ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ

Published : Apr 04, 2026, 02:58 PM IST
US Girl found Alive

ಸಾರಾಂಶ

ನಾಪತ್ತೆಯಾದ 13ರ ಬಾಲಕಿ ಬರೋಬ್ಬರಿ 30 ವರ್ಷ ಬಳಿಕ ಜೀವಂತವಾಗಿ ಪತ್ತೆ, ಆಕೆಗೀಗ 44 ವರ್ಷ, ಮೂರು ದಶಕಗಳಿಂದ ಹುಡುಕಾಟ ನಿರಂತರವಾಗಿ ಸಾಗಿತ್ತು. ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ.

ಅರಿಜೋನಾ (ಏ.04) ಮೂರು ದಶಕಗಳ ಬಳಿಕ ನಾಪತ್ತೆಯಾಗಿದ್ದ ಹುಡುಗಿ ಪತ್ತೆಯಾಗಿದ್ದಾಳೆ. 1994ರಲ್ಲಿ ತನ್ನ 13ನೇ ವಯಸ್ಸಿನಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಪೊಲೀಸರಿಗೆ ದೂರು ನೀಡಿ ಹುಡುಕಾಟ ಆರಂಭಿಸಿದ್ದರು. ಕಳೆದ ಮೂರು ದಶಕಗಳಿಂದ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗರಿಲ್ಲ. ಇತ್ತೀಚೆಗೆ ಪೊಲೀಸರು ಎಐ ಡೇಟಾ ಬೇಸ್ ಸಂಗ್ರಹ ಮಾಡಿದ್ದರು. ಇದರ ನೆರವಿನಿಂದ ಮತ್ತೆ ಹುಡುಕಾಟ ನಡಸಿದ್ದಾರೆ. 13ನೇ ವಯಸ್ಸಿನಲ್ಲಿ ನಾಪತ್ತೆಯಾದ ಬಾಲಕಿ ಇದೀಗ 44ನೇ ವಯಸ್ಸಿನ ಮಹಿಳೆಯಾಗಿ ಪತ್ತೆಯಾದ ಘಟನೆ ಅಮೆರಿಕದ ಅರಿಜೋನಾದಲ್ಲಿ ನಡೆದಿದೆ.

ದಿಢೀರ್ ನಾಪತ್ತೆಯಾಗ ಮಗಳಿಗಾಗಿ ಹುಡುಕಾಡಿದ್ದ ಪೋಷಕರು

ಫೋನಿಕ್ಸ್‌ನ ಸ್ಟಾರ್ ವ್ಯಾಲಿಯಲ್ಲಿ ವಾಸವಿದ್ದ ಸಣ್ಣ ಕುಟುಂಬದಲ್ಲಿ ಜನಿಸಿದ ಕ್ರಿಸ್ಟಿಯನಾ ಮ್ಯಾರಿ ಪ್ಲಾಂಟೆ ಏಕಾಏಕಿ ನಾಪತ್ತೆಯಾಗಿದ್ದಳು. ಶಾಲೆಗೆ ಹೋಗುತ್ತಿದ್ದ ಕ್ರಿಸ್ಟಿಯನಾ ಶಾಲೆಯಿಂದ ಮನೆಗೆ ಮರಳಿದ್ದಾಳೆ. ಪೋಷಕರು ಮನೆಗೆ ಬಂದಾಗ ಮನೆಯಲ್ಲಿ ಕ್ರಿಸ್ಟಿಯಾನಾ ಇರಲಿಲ್ಲ. ಇಲ್ಲೇ ಎಲ್ಲೋ ಹೋಗಿರಬಹುದು ಎಂದು ಕೆಲ ಹೊತ್ತು ಸುಮ್ಮನಿದ್ದ ಪೋಷಕರಿಗೆ ಆತಂಕ ಶುರುವಾಗಿದೆ. ಕ್ರಿಸ್ಟಿಯಾನ ಸುಳಿವು ಇರಲಿಲ್ಲ. ಹುಡುಕಾಟ ಆರಂಭಗೊಂಡಿತ್ತು. ಹತ್ತಿರದ ಮನೆ, ಪಟ್ಟಣ ಎಲ್ಲಾ ಕಡೆ ಹುಡುಕಾಡಿದ್ದರು. ಬಳಿಕ ದೂರು ನೀಡಿದ್ದರು. ಪೊಲೀಸರ ನೆರವಿನೊಂದಿಗೆ ಹುಡುಕಾಟ ತೀವ್ರಗೊಂಡಿದೆ. ಆದರೆ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

ಪೋಷರು ತಮ್ಮ ಮಗಳು ಸಿಗುತ್ತಾಳೆ ಎಂದು ಪ್ರತಿ ದಿನ ಪಟ್ಟಣಕ್ಕೆ ತೆರಳಿ ಕಾದು ಕುಳಿತು ಮರಳುತ್ತಿದ್ದರು. ಒಂದೊಂದು ದಿನ ಹತ್ತಿರದ ಪಟ್ಟಣ, ಗ್ರಾಮಗಳಿಗೆ ತೆರಳುತ್ತಿದ್ದರು. ಕೈಗಾರಿಕೆಗೆ, ಕಚೇರಿ, ರೆಸ್ಟೋರೆಂಟ್ ಸೇರಿದಂತೆ ಎಲ್ಲೆಡೆ ತೆರಳಿ ಪರಿಶೀಲನೆ ನಡೆಸುತ್ತಿದ್ದರು. ಪ್ರತಿ ದಿನ ನಿರಾಸೆಯಿಂದ ಮರಳುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಪೋಷಕರು ಇದೇ ರೀತಿ ಹುಡುಕಾಟ ನಡೆಸುತ್ತಲೇ ಇದ್ದರು.

ಪೊಲೀಸರು ಹುಡುಕಾಟ ನಡಿಸಿ ಕ್ರಿಸ್ಟಿಯಾನಾ ಸಿಗದೇ ಇದ್ದಾಗ ಪತ್ತೆಯಾಗದ ಮಿಸ್ಸಿಂಗ್ ಕೇಸ್ ಎಂದು ದಾಖಲಿಸಿದ್ದರು. 13ನೇ ವಯಸ್ಸಿನಲ್ಲಿ ನಾಪತ್ತೆಯಾದ ಕ್ರಿಸ್ಟಿಯನಾ ಜೀವಂತವಾಗಿ ಪತ್ತೆಯಾಗಿದ್ದಾಳೆ. ಆಕೆಗೆ ಈಗ 44 ವರ್ಷ ವಯಸ್ಸು. ಈಕೆ ಪತ್ತೆಯಾಗಿದ್ದು ಹೇಗೆ ಎಂದು ಪೊಲೀಸರು ಬಹಿರಂಗಪಡಿಸಿಲ್ಲ. ಇಷ್ಟೇ ಅಲ್ಲ ಈಕೆ ಇಷ್ಟು ವರ್ಷ ಎಲ್ಲಿದ್ದಳು, ಎಲ್ಲಿ ಪತ್ತೆಯಾಗಿದ್ದಾಳೆ ಅನ್ನೋ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದಾರೆ.

1994ರ ವೇಳೆ ಅರಿಜೋನಾ ಸೇರಿದಂತೆ ಸುತ್ತ ಮುತ್ತಲಿನ ಭಾಗದಲ್ಲಿ ಮಕ್ಕಳ ಕಳ್ಳ ಸಾಗಾಣೆ ಹೆಚ್ಚಾಗಿ ನಡೆಯುತ್ತಿತ್ತು. ಹೀಗಾಗಿ ಪೋಷಕರು ಆತಂಕಗೊಂಡಿದ್ದರು. ತಮ್ಮ ಮಗಳು ಯಾವುದೇ ಕಳ್ಳರ ಕೈಗೆ ಸಿಕ್ಕಿ ನರಳ ಬಾರದು ಎಂದು ಹುಡುಕಿ ತರಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಇದೀಗ ಕ್ರಿಸ್ಟಿಯನಾ ಪತ್ತೆಯಾಗಿದ್ದಾಳೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

23 ವರ್ಷಗಳ ಬಳಿಕ ಶತ್ರುರಾಷ್ಟ್ರದಿಂದ ಪತನವಾಯ್ತು ಅಮೆರಿಕ ಯುದ್ಧವಿಮಾನ, ದೊಡ್ಡಣ್ಣನ ಚಳಿ ಬಿಡಿಸಿದ ಇರಾನ್‌
ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!