರಲ್ಲಿ ಪತನವಾಗಿದೆ. ಈ ದುರಂತದಲ್ಲಿ ಬಲಿಯಾದವರ ಸಂಖ್ಯೆ 68ಕ್ಕ ಏರಿಕೆಯಾಗಿದೆ. ವಿಮಾನವೂ ಇಂದು ಮುಂಜಾನೆ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮ ನೇಪಾಳದಲ್ಲಿರುವ ಪೊಖರೊಗೆ ಹೊರಟಿದ್ದ ವಿಮಾನ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಪತನವಾಗಿದೆ. ಈ ವಿಮಾನದಲ್ಲಿ 68 ನಾಗರಿಕರು ಹಾಗೂ ನಾಲ್ವರು ವಿಮಾನ ಸಿಬ್ಬಂದಿ ಇದ್ದರು.
ಮೋದಿ ಕುರಿತಾದ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಮರ್ಥನೆ
ಗುಜರಾತ್ ಗಲಭೆ ವೇಳೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪಾತ್ರದ ಕುರಿತು ತಾನು ತಯಾರಿಸಿರುವ ವಿವಾದಿತ ಸಾಕ್ಷ್ಯಚಿತ್ರವನ್ನು ಬ್ರಿಟನ್ ಮೂಲದ ಬ್ರಿಟಿಷ್ ಬಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಸಮರ್ಥಿಸಿಕೊಂಡಿದೆ.‘ಸಂಶೋಧನೆ ನಡೆಸಿ ಸಂಪಾದಕೀಯ ಗುಣಮಟ್ಟಕಾಯ್ದುಕೊಂಡು ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದೇವೆ’ ಎಂದು ಬಿಬಿಸಿ ಸ್ಪಷ್ಟಪಡಿಸಿದೆ.
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನ್ಯೂಜಿಲೆಂಡ್ ಪ್ರಧಾನಿ
ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಫೆಬ್ರವರಿ 2023 ರಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು. ನನಗೆ ಇದೇ ಸರಿಯಾದ ಸಮಯ. ನಾನು ಇನ್ನೂ 4 ವರ್ಷಗಳ ಕಾಲ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಸಭೆಯಲ್ಲಿ ಹೇಳಿದರು. 42 ವರ್ಷ ವಯಸ್ಸಿನ ಪ್ರಧಾನಿಯೊಬ್ಬರು ಇಷ್ಟು ಬೇಗ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿರುವುದು ನಿಜಕ್ಕೂ ಅಚ್ಚರಿದಾಯಕ ವಿಚಾರವಾಗಿತ್ತು.
ಇನ್ನಷ್ಟು ಉದ್ಯೀಗ ಕಡಿತ ಸುಳಿವು ನೀಡಿದ ಫೇಸ್‌ಬುಕ್
ಕಂಪನಿಯಲ್ಲಿ ವಿವಿಧ ಹಂತದಲ್ಲಿ ಮ್ಯಾನೇಜರ್‌ಗಳೇ ಮ್ಯಾನೇಜರ್‌ಗಳನ್ನು ಮ್ಯಾನೇಜ್ ಮಾಡುವ ರೀತಿಯ ಉದ್ಯೋಗಿಗಳ ಚೌಕಟ್ಟು ನಿರ್ಮಾಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್, ಶೀಘ್ರವೇ ಇನ್ನಷ್ಟು ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ. ಇತ್ತೀಚೆಗಷ್ಟೇ ಮೆಟಾ 11000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಅದರ ಬೆನ್ನಲ್ಲೇ ಈ ಕಹಿ ಸುದ್ದಿ ಹೊರಬಿದ್ದಿದೆ.
Sports Flashback 2023: ನೂರನೇ ಟೆಸ್ಟ್ ಅಡಿದ ಪೂಜಾರ, ದಾಂಪತ್ಯ ಕಾಲಿಟ್ಟ ಪಾಕ್ ಆಟಗಾರ: ಫೆಬ್ರವರಿ ಸ್ಪೋರ್ಟ್ಸ್ ಅಪ್‌ಡೇಟ್