
ಟರ್ಕಿ(ಸೆ.03): ಉಕ್ರೇನ್‌ನ ಮಹಿಳೆಯೊಬ್ಬಳ ವರ್ತನೆ ಜನರನ್ನು ಬೆಚ್ಚಿ ಬೀಳಿಸಿದೆ. ವಿಮಾನದೊಳಗೆ ಸೆಕೆಯಾಗುತ್ತದೆ ಎಂದು ಆಕೆ ತುರ್ತು ನಿರ್ಗಮನ ದ್ವಾರ ತೆರೆದು ವಿಂಗ್ ಮೇಲೆ ನಡೆದಾಡಿದ್ದಾಳೆ. ಆಕೆಯ ಈ ವರ್ತನೆ ಕಂಡ ಏರ್‌ಲೈನ್ಸ್ ಆಕೆಯನ್ನು ಬ್ಲ್ಯಾಕ್‌ಲಿಸ್ಟ್ ಮಾಡಿದೆ.
ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಈ ಸಂಬಂಧ ಉಕ್ರೇನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಪ್ರತಿಕ್ರಿಯಿಸುತ್ತಾ ಮಹಿಳೆ ತುರ್ತು ನಿರ್ಗಮನ ದ್ವಾರ ತೆರೆದು ವಿಂಗ್ ಮೇಲೆ ನಡೆದಾಡಲಾರಂಭಿಸಿದ್ದಳು ಎಂದಿದ್ದಾರೆ. ದ ಸನ್ ವರದಿಯನ್ವಯ ಟರ್ಕಿಯಿಂದ ಹೊರಟ ವಿಮಾನ ಉಕ್ರೇನ್‌ನ ಕೀವ್ ನಗರದಲ್ಲಿ ಇಳಿದ ಬಳಿಕ ಮಹಿಳೆ ತನಗೆ ಸೆಕೆಯಾಗುತ್ತಿದೆ ಎಂದು ದೂರಿದ್ದಳು. ಅಲ್ಲೇ ಗಾಳಿ ಬರಲೆಂದು ಬೋಯಿಂಗ್ 737-86N ವಿಮಾನದ ಒಂದು ತುರ್ತು ನಿರ್ಗಮನ ದ್ವಾರ ಓಪನ್ ಮಾಡಿ ವಿಮಾನದ ರೆಕ್ಕೆ ಮೇಲೆ ನಡೆದಾಡಿದ್ದಾಳೆ.
Ladbible ವರದಿಯನ್ವಯ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಈ ಬಗ್ಗೆ ಮಾಹಿತಿ ನೀಡುತ್ತಾ ವಿಮಾನ ಇಳಿದಿತ್ತು. ಸರಿಸುಮಾರು ಎಲ್ಲಾ ಪ್ರಯಾಣಿಕರು ಇಳಿದಿದ್ದರು.. ಮಹಿಳೆಯೂ ಬರುತ್ತಿದ್ದಳು. ಆದರೆ ಅಷ್ಟರಲ್ಲೇ ಆಕೆ ಎಎಮರ್ಜನ್ಸಿ ಎಕ್ಸಿಟ್ ದ್ವಾರ ತೆರೆದು, ವಿಂಗ್ ಮೇಲೆ ಓಡಾಡಿದ್ದಾಳೆ ಎಂದಿದ್ದಾರೆ. ಆಕೆ ಜೊತೆ ಆಕೆಯ ಇಬ್ಬರು ಮಕ್ಕಳೂ ಇದ್ದರು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ