ಅಣ್ವಸ್ತ್ರ ಸಂಖ್ಯೆ ದ್ವಿಗುಣಕ್ಕೆ ಚೀನಾ ಯತ್ನ!

Published : Sep 03, 2020, 09:42 AM IST
ಅಣ್ವಸ್ತ್ರ ಸಂಖ್ಯೆ ದ್ವಿಗುಣಕ್ಕೆ ಚೀನಾ ಯತ್ನ!

ಸಾರಾಂಶ

ಭಾರತದ ಜತೆ ಗಡಿ ಸಂಘರ್ಷ ಹಾಗೂ ಅಮೆರಿಕ ಜತೆ ವ್ಯಾಪಾರ ಸಮರ| ಅಣ್ವಸ್ತ್ರ ಸಂಖ್ಯೆ ದ್ವಿಗುಣಕ್ಕೆ ಚೀನಾ ಯತ್ನ| ದಶಕದ ಒಳಗಾಗಿ ತನ್ನ ಬಳಿ ಇರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜನೆ

ನ್ಯೂಯಾರ್ಕ್(ಸೆ.03): ಭಾರತದ ಜತೆ ಗಡಿ ಸಂಘರ್ಷ ಹಾಗೂ ಅಮೆರಿಕ ಜತೆ ವ್ಯಾಪಾರ ಸಮರ ನಡೆಸುತ್ತಿರುವ ಚೀನಾ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ದಶಕದ ಒಳಗಾಗಿ ತನ್ನ ಬಳಿ ಇರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜನೆ ರೂಪಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ ವರದಿ ಬಿಡುಗಡೆ ಮಾಡಿರುವುದು ಕಳವಳಕ್ಕೆ ಕಾರಣವಾಗಿದೆ. ಸದ್ಯ ಚೀನಾ ಸೇನೆ ಬಳಿ 200 ಅಣ್ವಸ್ತ್ರ ಸಿಡಿತಲೆಗಳು ಇವೆ. ಅವುಗಳ ಸಂಖ್ಯೆಯನ್ನು 10 ವರ್ಷಗಳಲ್ಲಿ ದ್ವಿಗುಣಗೊಳಿಸಲು ಹಾಗೂ ಆಗಸದಿಂದಲೇ ಹಾರಿಸುವಂತಹ ‘ಗುರುತ್ವ ಬಲ ಆಧರಿಸಿ ಗುರಿ ತಲುಪುವ’ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲು ಚೀನಾ ಪ್ರಯತ್ನಿಸುತ್ತಿದೆ.

ಜತೆಗೆ ನೆಲ, ಸಮುದ್ರ ಹಾಗೂ ಗಾಳಿಯಿಂದ ಅಣ್ವಸ್ತ್ರ ದಾಳಿ ಮಾಡುವಂತಹ ಸೌಲಭ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಿದೆ ಎಂದು ಪೆಂಟಗನ್‌ ವರದಿ ತಿಳಿಸಿದೆ. ಅಣ್ವಸ್ತ್ರ ನಿಯಂತ್ರಣ ಸಂಘಟನೆಯ ಲೆಕ್ಕಾಚಾರದ ಅನ್ವಯ ಪ್ರಸಕ್ತ ರಷ್ಯಾದ ಬಳಿ 6300, ಅಮೆರಿಕದ ಬಳಿ 5800, ಭಾರತದ ಬಳಿ 150 ಅಣ್ವಸ್ತ್ರಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್