
ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಬಾಸ್ (Boss) ಮತ್ತು ಸಿಬ್ಬಂದಿ ನಡುವಿನದಲ್ಲಿ ಒಂಥರಾ ಎಣ್ಣೆ-ಸೀಗೆಕಾಯಿ ಸಂಬಂಧ. ಇದನ್ನು ಹೊಸದಾಗಿ ಹೇಳಲೇಬೇಕಾಗಿಲ್ಲ. ಎಲ್ಲ ಕಚೇರಿಗಳಲ್ಲೂ ಒಂದೆಲ್ಲಾ ಒಂದು ತಾಪತ್ರಯ ಇದ್ದೇ ಇರುತ್ತದೆ. ಅದಕ್ಕೆ ಹೇಳುವುದು ಜನ ಕೆಟ್ಟ ಕೆಲಸಗಳನ್ನು ಬಿಡುವುದಿಲ್ಲ..ಕೆಟ್ಟ ಬಾಸ್ ಗಳನ್ನು ತೊರೆಯುತ್ತಾರೆ ಎಂಬ ಮಾತು!
ಈ ಮಹಿಳೆಯ (Woman)ರಾಜೀನಾಮೆ (Resignation) ಪತ್ರ ಮಾತ್ರ ಈಗ ದೊಡ್ಡ ಸುದ್ದಿ ಮಾಡುತ್ತಿದೆ. ಇದು ರಾಜೀನಾಮೆ ಪತ್ರವಲ್ಲ ಸಂತಾಪದ ಕಾರ್ಡ್. ಮಹಿಳೆ ಸಂತಾಪದ ಕಾರ್ಡ್ ನ್ನೇ ಕಳಿಸಿ ಅದನ್ನೇ ರಾಜೀನಾಮೆ ಪತ್ರ ಎಂದಿದ್ದಾರೆ. ಸಾರಿ ಪಾರ್ ಯುವರ ಲಾಸ್ ಎಂದು ಬರೆದಿದ್ದಾರೆ. Reddit ನಲ್ಲಿ ತಮ್ಮ ಸಂತಾಪದ ಕಾರ್ಡ್(bereavement card) ನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ವೈರಲ್ ಆಗುತ್ತಿದೆ.
ಬಿಎಸ್ ಯಡಿಯೂರಪ್ಪ ರಾಜೀನಾಮೆ ಹಿಂದಿನ ಕಾರಣ!
ಈ ದಿಟ್ಟ ಮಹಿಳೆ ಹೆಸರು ಅಂಬರ್.. ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಸುಪರ್ ವೈಸರ್ ನಡುವಳಿಕೆಯಿಂದ ಕೆಲಸ ತೊರೆದಿದ್ದಳು. ಕೆಲಸ ಬಿಟ್ಟಿದ್ದಕ್ಕೆ ರಾಜೀನಾಮೆ ಪತ್ರದ ರೀತಿ ಸಂತಾಪದ ಕಾರ್ಡ್ ಕಳಿಸಿದ್ದಾಳೆ. ಸಾರಿ ಫಾರ್ ಯುವರ್ ಲಾಸ್ ಎಂದು ಬರೆದಿದ್ದಾಳೆ. It's me, I leave in two weeks." ಎಂದು ಬರೆದು ಶಾಕ್ ಕೊಟ್ಟಿದ್ದಾಳೆ.
ಅಂತಾರಾಷ್ಟ್ರೀಯ ಮಾಧ್ಯಮ ಇದನ್ನು ಸಚಿತ್ರವಾಗಿ ವರದಿ ಮಾಡಿದೆ. ಮಹಿಳೆ ಬೇರೆ ಕಡೆ ಅತ್ಯುತ್ತಮ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದಾಳೆ ಎನ್ನುವುದನ್ನು ತಿಳಿಸಲಾಗಿದೆ. ನಾನು ಇವತ್ತು ಜಾಬ್ ಆಫರ್ ಲೆಟರ್ ಪಡೆದುಕೊಂಡಿದ್ದೇನೆ.
ನಾನು ಯಾಕೆ ಕೆಲಸ ತೊರೆಯುತ್ತಿದ್ದೇನೆ ಎಂದು ನನ್ನ ಹಳೆಯ ಬಾಸ್ ಕೊನೆಗೂ ಕೇಳಲೇ ಇಲ್ಲ. ಎರಡು ವಾರಗಳಿಂದ ನಾನು ರಜಾದಲ್ಲಿ ಇದ್ದರೂ ಕಾರಣವನ್ನು ಹೇಳಿಲ್ಲ ಎಂದು ಮಹಿಳೆ ತಿಳಿಸಿದ್ದಾಳೆ.
ಕೊರೋನಾ ನಂತರ ಕೆಲಸದ ದೃಷ್ಟಿಕೋನವೂ ಬದಲಾಗಿದೆ. ವರ್ಕ್ ಫ್ರಾಂ ಹೋಂ ಎನ್ನುವುದು ಸಾಮಾನ್ಯವಾಗುವ ಸ್ಥಿತಿಗೆ ಬಂದಿದ್ದೇವೆ. ಕೊರೋನಾ ವೈರಸ್ ಪ್ರಪಂಚವನ್ನು ಆವರಿಸಿದ ಮೇಲೆ ಜೀವನದ ಪದ್ಧತಿಗಳು ದಲಾಗಿದೆ. ರಾಜೀನಾಮೆ ಪತ್ರ ಎನ್ನುವುದಕ್ಕಿಂತ ಇದೊಂದು ಠಕ್ಕರ್ ಪತ್ರ ಎಂದೇ ಕರೆಯಬಹುದು.
ಬೆಳಗಾವಿ ಪ್ರಕರಣ; ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಭೆಂಡವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಹೊಂಡದಲ್ಲೊಂದು ವಿಚಿತ್ರ ಪ್ರಕರಣ ನಡೆದಿತ್ತು. ಈ ರೈತನ ಸರ್ವೆ ನಂಬರ್ 21/1 ರಲ್ಲಿ ಸರ್ಕಾರದಿಂದ ಬಾವಿ ತೋಡಲಾಗಿದೆ ಅಂತ ಭೆಂಡವಾಡ ಗ್ರಾಮ ಪಂಚಾಯತ್‌ನಲ್ಲಿ 77 ಸಾವಿರ ರೂಪಾಯಿ ನಕಲಿ ಬಿಲ್ ತೆಗೆದು, ಅಧಿಕಾರಿಗಳು ಆ ಹಣವನ್ನ ತಿಂದು ತೇಗಿದ್ದಾರೆ. ಆದರೆ ಮಲ್ಲಪ್ಪನ ಹೊಲದಲ್ಲಿ ಯಾವುದೇ ಬಾವಿ ತೋಡಲಾಗಿಲ್ಲ. ಇದು ಮಲ್ಲಪ್ಪನ ಗಮನಕ್ಕೆ ಬಂದಿದ್ದು, ಮಲ್ಲಪ್ಪ ಅದಕ್ಕೆ ಸಂಬಧಿಸಿದ ಬಿಲ್ ಹಿಡಿದು ಈಗ ಅಧಿಕಾರಿಗಳಿಗೆ ಬಾವಿ ಹುಡುಕಿಕೊಡಿ ಅಂತ ಮನವಿ ಸಲ್ಲಿಸಿದ್ದರು.
ಅಲ್ಲದೇ ಅದೇ ಗ್ರಾಮದಲ್ಲಿ ಮಲ್ಲಪ್ಪ ರಾಮಪ್ಪ ಕುಲಗುಡೆ ಎಂಬ ಹೆಸರಿನ ಮತ್ತೋರ್ವ ವ್ಯಕ್ತಿ ಇದ್ದು, ಆತನ ಹೆಸರಿನಲ್ಲಿ ಯಾವುದೇ ರೀತಿಯ ಜಮೀನು ಇಲ್ಲ. ಅಲ್ಲದೇ ನಮ್ಮ ಜಮೀನಿನಲ್ಲಿ ಪೂರ್ವಜರ ಕಾಲದಿಂದಲೂ ಬಾವಿ ಇದ್ದು, ಒಂದೇ ಹೆಸರು ಇರುವುದರಿಂದ ಮತ್ತೋರ್ವ ವ್ಯಕ್ತಿ ಮಲ್ಲಪ್ಪ ರಾಮಪ್ಪ ಕುಲಗುಡೆ ಎಂಬುವರ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬಿಲ್ ತೆಗೆದಿದ್ದಾರೆ. ಹಾಗಾಗಿ ಬಾವಿಯೇ ಇಲ್ಲದ ಜಾಗದಲ್ಲಿ ಬಾವಿ ಇತ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ