Kite Flying: ಹಾರಿಸುತ್ತಿದ್ದವನನ್ನು ಒಟ್ಟಿಗೆ ಮೇಲೆ ಎಳೆದೊಯ್ದ ಗಾಳಿಪಟ

By Suvarna NewsFirst Published Dec 23, 2021, 3:32 PM IST
Highlights
  • ಗಾಳಿಪಟ ಹಾರಿಸುವ ವೇಳೆ ಗಾಳಿಯಲ್ಲಿ ಹಾರಿದ ವ್ಯಕ್ತಿ
  • ಶ್ರೀಲಂಕಾದ ಜಾಫ್ನಾ ಜಿಲ್ಲೆಯಲ್ಲಿ ಘಟನೆ
  • ದಾರ ಹಿಡಿದು ನೇತಾಡಿದ  ನದರಸಾ ಮನೋಹರನ್

ಕೊಲಂಬೋ(ಡಿ.23):  ಶ್ರೀಲಂಕಾದಲ್ಲಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು  ಅಕ್ಷರಶಃ  ದಾರದಲ್ಲಿ ನೇತಾಡಿದಂತಹ ಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ.  ಶ್ರೀಲಂಕಾ (Sri Lanka)ದ ಜಾಫ್ನಾ (Jaffna) ಜಿಲ್ಲೆಯಲ್ಲಿರುವ ಪಾಯಿಂಟ್ ಪೆಡ್ರೊದಲ್ಲಿ ಒಂದು ಮಗುವಿನ ತಂದೆ ಗಾಳಿಪಟವನ್ನು ಹಾರಿಸುತ್ತಿದ್ದಾಗ, ಎಲ್ಲಿಂದಲೂ ಬೀಸಿ ಬಂದ ದೊಡ್ಡ ಗಾಳಿಯ ಪರಿಣಾಮ ಅವರು ಕೂಡ ಗಾಳಿಪಟದ ಜೊತೆ ಮೇಲೇರಿ ಹಗ್ಗದೊಂದಿಗೆ ನೇತಾಡುವಂತಾದ ಘಟನೆ ನಡೆದಿದೆ. ನದರಸಾ ಮನೋಹರನ್ (Nadarasa Manoharan) ಎಂಬುವವವರೇ ಹೀಗೆ ಮೇಲೆ ಹಾರಲ್ಪಟ್ಟ ವ್ಯಕ್ತಿಯಾಗಿದ್ದು, ಸುಮಾರು 30 ರಿಂದ 40 ಅಡಿಗಳಷ್ಟು ಎತ್ತರಕ್ಕೆ ಅವರು ಹಾರಲ್ಪಟ್ಟಿದ್ದಾರೆ. 

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,  ಮನೋಹರನ್ ಅವರ ದೊಡ್ಡ ಗಾಳಿಪಟಕ್ಕೆ ಜೋಡಿಸಲಾದ ಸೆಣಬಿನ ಹಗ್ಗದಲ್ಲಿ ನೇತಾಡುತ್ತಿರುವುದು ಕಾಣಿಸುತ್ತಿದೆ. ನಂತರ ಸ್ವಲ್ಪ ಹೊತ್ತಿನಲ್ಲೇ ಮನೋಹರನ್ ಅವರು ಕೆಳಗೆ ಬಿದ್ದಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅವರನ್ನು ಸ್ಥಳೀಯ ಪಾಯಿಂಟ್ ಪೆಡ್ರೊ ಆಸ್ಪತ್ರೆ (Point Pedro Hospital) ಗೆ ದಾಖಲಿಸಲಾಗಿದೆ.

3 ವರ್ಷದ ಮಗುವನ್ನು ಹೊತ್ತೊಯ್ದ ಗಾಳಿಪಟ!

ಘಟನೆಯ ಬಗ್ಗೆ ಮನೋಹರನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು,  ತಮ್ಮ ಹಿಂದೆ ಇದ್ದ ಐವರು ಈ  ಗಾಳಿಪಟದ ಹಗ್ಗವನ್ನು ಬಿಟ್ಟಿದ್ದಾರೆಂದು ತಿಳಿಯದೇ ಗಾಳಿಪಟ ಮೇಲೇರುತ್ತಿದ್ದರು ಮನೋಹರನ್‌ ಅವರು ಗಾಳಿಪಟದ  ಹಗ್ಗವನ್ನು ಬಿಗಿಯಾಗಿ ಹಿಡಿದಿದ್ದರಂತೆ. ಪರಿಣಾಮ ಅವರು ಗಾಳಿಪಟದೊಂದಿಗೆ ಮೇಲೆ ಹೋಗಿದ್ದಾರೆ. ಮೇಲೆ ಹೋದ ನಂತರವಂತೂ ಅವರು ಕೆಳಗೆ ನೋಡಲೇ ಇಲ್ಲವಂತೆ. ದರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಅವರು ಸುಸ್ತಾಗುತ್ತಿದ್ದಂತೆ ದಾರವನ್ನು ಬಿಟ್ಟಿದ್ದು, ಕೆಳಗೆ ಬಿದ್ದಿದ್ದಾರೆ. 

ಬೈಕ್ ಸವಾರರ ಕತ್ತು ಸೀಳಿದ ಗಾಳಿಪಟ ದಾರ; ಇಬ್ಬರಿಗೆ ಗಂಭೀರ ಗಾಯ!

ಗಾಳಿಪಟ ಹಾರಿಸುವ ವೇಳೆ ಹೀಗೆ ಭಯಾನಕ ತಿರುವು ಪಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ತೈವಾನ್‌ (Taiwan)ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮೂರು ವರ್ಷದ ಬಾಲಕಿಯು ದೈತ್ಯ ಗಾಳಿಪಟದ ಬಾಲದಲ್ಲಿ ಸಿಕ್ಕಿಹಾಕಿಕೊಂಡ ನಂತರ 100 ಅಡಿ (30 ಮೀಟರ್) ಗಿಂತ ಹೆಚ್ಚು ಎತ್ತರದ ಗಾಳಿಯಲ್ಲಿ ಸುತ್ತಾಡಿದ್ದಳು. ಗಾಳಿಪಟ ಉತ್ಸವದಲ್ಲಿ ದೈತ್ಯ ಆಕಾರದ ಗಾಳಿಪಟಗಳನ್ನು ಹಾರಿಸಲಾಗುತ್ತಿತ್ತು. ಇದನ್ನು ನೋಡಲು ಹೋಗಿದ್ದ ಪುಟ್ಟಮಗು ಗಾಳಿಪಟದೊಂದಿಗೆ ಹಾರಿ ಹೋಗಿದ್ದಾಳೆ. ಜೋರಾಗಿ ಗಾಳಿ ಬೀಸುತ್ತಿದ್ದರಿಂದ ದೈತ್ಯಗಾಳಿಪಟ ಮಗುವನ್ನು 100 ಅಡಿ ಎತ್ತರಕ್ಕೆ ಹಾರಿಸಿಕೊಂಡು ಹೋಗಿದೆ. ಕೊನೆಗೆ ಗಾಳಿಪಟವನ್ನು ನಿಯಂತ್ರಣಕ್ಕೆ ತಂದು ಮಗುವನ್ನು ಕೆಳಗೆ ಇಳಿಸಲಾಗಿದೆ. ಅದೃಷ್ಟವಶಾತ್‌ ಮಗು ಸಣ್ಣಪುಟ್ಟಗಾಯಗಳಿಂದ ಪಾರಾಗಿದೆ.

click me!