ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು

Published : Dec 06, 2025, 11:43 AM IST
women gets rented husband in this country 2

ಸಾರಾಂಶ

Renting a husband in Latvia: ಇಲ್ಲೊಂದು ದೇಶದಲ್ಲಿ ಮನೆ ಕೆಲಸಕ್ಕಾಗಿ ಮಹಿಳೆಯರು ಗಂಡನನ್ನು ಬಾಡಿಗೆಗೆ ಪಡೆಯುತ್ತಾರೆ. ಆ ದೇಶದಲ್ಲಿ ಲಿಂಗ ಅಸಮತೋಲನ ತೀವ್ರವಾಗಿದ್ದು, ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸಂಖ್ಯೆ ತೀರ ಕಡಿಮೆ ಇದೆ. 

ಗಂಡನ ಬಾಡಿಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು:

ಕೆಲವು ದೇಶಗಳಲ್ಲಿ ಕೆಲವು ಜಾಗಗಳಲ್ಲಿ ಹೆಂಡ್ತಿಯನ್ನು ಬಾಡಿಗೆಗೆ ಪಡೆಯುವ ವಿಚಾರದ ಬಗ್ಗೆ ನೀವು ಈ ಹಿಂದೆ ಕೇಳಿದ್ದಿರಬಹುದು. ಆದರೆ ಇಲ್ಲೊಂದು ಯುರೋಪಿಯನ್ ದೇಶದಲ್ಲಿ ಮನೆ ಕೆಲಸಕ್ಕಾಗಿ ಮಹಿಳೆಯರು ಗಂಡನನ್ನು ಬಾಡಿಗೆಗೆ ಪಡೆಯುತ್ತಾರೆ. ಹೌದು ಆ ದೇಶದಲ್ಲಿ ಲಿಂಗ ಅಸಮತೋಲನ ತೀವ್ರವಾಗಿದ್ದು, ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸಂಖ್ಯೆ ತೀರ ಕಡಿಮೆ ಇದೆ. ಇದೇ ಕಾರಣಕ್ಕೆ ಇಲ್ಲಿ ಪುರುಷರನ್ನು ಮಹಿಳೆಯರು ದುಡ್ಡು ನೀಡಿ ಬಾಡಿಗೆಗೆ ಪಡೆದುಕೊಳ್ಳುತ್ತಾರೆ. ಪುರುಷರ ಜನಸಂಖ್ಯೆಯ ಕೊರತೆಯಿಂದಾಗಿ ಪುರುಷರಿಗೆ ಭಾರಿ ಡಿಮ್ಯಾಂಡ್ ಬಂದಿರುವ ಈ ದೇಶ ಯಾವುದು ಅಂತ ಯೋಚಿಸ್ತಿದ್ದೀರಾ ಅದೇ ಲಾಟ್ವಿಯಾ.

ಪುರುಷರ ಜನಸಂಖ್ಯೆಯ ಕೊರತೆಯಿಂದಾಗಿ ಪುರುಷರಿಗೆ ಭಾರಿ ಡಿಮ್ಯಾಂಡ್

ಹೌದು ಇದು ಯುರೋಪ್‌ನ ಲಿಥುವೇನಿಯಾ ಮತ್ತು ಎಸ್ಟೋನಿಯಾ ನಡುವಿನ ಬಾಲ್ಟಿಕ್ ಸಮುದ್ರದಲ್ಲಿರುವ ಒಂದು ಪುಟ್ಟ ದೇಶ. ಇದರ ಭೂದೃಶ್ಯವು ವಿಶಾಲವಾದ ಕಡಲತೀರಗಳು ಮತ್ತು ದಟ್ಟವಾದ, ವಿಸ್ತಾರವಾದ ಕಾಡುಗಳಿಂದ ಗುರುತಿಸಲ್ಪಟ್ಟಿದೆ. ಲಾಟ್ವಿಯಾದ ರಾಜಧಾನಿ ರಿಗಾ. ಈ ದೇಶದಲ್ಲಿ ಈಗ ಲಿಂಗ ಅಸಮಾನತೆ ತೀವ್ರವಾಗಿದ್ದು, ಇದರಿಂದಾಗಿ ಅನೇಕ ಮಹಿಳೆಯರು ಮನೆಕೆಲಸಗಳಿಗೆ ಸಹಾಯ ಮಾಡಲು ತಾತ್ಕಾಲಿಕವಾಗಿ ಗಂಡಂದಿರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಯೂರೋಸ್ಟಾಟ್ ವರದಿ ಪ್ರಕಾರ, ಈ ದೇಶದಲ್ಲಿ ಪುರುಷರಿಗಿಂತ ಶೇ. 15.5 ರಷ್ಟು ಹೆಚ್ಚು ಮಹಿಳೆಯರು ಇದ್ದಾರೆ ಇದು ಯುರೋಪಿಯನ್ ಒಕ್ಕೂಟದಲ್ಲಿನ ಸರಾಸರಿ ಅಂತರಕ್ಕಿಂತ ಮೂರು ಪಟ್ಟು ಹೆಚ್ಚು.

ವರ್ಲ್ಡ್ ಅಟ್ಲಾಸ್ ವರದಿಯ ಪ್ರಕಾರ ಇಲ್ಲಿ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಮಹಿಳೆಯರು ಇದ್ದಾರೆ. ದಿ ಪೋಸ್ಟ್ ವರದಿಯ ಪ್ರಕಾರ, ಕೆಲಸದ ಸ್ಥಳಗಳು ಮತ್ತು ದೈನಂದಿನ ಜೀವನದಲ್ಲಿ ಇಲ್ಲಿ ಪುರುಷರ ಕೊರತೆ ಎದ್ದು ಕಾಣುತ್ತಿದೆ. ಉತ್ಸವ ಕಾರ್ಯಗಳಲ್ಲಿ ಕೆಲಸ ಮಾಡುವ ಡೇನಿಯಾ ಎಂಬುವವರು ಈ ಬಗ್ಗೆ ಮಾತನಾಡಿ ತನ್ನ ಬಹುತೇಕ ಎಲ್ಲಾ ಸಹೋದ್ಯೋಗಿಗಳು ಮಹಿಳೆಯರೇ ಎಂದು ಹೇಳಿದ್ದಾರೆ.. ಅವರೊಂದಿಗೆ ಕೆಲಸ ಮಾಡುವುದನ್ನು ತಾನು ಆನಂದಿಸುತ್ತಿದ್ದರೂ, ಉತ್ತಮ ಲಿಂಗ ಸಮತೋಲನವು ಸಾಮಾಜಿಕ ಸಂವಹನಗಳನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಎಂದು ಅವರು ಹೇಳಿದರು. ಹಾಗೂ ಇಲ್ಲಿನ ಸೀಮಿತ ಆಯ್ಕೆಗಳ ಕಾರಣದಿಂದಾಗಿ ಅನೇಕ ಮಹಿಳೆಯರು ಸಂಗಾತಿಯನ್ನು ಹುಡುಕಲು ವಿದೇಶಗಳಿಗೆ ಪ್ರಯಾಣಿಸುತ್ತಾರೆ ಎಂದು ಅವರ ಸ್ನೇಹಿತೆ ಜೇನ್ ಹೇಳಿದ್ದಾರೆ.

ಇದನ್ನೂ ಓದಿ: ಬಾಡಿಗೆಗಿದ್ದಾರೆ ಕಣ್ಣೀರು ಒರೆಸೋ ಹುಡುಗ್ರು, ಅತ್ರೆ ಕಣ್ಣೀರು ಒರೆಸ್ತಾರೆ ಈ ಹ್ಯಾಂಡ್‌ಸಮ್‌ ಬಾಯ್ಸ್‌!

ಪುರುಷ ಪಾಲುದಾರರ ಕೊರತೆಯಿಂದಾಗಿ ದೈನಂದಿನ ಮನೆಯ ಅಗತ್ಯಗಳನ್ನು ನಿರ್ವಹಿಸಲು, ಅನೇಕ ಲಟ್ವಿಯನ್ ಮಹಿಳೆಯರು ಮನೆ ಕೆಲಸಗಳನ್ನು ಮಾಡುವ ಹ್ಯಾಂಡಿಮೆನ್‌ಗಳನ್ನು ಬಾಡಿಗೆಗೆ ನೀಡುವ ಸೇವೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿಯೇ ಅಲ್ಲಿ ಕೊಮಂಡಾ24 ಎಂಬ ಸಂಸ್ಥೆಯೊಂದು ಮೆನ್ ವಿತ್ ಗೋಲ್ಡನ್‌ ಹ್ಯಾಂಡ್ಸ್ ಹೆಸರಿನಲ್ಲಿ ಪುರುಷರನ್ನು ಬಾಡಿಗೆಗೆ ನೀಡುತ್ತಾರೆ. ಈ ಪುರುಷರು ಪ್ಲಂಬಿಂಗ್, ಮರಗೆಲಸ, ಮನೆ ರಿಪೇರಿ ಮತ್ತು ದೂರದರ್ಶನ ಮುಂತಾದವುಗಳ ಸ್ಥಾಪನೆಗೆ ಮನೆಯಲ್ಲಿ ಸಹಾಯ ಮಾಡುತ್ತಾರೆ. ಇದೇ ರೀತಿ ಸೇವೆ ನೀಡುವ ಮತ್ತೊಂದು ಸಂಸ್ಥೆಯಾಗಿರುವ Remontdarbi.lv,ಮಹಿಳೆಯರಿಗೆ ಆನ್‌ಲೈನ್ ಅಥವಾ ಫೋನ್ ಮೂಲಕ ಒಂದು ಗಂಟೆಗೆ ಗಂಡನನ್ನು ಬುಕ್ ಮಾಡುವ ಅವಕಾಶ ನೀಡುತ್ತದೆ. ಇದರ ಮೂಲಕ ಮನೆಯಲ್ಲಿ ಚಿತ್ರಕಲೆ, ಪರದೆಗಳನ್ನು ಸರಿಪಡಿಸುವುದು ಮತ್ತು ಇತರ ನಿರ್ವಹಣಾ ಕೆಲಸಗಳಂತಹ ಕಾರ್ಯಗಳನ್ನು ನಿರ್ವಹಿಸಲು ಕಾರ್ಮಿಕರು ಬೇಗನೆ ಮನೆಗೆ ಆಗಮಿಸುತ್ತಾರೆ.

ಲಾಟ್ವಿಯಾದ ಲಿಂಗ ಅಸಮತೋಲನಕ್ಕೆ ಪುರುಷರ ಕಡಿಮೆ ಜೀವಿತಾವಧಿಯೇ ಕಾರಣ ಎಂದು ತಜ್ಞರು ಹೇಳಿದ್ದಾರೆ. ಹೆಚ್ಚಿನ ಧೂಮಪಾನ ಸೇವನೆ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದಾಗಿ ಪುರುಷರ ಜೀವಿತಾವಧಿ ಕಡಿಮೆ ಆಗುತ್ತಿದೆ. ವರ್ಲ್ಡ್ ಅಟ್ಲಾಸ್ ಪ್ರಕಾರ ಲಾಟ್ವಿಯಾದ ಪುರುಷರಲ್ಲಿ 31% ಜನರು ಧೂಮಪಾನ ಮಾಡುತ್ತಾರೆ. ಆದರೆ ಅಲ್ಲಿ ಕೇವಲ 10% ಮಹಿಳೆಯರು ಮಾತ್ರ ಧೂಮಪಾನ ಮಾಡುತ್ತಾರೆ ಹಾಗೂ ಹೆಚ್ಚಿನ ಪುರುಷರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ.

ಇದನ್ನೂ ಓದಿ: ಬಾಡಿಗೆಗೆ ಸಿಗ್ತಾರೆ ಹೆಂಡತಿಯರು: ಶುರುವಾಗಿದೆ ಹೊಸ ಟ್ರೆಂಡ್, Rent ಫಿಕ್ಸ್ ಮಾಡೋಕಿದೆ ಮಾನದಂಡ

ಅಂದಹಾಗೆ ಗಂಡಂದಿರನ್ನು ಬಾಡಿಗೆಗೆ ಪಡೆಯುವ ಈ ಪ್ರವೃತ್ತಿಯೂ ಲಾಟ್ವಿಯಾಕ್ಕೆ ಮಾತ್ರ ಸೀಮಿತವಾಗಿಲ್ಲ. ಯುಕೆಯಲ್ಲಿ, ಲಾರಾ ಯಂಗ್ ಎಂಬ ಮಹಿಳೆ 2022 ರಲ್ಲಿ ತಮ್ಮ 'ರೆಂಟ್ ಮೈ ಹ್ಯಾಂಡಿ ಹಸ್ಬೆಂಡ್' ಎಂಬ ವ್ಯವಹಾರವನ್ನು ಆರಂಭಿಸಿ, ತಮ್ಮ ಪತಿ ಜೇಮ್ಸ್‌ ಅವರನ್ನು ಸಣ್ಣಪುಟ್ಟ ಕೆಲಸಗಳಿಗೆ ಬಾಡಿಗೆಗೆ ನೀಡುವ ಮೂಲಕ ಗಮನ ಸೆಳೆದರು. ಇವರು ಸ್ಥಾಪಿಸಿದ ಈ ವ್ಯವಹಾರದಿಂದ ಜೇಮ್ಸ್ ಸಂಪೂರ್ಣವಾಗಿ ಬುಕ್ ಆಗಿದ್ದರು. ಅವರು ವಿವಿಧ ಮನೆಕೆಲಸಗಳಿಗೆ ಗಂಟೆ ಅಥವಾ ದಿನಕ್ಕೆ ಶುಲ್ಕ ವಿಧಿಸುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ
ಆಸ್ಟ್ರೇಲಿಯಾದ ಸಿಡ್ನಿ ಬೋಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಉಗ್ರರ ಗುಂಡಿನ ದಾಳಿ: 12 ಸಾವು