ವಿಯೆನ್ನಾ(ನ.19): ಕೊರೋನಾ ವೈರಸ್(Coronavirus) ನಿಯಂತ್ರಣಕ್ಕೆ ಬಂದಿದೆ ಅನ್ನುವಷ್ಟರಲ್ಲೇ ಮತ್ತೆ ವೈರಸ್ ಭೀತಿ ಹೆಚ್ಚಾಗಿದೆ. ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕೊರೋನಾ ವೈರಸ್ 4ನೇ ಅಲೆಯಿಂದ ಆಸ್ಟ್ರಿಯಾ(Austria) ತತ್ತರಿಸಿದೆ. ಪರಿಣಾಮ ದೇಶವ್ಯಾಪಿ ಲಾಕ್‌ಡೌನ್(Lockdown) ಘೋಷಿಸಲಾಗಿದೆ. ಇಷ್ಟು ದಿನ ಬ್ರಿಟನ್, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ವರದಿ ಆತಂಕ ತಂದಿತ್ತು. ಇದೀಗ ಲಾಕ್‌ಡೌನ್ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದೆ.
ಸೋಮವಾರದಿಂದ(ನ.22 ) ಆಸ್ಟ್ರಿಯಾದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಮುಂದಿನ 10 ದಿನಗಳ ವರೆಗೆ ಲಾಕ್‌ಡೌನ್ ಮುಂದುವರಿಯಲಿದೆ . ಇಷ್ಟೇ ಅಲ್ಲ ಕೊರೋನಾ ನಿಯಂತ್ರಣಕ್ಕೆ ಬರುವ ವರೆಗೆ ಲಾಕ್‌ಡೌನ್ ಮುಂದುವ ಸಾಧ್ಯತೆ ಇದೆ ಎಂದು ಆಸ್ಟ್ರಿಯಾ ಚಾನ್ಸಿಲರ್ ಅಲೆಕ್ಸಾಂಡರ್ ಚಾಲೆನಬರ್ಗ್ ಹೇಳಿದ್ದಾರೆ.
ಕೋವಿಡ್ : ಸಕ್ರಿಯ ಕೇಸು ಅಲ್ಪ ಏರಿಕೆ ದಾಖಲು
undefined
ಆಸ್ಟ್ರಿಯಾದಲ್ಲಿ ಲಸಿಕೆ(Covid vaccine) ನೀಡುವಿಕೆ ವೇಗ ಹೆಚ್ಚಿಸಲಾಗುತ್ತಿದೆ. ಫೆಬ್ರವರಿ 1 ರಿಂದ ಕೋವಿಡ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಆಸ್ಟ್ರಿಯಾದಲ್ಲಿ ಕೊರೋನಾ ಹೆಚ್ಚಳಕ್ಕೆ ಹಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಕಾರಣವಾಗಿದೆ. ಲಸಿಕೆಯಿಂದ ಅಡ್ಡಪರಿಣಾಮಗಳಾಗುತ್ತಿದೆ ಎಂದು ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ದಿಢೀರ್ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆಸ್ಟ್ರಿಯಾ ಚಾನ್ಸಿಲರ್ ಅಲೆಕ್ಸಾಂಡರ್ ಚಾಲೆನಬರ್ಗ್ ಹೇಳಿದ್ದಾರೆ.
ಕೊರೋನಾ ನಿಯಂತ್ರಣ ಅಸಾಧ್ಯವಾಗುತ್ತಿರುವ ಹಿನ್ನಲೆಯಲ್ಲಿ ಆಸ್ಟ್ರಿಯಾದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಇದು ಕಠಿಣ ಲಾಕ್‌ಡೌನ್ ಆಗಿದ್ದು, ಅಗತ್ಯ ವಸ್ತು ಖರೀದಿ ಹಾಗೂ ತುರ್ತು ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಕರ್ನಾಟಕದಲ್ಲಿ ಕೊರೋನಾ ಸೋಂಕು, ಸಾವು ಅಲ್ಪ ಹೆಚ್ಚಳ, ಇರಲಿ ಎಚ್ಚರ
ಅಸ್ಟ್ರಿಯಾದಲ್ಲಿ ಪ್ರತಿ ದಿನ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ದಿನ 15,000 ಕೊರೋನಾ ವೈರಸ್ ಪ್ರಕರಣ ದಾಖಲಾಗುತ್ತಿದೆ. ಆಸ್ಟ್ರಿಯಾದ ಜನಸಂಖ್ಯೆ 9 ಮಿಲಿಯನ್. ದೇಶದ ಜನಸಂಖ್ಯೆಯಲ್ಲಿ ಶೇಕಡಾ 66 ರಷ್ಟು ಜನ ಎರಡು ಡೋಸ್ ತೆಗೆದುಕೊಂಡಿದ್ದಾರೆ. ಆಸ್ಟ್ರಿಯಾದಲ್ಲಿ ಲಾಕ್‌ಡೌನ್ ಘೋಷಿಸಿರುವ ಕಾರಣ ಹಂಗೇರಿಯಾ ನೆರೆಯ ರಾಷ್ಟ್ರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತದಲ್ಲಿ(India) ಕೊರೋನಾ ವೈರಸ್ ಪ್ರಕರಣ ಕೆಲ ರಾಜ್ಯಗಳಲ್ಲಿ ಹೆಚ್ಚಾಗುತ್ತಿದೆ. ಕೊರೋನಾ ಹೊತ ತಳಿ ಪತ್ತೆಯಾಗುತ್ತಿರುವುದು ಭಾರತದ ಆತಂಕ ಹೆಚ್ಚಿಸಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 11,919 ಕೋವಿಡ್ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ(Kerala) 5,754 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ 7202 ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 51 ಮಂದಿ ಸಾವನ್ನಪ್ಪಿದ್ದಾರೆ. ದೇಶದ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆ್ಚ್ಚು ಪಾಲು ಕೇರಳದಿಂದ ವರದಿಯಾಗುತ್ತಿದೆ. ಕೇರಳದಲ್ಲಿ ಸಡಿಲಿಕೆ ಮಾಡಿರುವ ಕೊರೋನಾ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲು ಚಿಂತಿಸಲಾಗುತ್ತಿದೆ.
ಮಳೆ ಸೇರಿದಂತೆ ಹವಾಮಾನ ಬದಲಾವಣೆಯಿಂದ ಇದೀಗ ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಕೊರೋನಾ ಆತಂಕ ಹೆಚ್ಚಾಗುತ್ತಿದೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾದಿಂದ ಗುಣಮುಖರಾದವರ ಸಂಖ್ಯೆ 11,242. ಕೋವಿಡ್ ಗುಣಮುಖರ ಪ್ರಮಾಣ ಶೇಕಡಾ 98.28ಕ್ಕೆ ಏರಿಕೆಯಾಗಿದೆ. ಈ ಮೂಲಕ ಭಾರತ ಸಕ್ರೀಯ ಕೊರೋನಾ ಪ್ರಕರಣ ಸಂಖ್ಯೆ 1,28,762. ಇತ್ತ ಕೊರೋನಾ ಲಸಿಕೆಯಲ್ಲೂ ಭಾರತ ಪ್ರಗತಿ ಕಾಣುತ್ತಿದೆ. ದೇಶದಲ್ಲಿ ಈಗಾಗಲೇ 115 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದೀಗ ಎರಡನೇ ಡೋಸ್ ಕುರಿತು ಅಭಿಯಾನ ಆರಂಭಗೊಂಡಿದೆ. ಮನೆ ಮನೆಗೆ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಂಡಿದೆ.