
ದುಬೈ (ಡಿ.19) ಲಾಟರಿ ಹಲವರ ಬದುಕು ಕಸಿದುಕೊಂಡರೆ ಕೆಲವರ ಬದುಕು ಬದಲಿಸಿದೆ. ಹಲವರು ಕೆಲ ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸಿ ಕೊನೆಗೆ ಭಾರಿ ನಷ್ಟ ಅನುಭವಿಸಿದವರೂ ಇದ್ದಾರೆ. ಆದರೆ ದುಬೈನಲ್ಲಿ ನರ್ಸ್ ಆಗಿರುವ ಕೇರಳದ ಮಹಿಳೆ ಜಾಕ್‌ಪಾಟ್ ಹೊಡೆದಿದ್ದಾರೆ. ಕಳೆದ 5 ವರ್ಷಗಳಿಂದ ಈ ಮಹಿಳೆ ದುಬೈ ಬಿಗ್ ಟಿಕೆಟ್ ಖರೀದಿಸುತ್ತಲೇ ಬಂದಿದ್ದಾರೆ. ಆದರೆ ಒಂದು ರೂಪಾಯಿ ಬಹುಮಾನ ಬಂದಿರಲಿಲ್ಲ. ಈ ಬಾರಿ ಅದೃಷ್ಠ ಕೈಹಿಡಿದಿದೆ. ಪರಿಣಾಮ 24.56 ಲಕ್ಷ ರೂಪಾಯಿ ಗೆದ್ದುಕೊಂಡಿದ್ದಾರೆ. ತಾನು ಲಾಟರಿ ಬಹುಮಾನ ಗೆದ್ದಿದ್ದೇನೆ ಅನ್ನೋದು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ತಾನು ಇನ್ನು ದುಬೈ ಲಾಟರಿ ಖರೀದಿಸುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ಕೇರಳದ 40 ವರ್ಷದ ಮಹಿಳೆ ಟಿಂಟು ಜೆಸ್ಮೋನ್ ಕಳೆದ 15 ವರ್ಷದಿಂದ ದುಬೈನ ಅಜ್ಮಾನ್‌ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳದಿಂತ ಅತೀ ಹೆಚ್ಚು ಜನ ದುಬೈ ಸೇರಿದಂತೆ ಅರಬ್ ರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಪೈಕಿ ಟಿಂಟು ಜೆಸ್ಮೋನ್ ಕೂಡ ಒಬ್ಬರು. ದುಬೈನಲ್ಲಿ ಹಲವು ಕೇರಳಿಗರು ದುಬೈ ಲಾಟರಿ ಟಿಕೆಟ್ ಅದೃಷ್ಠ ಪರೀಕ್ಷಿಸಿ ಕೈಸುಟ್ಟುಕೊಂಡಿದ್ದಾರೆ. ಇನ್ನು ಕೆಲವರು ರಾತ್ರೋರಾತ್ರಿ ಶ್ರೀಮಂತರಾಗಿದ್ದಾರೆ. ಆದರೆ ಟಿಂಟು ಜೆಸ್ಮೋನ್ ಕಳೆದ 5 ವರ್ಷದಿಂದ ದುಬೈ ಬಿಗ್ ವಿನ್ ಲಾಟರಿ ಟಿಕೆಟ್ ಖರೀದಿಸುತ್ತಲೇ ಬಂದಿದ್ದಾರೆ. ಸತತ ಐದು ವರ್ಷಗಳ ಪ್ರಯತ್ನದ ಬಳಿಕ ಟಿಂಟು ಜಿಸ್ಮೋನ್ 24.56 ಲಕ್ಷ ರೂಪಾಯಿ ಲಾಟರಿ ಗೆದ್ದುಕೊಂಡಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ದುಬೈ ಬಿಗ್ ಟಿಕೆಟ್ ಡ್ರಾ ಲಾಟರಿ ಬೆಲೆ ದುಬಾರಿ ಹೀಗಾಗಿ ಟಿಂಟು ಜಿಸ್ಮೋನ್ ಸಣ್ಣ ಗುಂಪು ಮಾಡಿಕೊಂಡು ಎಲ್ಲರೂ ಸೇರಿ ಒಂದು ಟಿಕೆಟ್ ಖರೀದಿಸುವ ಸುಲಭ ಉಪಾಯ ಮಾಡಿದ್ದಾರೆ. ಸಾಮಾನ್ಯವಾಗಿ ದುಬೈ ಟಿಕೆಟ್ ಖರೀದಿಸಲು ಭಾರತೀಯರು ಸಣ್ಣ ಸಣ್ಣ ಗುಂಪುಗಳಾಗಿ ಮಾಡಿ ಖರೀದಿಸುತ್ತಾರೆ. ದುಬಾರಿ ಬೆಲೆಯ ಟಿಕೆಟ್ ಕಾರಣ ಹೀಗೆ ಮಾಡಲಾಗುತ್ತದೆ. ಲಾಟರಿ ಗೆದ್ದರೆ ಬಹುಮಾನ ಹಂಚಿಕೆ ಮಾಡಲಾಗುತ್ತದೆ. ಇದೇ ರೀತಿ ಟಿಂಟು ಜಿಸ್ಮೋನ್ ಸಣ್ಣ ಗುಂಪಿನ ಜೊತೆ ಕಳೆದ 5 ವರ್ಷದಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಈ ಬಾರಿ ಟಿಂಟು ಜಿಸ್ಮೋನ್ ಸೂಚಿಸಿದ ಅದೃಷ್ಠ ಸಂಖ್ಯೆ 522882 ಗುಂಪು ಖರೀದಿಸಿತ್ತು. 10 ಜನರ ಗುಂಪು ಇದಾಗಿದೆ. ಲಾಟರಿ ಫಲಿತಾಂಶ ಬಂದಾಗ ಟಿಂಟು ಜಿಸ್ಮೋನ್‌ಗೆ ನಂಬಲು ಸಾಧ್ಯವಾಗಿಲ್ಲ. ಇದೀಗ ಗೆದ್ದಿರುವ 24.56 ಲಕ್ಷ ರೂಪಾಯಿ ಹಂಚಿಕೆಯಾಗಲಿದೆ.
ದುಬೈನಲ್ಲಿರುವ ಹಲವು ಕೇರಳಿಗರು ದುಬೈ ಟಿಕೆಟ್ ಕುರಿತು ಸೂಚಿಸಿದ್ದರು. ಕಳೆದ 15 ವರ್ಷದಿಂದ ದುಬೈನಲ್ಲಿದ್ದೇನೆ. ಆದರೆ ದುಬೈ ಬಿಗ್ ಟಿಕೆಟ್ ಖರೀದಿಸಲು ಆರಂಭಿಸಿದ್ದು ಕಳೆದ 5 ವರ್ಷಗಳಿಂದ. ಸಹೋದ್ಯೋಗಿಗಳು, ಗೆಳೆಯರು ಮೂಲಕ ದುಬೈ ಟಿಕೆಟ್ ಕುರಿತು ಹೆಚ್ಚು ತಿಳಿದುಕೊಂಡೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತು ನೋಡಿದ್ದೆ. ಕಳೆದ 5 ವರ್ಷಗಳಿಂದ ಪ್ರಯತ್ನಿಸುತ್ತಾ ಬಂದಿದ್ದೇನೆ. ಆದರೆ ಯಾವದೇ ಬಹುಮಾನ ಗೆದ್ದಿರಲಿಲ್ಲ. ಇದೀಗ ಸಾಧ್ಯವಾಗಿದೆ ಎಂದು ಟಿಂಟು ಜಿಸ್ಮೋನ್ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ