ಕಚೇರಿಗೆ ಕೆಲಸಕ್ಕಾಗಿ ತೆರಳಿದ ಮಹಿಳೆಗೆ ಆಘಾತ ಎದುರಾಗಿದೆ. ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದಿದ್ದಾರೆ. ದಿಢೀರ್ ಕೆಲಸ ಕಳೆದುಕೊಂಡು ಕಂಗಾಲಾದ ಮಹಿಳೆಗೆ ಅದೃಷ್ಠ ಕೈಹಿಡಿದಿದೆ. ಎರಡೇ ದಿನದಲ್ಲಿ ಮಹಿಳೆಗೆ 2.5 ಕೋಟಿ ರೂಪಾಯಿ ಜಾಕ್‌ಪಾಟ್ ಸಿಕ್ಕಿದೆ.
ಕ್ಯಾರೊಲಿನಾ(ಆ.02) ಐಟಿ ಕ್ಷೇತ್ರ ಸೇರಿದಂತೆ ಎಲ್ಲಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿ ಕಡಿತ ಪ್ರಕ್ರಿಯೆಗಳು ಇತ್ತೀಚೆಗೆ ಹೆಚ್ಚು. ಝೂಮ್ ಕಾಲ್, ಇಮೇಲ್, ವ್ಯಾಟ್ಸಾಪ್ ಸಂದೇಶದ ಮೂಲಕ ಕೆಲಸದಿಂದ ತೆಗೆದು ಹಾಕಿದ ಘಟನೆ ನಡಿದೆ. ಹೀಗೆ ಮಹಿಳೆಯೊಬ್ಬಳು ಕೆಲಸಕ್ಕೆ ಹಾಜರಾದ ಬೆನ್ನಲ್ಲೇ ಉದ್ಯೋಗ ಕಡಿತದ ಸಂದೇಶ ಬಂದಿದೆ. ಕೆಲಸ ಕಳೆದುಕೊಳ್ಳುವ ಕೆಲ ದಿನಗಳ ಹಿಂದೆ ಮನೆಗೆ ಆಹಾರ ಸಾಮಾಗ್ರಿ ಖರೀದಿಸುವ ವೇಳೆ ಲಾಟರಿಯೊಂದನ್ನು ಖರೀದಿಸಿದ್ದಳು. ಇತ್ತ ಕೆಲಸ ಕಳೆದುಕೊಂಡ ನೋವಿನಲ್ಲಿರುವಾಗಲೇ ಎರಡೇ ದಿನದಲ್ಲಿ ಈ ಲಾಟರಿಯಲ್ಲಿ 2.5 ಕೋಟಿ ರೂಪಾಯಿ ಬಹುಮಾನ ಗೆದ್ದ ಘಟನೆ ಅಮೆರಿಕದ ದಕ್ಷಿಣ ಕ್ಯಾರೊಲಿನಾದಲ್ಲಿ ನಡೆದಿದೆ.
ಕೆಲಸ ಕಳೆದುಕೊಳ್ಳುವ ಕೆಲ ದಿನಗಳ ಮೊದಲು ಈಕೆ ಶಾಪಿಂಗ್ ತೆರಳಿದ್ದಾಳೆ. ಈ ವೇಳೆ 10 ಡಾಲರ್ ನೀಡಿ ಲಾಟರಿ ಖರೀದಿಸಿದ್ದಾಳೆ. ಅಪರೂಪಕ್ಕೆ ಈ ರೀತಿ ಲಾಟರಿ ಖರೀದಿಸಿ ಅದೃಷ್ಟ ಪರೀಕ್ಷೆ ನಡೆಸಿದ್ದಾಳೆ. ಆದರೆ ಈ ಹಿಂದಿನ ಯಾವುದೇ ಪ್ರಯತ್ನಗಳು ಕೈಗೂಡಿರಲಿಲ್ಲ. ಈ ಬಾರಿಯೂ ಮಹಿಳೆಗೆ ಹೆಚ್ಚಿನ ನೀರಿಕ್ಷೆಗಳು ಇರಲಿಲ್ಲ. ಆದರೆ ಕಚೇರಿಯಲ್ಲಿ ಮಾತ್ರ ನಿಜಕ್ಕೂ ಆಘಾತ ಎದುರಾಗಿತ್ತು.
undefined
ತಪ್ಪಿ ಲಾಟರಿ ಬಟನ್ ಒತ್ತಿದ ಮಹಿಳೆಗೆ ಜಾಕ್‌ಪಾಟ್, ಬರೋಬ್ಬರಿ 8 ಕೋಟಿ ರೂ ಬಹುಮಾನ!
ಕೆಲಸ ಕಳೆದುಕೊಂಡ ಮಹಿಳೆಗೆ ಮುಂದೇನು ಅನ್ನೋ ಚಿಂತೆ ಶುರುವಾಗಿದೆ. ಕೆಲಸವೇ ಹೋಯಿತು ಎಂದರೆ ಈ ಬಾರಿ ನನ್ನ ಅದೃಷ್ಠ ಮಾತ್ರವಲ್ಲ ಟೈಮ್ ಕೂಡ ಸರಿಯಿಲ್ಲ ಎಂದುಕೊಂಡು ಸುಮ್ಮನಾಗಿದ್ದಳು. ಆದರೆ ಕೆಲಸ ಕಳೆದುಕೊಂಡ ಎರಡೇ ದಿನಕ್ಕೆ ಖರೀದಿಸಿದ ಲಾಟರಿ ಬಹುಮಾನ ಪ್ರಕಟಗೊಂಡಿದೆ. ಸ್ಕ್ರಾಚ್ ಮಾಡಿ ನೋಡಿದರೆ ಬರೋಬ್ಬರಿ 2.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾಳೆ.
ನಾಲ್ಕು ಬಾರಿ ಮರು ಪರಿಶೀಲನೆ ನಡೆಸಿದ್ದಾಳೆ. ನಿಜಕ್ಕೂ ಇದುಸಾಧ್ಯವೇ ಅನ್ನೋದನ್ನು ಖಚಿತಪಡಿಸಿಕೊಂಡಿದ್ದಾಳೆ. ಲಾಟರಿ ಗೆದ್ದ ಬೆನ್ನಲ್ಲೇ ಕೇಂದ್ರಕ್ಕೆ ತೆರಳಿ ತನ್ನ ಹಣ ಖಾತೆಗೆ ಜಮೆ ಮಾಡಲು ಎಲ್ಲಾ ಪ್ರಕ್ರಿಯೆ ಮುಗಿಸಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ವರ್ಷಗಳಿಂದ ನಾನು ಲಾಟರಿ ಟಿಕೆಟ್ ಖರೀದಿಸುತ್ತಿದ್ದೇನೆ. ಆದರೆ ಯಾವುದೇ ಬಹುಮಾನ ಸಿಕ್ಕಿರಲಿಲ್ಲ. ಆದರೆ ಈ ಬಾರಿ 2.5 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ ಅನ್ನೋದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸಂಭ್ರಮ ಹಂಚಿಕೊಂಡಿದ್ದಾಳೆ.
2,800 ಕೋಟಿ ರೂ ಲಾಟರಿ ಜಾಕ್‌ಪಾಟ್, ಮೊತ್ತ ಸ್ವೀಕರಿಸಲು ಹೋದ ವ್ಯಕ್ತಿಗೆ ಶಾಕ್ ಕೊಟ್ಟ ಕಂಪನಿ!
ಈ ಹಣದಲ್ಲಿ ಸ್ವಂತ ಮನೆ ಖರೀದಿಸಬೇಕು. ಈಗಾಗಲೇ ಕೆಲಸ ಕಳೆದುಕೊಂಡಿದ್ದೇನೆ. ಸಣ್ಣದಾಗಿ ಸ್ವಂತ ಉದ್ಯಮ ಆರಂಭಿಸಬೇಕು. ಸ್ವಾವಲಂಬಿಯಾಗಿ ಬದುಕಬೇಕು ಎಂದು ಈ ಮಹಿಳೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದಾಳೆ.