ಈ ಹುಡುಗಿ ತಲೆಯಲ್ಲಿರುವುದು ಹೂವಲ್ಲ ಹಾವು..?

By Contributor Asianet  |  First Published Dec 23, 2021, 4:23 PM IST
  • ಹಾವನ್ನೇ ಹೂವಂತೆ ಸುತ್ತಿಕೊಂಡ ಮಹಿಳೆ
  • ಶಾಪಿಂಗ್‌ ಮಾಲ್‌ನಲ್ಲಿ ಕಂಡುಬಂತು ಗಾಬರಿಯಾಗುವ ಘಟನೆ
  • ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್‌

ಪ್ರಾಣಿಗಳು ಪಕ್ಷಿಗಳು, ಸರೀಸೃಪ ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ. ಕೆಲವು ವಿಡಿಯೋಗಳಿಗೆ ಅಯ್ಯೋ ಎಂದು ನೀವು ಉದ್ಘರಿಸುವಂತಿದ್ದರೆ ಮತ್ತೆ ಕೆಲವು  ವಿಡಿಯೋಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಆದರೆ ನಾವು ಈಗ ನಿಮಗೆ ತೋರಿಸಲು ಹೊರಟಿರುವ ವಿಡಿಯೋ ನಿಮ್ಮ ನಿಮ್ಮ ಕಣ್ಣುಗಳನ್ನು ತಿರುಗಿವಂತೆ ಮಾಡುವುದು ಗ್ಯಾರಂಟಿ. ಹಾವು (snake) ಕಂಡಾಗ ಸಾಮಾನ್ಯವಾಗಿ ನಾವೆಲ್ಲರೂ ಒಂದೋ ಅದನ್ನು ಓಡಿಸಲು ಪ್ರಯತ್ನಿಸುತ್ತೇವೆ ಅಥವಾ ನಾವೇ ಓಡಲು ಆರಂಭಿಸುತ್ತೇವೆ. ಆದರೆ ಇಲ್ಲೊಬ್ಬಳು ತಲೆಗೆ ಹಾವನ್ನೇ ಹೇರ್‌ ಬ್ಯಾಂಡ್  ರೀತಿ ಸುತ್ತಿಕೊಂಡು ಶಾಪಿಂಗ್‌ ಬಂದಿದ್ದು, ಎಲ್ಲರನ್ನೂ ಗಾಬರಿಗೆ ನೂಕಿದ್ದಾಳೆ. 

ಶಾಪಿಂಗ್ ಮಾಲ್ (shopping mall) ಒಳಗಿನ ವಿಡಿಯೋ ಇದಾಗಿದ್ದು, ಶಾಪಿಂಗ್‌ ಬಂದ ಮಹಿಳೆಯೊಬ್ಬಳು ತಲೆಗೆ ಹೇರ್‌ ಬ್ಯಾಂಡ್‌ ರೀತಿ ಹಾವನ್ನೇ ಬಳಸಿ ಕೂದಲನ್ನು ಕಟ್ಟಿದ್ದು, ಹೀಗೆಯೇ ಈಕೆ ಮಾಲ್‌ನಲ್ಲಿ ಓಡಾಡಿದ್ದಾಳೆ. ಆದರೆ ಮಾಲ್‌ಗೆ ಬಂದ ಇತರರ ಜೀವ ಹಾವು ನೋಡಿ ಸುಮ್ಮನೆ ಕೂರಲು ಸಾಧ್ಯವೇ. ಈಕೆಯ ತಲೆಯಲ್ಲಿ ಹಾವು ನೋಡಿದವರೆಲ್ಲರೂ ಭಯಾನಕ ಪ್ರತಿಕ್ರಿಯೆಗಳನ್ನು ನೀಡಿದ್ದಲ್ಲದೇ ಈ ರೀತಿಯೂ ಜನ ಇರುತ್ತಾರೆ ಎಂದು ತಲೆಗೆ ಹಾವು ಸುತ್ತಿ ಬಂದವಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ (Social Media)ದಲ್ಲಿ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ (Instagram)ನಲ್ಲಿ ವೈರಲ್‌ ಆಗಿದೆ. 

 
 
 
 
 
 
 
 
 
 
 
 
 
 
 

Latest Videos

undefined

A post shared by 🐍SNAKE WORLD🐍 (@snake._.world)

 

ವಿಡಿಯೋವನ್ನು ತುಂಬಾ ಹತ್ತಿರದಿಂದ ಗಮನಿಸಿದರೆ ಇದು ಹೇರ್‌ಬ್ಯಾಂಡ್‌(hairband) ಅಲ್ಲ ಹಾವು ಎಂಬುದು ತಿಳಿದು ಬರುತ್ತದೆ. ಈ ವಿಡಿಯೋವನ್ನು  15,000ಕ್ಕೂ ಹೆಚ್ಚು ಜನ ಇನ್ಸ್ಟಾಗ್ರಾಮ್‌ನಲ್ಲಿ ವೀಕ್ಷಿಸಿದ್ದು, ಈ ವಿಡಿಯೋ ನೋಡಿದವರೆಲ್ಲರೂ ಶಾಕ್‌ನಿಂದ ಪ್ರತಿಕ್ರಿಯಿಸಿದ್ದಾರೆ. ರಬ್ಬರ್‌ ಬ್ಯಾಂಡ್‌ಗಿಂತ ಇದು ಗಟ್ಟಿಯಾಗಿ ಕೂದಲನ್ನು ಹಿಡಿದಿಡುವುದು ಎಂದು ಆಕೆ ಭಾವಿಸಿರಬೇಕು ಎಂದು ಒಬ್ಬರು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ವಿದೇಶವೊಂದರ ವಿಡಿಯೋ ಇದಾಗಿದ್ದು, ಎಲ್ಲಿ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

snake in sofa: ಹೊಸ ಸೋಫಾ ಮನೆಗೆ ತಂದವನಿಗೆ ಶಾಕ್‌...

ಕಳೆದ ತಿಂಗಳು ಮಹಿಳೆಯೊಬ್ಬರು ಹಾವನ್ನು ಚುಂಬಿಸಿ ಮುದ್ದಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಹಾವು ಮಹಿಳೆಯ ಕುತ್ತಿಗೆಗೆ ಸುತ್ತಿಕೊಂಡಿದ್ದು, ಅದರ ತಲೆಯು ಆಕೆಯ ಮುಖದ ಮೇಲೆ ನಿಂತಿತ್ತು. ಅವಳು ಹಾವನ್ನು ಕೆಲವು ಸೆಕೆಂಡುಗಳ ಕಾಲ ಮುದ್ದಾಡಿದಳು ಮತ್ತು ನಂತರ ಅದರ ಗಲ್ಲಕ್ಕೆ ಮುತ್ತಿಕ್ಕಿ 'ಐ ಲವ್ ಯೂ' ಎಂದಿದ್ದಳು ಅದು ಅವಳ ಬಾಯಿಯ ಬಳಿ ಬಂದಿತು. ಮಹಿಳೆ ಉಸಿರುಗಟ್ಟಿಸಿ ಮತ್ತೆಹಾವನ್ನು ಚುಂಬಿಸಿದಾಗ ಹಾವು ಬಾಯಿ ತೆರೆದುಕೊಂಡಿತು. ವಿದೇಶಗಳಲ್ಲಿ ಅನೇಕ ಜನರು ಹಾವುಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. 

Snake Killed in Shivamogga : ನಾಗನ ಕೊಂದ ಎಂಜಿನಿಯರ್ಗೆ ಎದುರಾಯ್ತು ಸಂಕಷ್ಟ 

ವಿಶ್ವಾದ್ಯಂತ ಲಕ್ಷಾಂತರ ಜನರು ಹಾವುಗಳ  (Snakes) ಕಡಿತದಿಂದ ಸಾವನ್ನಪ್ಪುತ್ತಾರೆ. ಭಾರತದಲ್ಲಿಯೂ ಹಾವು ಕಚ್ಚಿ  (Snake Bite) ಜನರು ಸಾಯುವುದು ಸಾಮಾನ್ಯ. ಕೇರಳ(kerala) ರಾಜ್ಯವೊಂದರಲ್ಲೇ  ಕಾಡು ಮೃಗಗಳ ಆಕ್ರಮಣದಿಂದಾಗಿ ಮೃತಪಟ್ಟವರಲ್ಲಿ ಮೂರು ಪಟ್ಟು ಮಂದಿ ಹಾವು ಕಡಿತದಿಂದಲೇ ಸಾಯುತ್ತಿರುವುದಾಗಿ ಅಂಕಿ ಅಂಶಗಳು ತಿಳಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿ 435 ಮಂದಿ ಹಾವು ಕಡಿತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಹಾವುಗಳು ತಮಗೆ ಭಯವುಂಟಾದಾಗ, ಅವುಗಳು ಬೆಚ್ಚಿಬಿದ್ದಾಗ, ಕೆರಳಿಸಲ್ಪಟ್ಟಾಗ, ಅಥವಾ ಮೂಲೆಯಲ್ಲಿ ಸಿಲುಕಿಕೊಂಡು ತಪ್ಪಿಸಿಕೊಳ್ಳುವುದಕ್ಕೆ ಯಾವುದೇ ದಾರಿಯಿಲ್ಲದ ಸಂದರ್ಭಗಳಲ್ಲಿ ಕಚ್ಚುತ್ತವೆ.  ಪ್ರಪಂಚದಾದ್ಯಂತ 3,500 ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಭಾರತದಲ್ಲಿ ಸುಮಾರು 256ಕ್ಕೂ ಅಧಿಕ ಜಾತಿಯ ಹಾವುಗಳಿವೆ. ಈ ಪೈಕಿ 10 ರಿಂದ15 ಜಾತಿಯ ಹಾವುಗಳು ಮಾತ್ರ ವಿಷಜಂತುಗಳು. ಇವು ಶೀತ-ರಕ್ತದ ಪ್ರಾಣಿಗಳ ವರ್ಗಕ್ಕೆ ಸೇರಿವೆ.

click me!