ಆನ್‌ಲೈನ್‌ನಲ್ಲಿ ಗಂಡನ ಮಾರಾಟಕ್ಕಿಟ್ಟ ಮಹಿಳೆ... ನೋ ಎಕ್ಸ್‌ಚೇಂಜ್‌ ನೋ ರಿಟರ್ನ್‌

By Contributor AsianetFirst Published Feb 3, 2022, 3:18 PM IST
Highlights
  • ಗಂಡನ ಮೀನುಗಾರಿಕೆ ಹುಚ್ಚಿಗೆ ಬೇಸತ್ತ ಮಹಿಳೆ
  • ಆನ್‌ಲೈನ್‌ ಸೈಟ್‌ನಲ್ಲಿ ಗಂಡನ ಹರಾಜಿಗೆ ಜಾಹೀರಾತು
  • ನೋ ಎಕ್ಸ್‌ಚೇಂಜ್‌ ನೋ ರಿಟರ್ನ್‌ ಪಾಲಿಸಿ
     

ಆನ್‌ಲೈನ್‌ ಹರಾಜು ಸೈಟ್‌ನಲ್ಲಿ ವಸ್ತುಗಳನ್ನು ಹರಾಜಿಗಿಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಗಂಡನನ್ನೇ ಹರಾಜು ಸೈಟ್‌ನಲ್ಲಿ ಮಾರಾಟಕ್ಕಿಟ್ಟಿದ್ದಾಳೆ. ಐರಿಶ್ ಮಹಿಳೆಯೊಬ್ಬರು (Irish woman) ತನ್ನ ಪತಿಯನ್ನು ಹರಾಜು ಸೈಟ್‌ನಲ್ಲಿ 'ಮಾರಾಟ'ಕ್ಕೆ ಇಟ್ಟಿದ್ದು, ಗಂಡ ಆಕೆಯನ್ನು ಅವರ ಎರಡು ಮಕ್ಕಳೊಂದಿಗೆ ಮನೆಯಲ್ಲಿ ಬಿಟ್ಟು ಮೀನುಗಾರಿಕೆಗೆ ಹೋದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಲಿಂಡಾ ಮ್ಯಾಕ್‌ಅಲಿಸ್ಟರ್ (Linda McAlister) ಎಂಬಾಕೆಯೇ ಹೀಗೆ ಗಂಡನನ್ನು ಮಾರಾಟಕ್ಕಿಟ್ಟ ಮಹಿಳೆ.

ಆಕೆ ನೀಡಿದ ಜಾಹೀರಾತಿನಲ್ಲಿ ಆತ ಹೇಗಿದ್ದಾನೆ ಎಂಬ ಬಗ್ಗೆ ವಿವರ ನೀಡಿದ್ದಾಳೆ. ಆನ್‌ಲೈನ್‌ ಹರಾಜು ಸೈಟ್‌ಗಳಾದ ನ್ಯೂಜಿಲ್ಯಾಂಡ್ ಇಬೇ ಸ್ಟೈಲ್‌ ಸೈಟ್‌ (eBay-style site), ಟ್ರೇಡ್‌ಮೀ (TradeMe)ಎಂಬ ಸೈಟ್‌ಗಳಲ್ಲಿ ಜಾಹೀರಾತು ನೀಡಿದ್ದು, ಅವುಗಳ ಪ್ರಕಾರ ಆಕೆಯ ಪತಿ ಜಾನ್‌ (John) ಆರು ಅಡಿ ಒಂದು ಇಂಚು ಉದ್ದವಿದ್ದು, ಆತನ ವಯಸ್ಸು  37 ವರ್ಷ, ಬೇಟೆ ಹಾಗೂ ಮೀನುಗಾರಿಕೆಯಲ್ಲಿ ಪರಿಣಿತನಾಗಿದ್ದಾನೆ. ಗೋಮಾಂಸದ ಕೃಷಿ ಮಾಡುತ್ತಾನೆ. ಆಹಾರ ಹಾಗೂ ನೀರು ನೀಡಿದಲ್ಲಿ ಈತ ನಿಷ್ಠಾವಂತನಾಗಿರುತ್ತಾನೆ ಎಂದು ಮಹಿಳೆ ತನ್ನ ಗಂಡನ ಬಗ್ಗೆ ಜಾಹೀರಾತಿನಲ್ಲಿ ವಿವರ ನೀಡಿದ್ದಾಳೆ.

Latest Videos

ಅಯ್ಯೋ ಇರೋ ಒಬ್ಳನ್ನೇ ಮೇಂಟೇನ್‌ ಮಾಡಕ್ಕಾಗ್ತಿಲ್ಲ ಅನ್ನೋರು ಇಲ್‌ ಕೇಳಿ

ಅತಿಯಾದ ಜಲಸಂಚಯನವು ಕೆಲವು ಅಹಿತಕರ ಪರಿಣಾಮಗಳಿಗೆ ಕಾರಣವಾಗಬಹುದು. ವಿನಂತಿಯ ಮೇರೆಗೆ ವೀಡಿಯೊಗಳು ಲಭ್ಯವಿವೆ ಎಂದು ಲಿಂಡಾ ಜಾಹೀರಾತಿನಲ್ಲಿ ಬರೆದಿದ್ದಾರೆ.  ಹಾಗೆಯೇ ಈತನಿಗೆ ಇನ್ನೂ ಕೆಲವು ಮನೆ ಕೆಲಸದ ಬಗ್ಗೆ ತರಬೇತಿಯ ಅಗತ್ಯವಿದೆ. ಆದರೆ ಈ ಸಮಯದಲ್ಲಿ ನನಗೆ ಅದನ್ನೆಲ್ಲಾ ಆತನಿಗೆ ಕಲಿಸಲು ಸಮಯವೂ ಇಲ್ಲ ತಾಳ್ಮೆಯೂ ಇಲ್ಲ ಎಂದು ಆಕೆ ವಿವರಿಸಿದ್ದಾಳೆ. ಒಮ್ಮೆ ಮಾರಾಲ್ಪಟ್ಟಲ್ಲಿ ಅದೇ ಅಂತಿಮವಾಗಿದ್ದು, ಯಾವುದೇ ಎಕ್ಸ್‌ಚೇಂಜ್‌ ಮಾಡುವ ಅಥವಾ ಹಿಂತಿರುಗಿಸುವ ಅವಕಾಶವಿಲ್ಲ ಎಂದು ಮಹಿಳೆ ಬರೆದಿದ್ದಾಳೆ. 

ಭೇಟೆಯಾಡುವುದು ಹಾಗೂ ಮೀನುಗಾರಿಕೆ ನಡೆಸುವುದು ವಿಲಕ್ಷಣ ಗುಣವೇನು ಅಲ್ಲ. ಆದರೆ ಮಕ್ಕಳು ಶಾಲಾ ರಜಾದಿನಗಳಲ್ಲಿ ಇರುವ ಸಮಯದಲ್ಲಿ ಹೀಗೆ ಹೋಗುವುದು ಹಾಗೂ ಮತ್ತೆ ಮತ್ತೆ ಎಷ್ಟೇಷ್ಟೋತ್ತಿಗೆ ಮಲಗುವುದು ಇವೆಲ್ಲವೂ ನನ್ನ ತಾಳ್ಮೆ ಕೆಡಿಸಿದವು ಎಂದು ಮಹಿಳೆ ಲಿಂಡಾ stuff.co.nz ಸೈಟ್‌ಗೆ ತಾನು ಏಕೆ ಗಂಡನನ್ನು ಹರಾಜಿಗಿಟ್ಟೆ ಎಂಬುದಕ್ಕೆ ಕಾರಣವನ್ನು ಹೇಳಿದ್ದಾಳೆ.

Domestic Violence : 'ಮದುವೆ ಸ್ವರ್ಗದಲ್ಲಲ್ಲ, ನರಕದಲ್ಲಿ ನಿಶ್ಚಯವಾಗುತ್ತದೆ' ಎಂದ ಕೋರ್ಟ್!

ಈ ದಂಪತಿಗಳು 2019 ರಲ್ಲಿ ಐರ್ಲೆಂಡ್‌ನಲ್ಲಿ ( Ireland) ವಿವಾಹವಾಗಿದ್ದರು. ಇವರು 4 ವರ್ಷದ ಕೋಲ್ಟ್ (Colt) ಮತ್ತು 6 ವರ್ಷದ ರೈಡರ್ (Ryder)ಎಂಬ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಇತ್ತ ಮಹಿಳೆಯ ಪತಿ ಜಾನ್‌ಗೆ, ಹೆಂಡತಿ ಲಿಂಡಾ ಅವನನ್ನು ಹರಾಜಿಗೆ ಇಟ್ಟಿದ್ದಾಳೆ ಎಂಬುದನ್ನು ಆತನ ಸ್ನೇಹಿತರು ಹೇಳುವವರೆಗೆ ತಿಳಿದಿರಲಿಲ್ಲ. ಅಲ್ಲದೇ ಈ ಬಗ್ಗೆ ಆತನಿಗೆ ಗೊತ್ತಾದಾಗ ಆತ ಅದನ್ನು ಅಂತಹ ಗಂಭೀರವಾಗಿ ಪರಿಗಣಿಸದೇ ತಮಾಷೆಯಂತೆ ನೋಡಿದ್ದಾನೆ. ಅಲ್ಲದೇ ಇಡೀ ವಿಷಯದ ಬಗ್ಗೆ ಅವರು ನಗುತ್ತಿದ್ದಾರೆ ಎಂದು ಲಿಂಡಾ ಮಾಧ್ಯಮಗಳಿಗೆ ಹೇಳಿದ್ದಾರೆ. 

ಅದಾಗ್ಯೂ ಸೈಟ್‌ನ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಾಹೀರಾತನ್ನು ಅಂತಿಮವಾಗಿ ತೆಗೆದುಹಾಕಲಾಯಿತು. ಆದರೆ ಜಾನ್‌ ಬೆಲೆ ಬಿಡ್ಡಿಂಗ್‌ನಲ್ಲಿ 63 ಯುರೋಗೆ ಏರಿಕೆ ಆಗಿತ್ತು. ಕಿವೀಸ್ ಜನರು ಮೋಜು ಮಾಡುವುದನ್ನು ನಾವು ಇಷ್ಟಪಡುತ್ತೇವೆ, ಆದರೆ ಅಂತಿಮವಾಗಿ ನಮ್ಮ ಆದ್ಯತೆಯು ನಮ್ಮ ಎಲ್ಲಾ ಸದಸ್ಯರಿಗೆ ಒಳ್ಳೆಯ ಅನುಭವ ಇದೆ ಎಂದು ಖಚಿತಪಡಿಸಿಕೊಳ್ಳುವುದು ಎಂದು ಟ್ರೇಡ್‌ಮೀ ನೀತಿ ಮತ್ತು ಅನುಸರಣೆಯ ವ್ಯವಸ್ಥಾಪಕ ಜೇಮ್ಸ್ ರಯಾನ್ (James Ryan) stuff.co.nz ತಿಳಿಸಿದರು.

click me!