ತನ್ನನ್ನು ಅರೆಸ್ಟ್ ಮಾಡಿದ್ದ ಪೊಲೀಸಪ್ಪನಿಗೇ ಕಿಡ್ನಿ ದಾನ ಮಾಡಿದ ಮಹಿಳೆ!

By Suvarna NewsFirst Published Sep 13, 2020, 3:32 PM IST
Highlights

ತನ್ನನ್ನು ಅನೇಕ ಬಾರಿ ಅರೆಸ್ಟ್ ಮಾಡಿದ್ದ ಪೊಲೀಸ್ ಅಧಿಕಾರಿಗೆ ಕಿಡ್ನಿ ದಾನ ಮಾಡಿದ ಮಹಿಳೆ| ಪೊಲೀಸಪ್ಪನ ಗಳ ಪೋಸ್ಟ್‌ ಕಂಡು ಕಿಡ್ನಿ ದಾನ ಮಾಡಲು ಮುಂದಾದ ಮಹಿಳೆ| ಇಲ್ಲಿದೆ ನೋಡಿ ಸ್ಫೂರ್ತಿದಾಯಕ ಸ್ಟೋರಿ

ಅಲ್ಬಾಮಾ(ಸೆ. 13): ಅಲ್ಬಾಮಾದ ಮಹಿಳೆಯೊಬ್ಬಳು ತನ್ನನ್ನು ಕೆಲವು ವರ್ಷಗಳ ಹಿಂದೆ ಅರೆಸ್ಟ್ ಮಾಡಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ತನ್ನ ಕಿಡ್ನಿ ದಾನ ಮಾಡಿ ಅವರ ಪ್ರಾಣ ಉಳಿಸಿದ್ದಾರೆ. 

ಫಾಕ್ಸ್ ನ್ಯೂಸ್ ವರದಿಯನ್ವಯ ನಶೆಯಲ್ಲಿ ತೇಲಿ ಜೈಲು ಸೇರಿದ್ದ ಮಹಿಳೆ ಜಾಕ್ಲಿನನ್ ಜೇಮ್ಸ್‌ ಫೇಸ್ಬುಕ್‌ನಲ್ಲಿ ಮಾಜಿ ಅಧಿಕಾರಿ ಟೆರೇಲ್ ಪಾಟರ್‌ಗೆ ತುರ್ತಾಗಿ ಕಿಡ್ನಿ ಕಸಿ ಮಾಡಬೇಕಿದೆ ಎಂಬ ಸುದ್ದಿ ಓದಿದ್ದಾರೆ. ಪಾಟರ್‌ ಮಗಳು ತನ್ನ ತಂದೆಗಾಗಿ ಕಿಡ್ನಿ ದಾನ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಗಮನಿಸಿದ ಜೇಮ್ಸ್‌ ಅವರ ಬಳಿ ತೆರಳಿ ತನ್ನ ಕಿಡ್ನಿ ಪೊಲೀಸ್ ಅಧಿಕಾರಿಗೆ ಕಸಿ ಮಾಡುವಂತೆ ಹೇಳಿದ್ದಾರೆ. ಅಚ್ಚರಿ ಎಂದರೆ ಆ ಪೊಲೀಸ್ ಅಧಿಕಾರಿ ಜೇಮ್ಸ್‌ರನ್ನು ಅನೇಕ ಬಾರಿ ಅರೆಸ್ಟ್ ಮಾಡಿದ್ದರು.

40 ವರ್ಷದ ಜೇಮ್ಸ್ ಸದ್ಯ ನಶೆಗೆ ಗುಡ್‌ ಬೈ ಎಂದಿದ್ದಾರೆ. ಆದರೆ ಅನೇಕ ವರ್ಷಗಳ ಹಿಂದೆ ಅವರೊಬ್ಬ ಡ್ರಗ್ ಅಡಿಕ್ಟ್ ಆಗಿದ್ದರು. ಈ ಮಾದಕ ನೆ ಅದೆಷ್ಟಿತ್ತೆಂದರೆ ಈ ಡ್ರಗ್ಸ್‌ ಸಹವಾದಿಂದ ಅವರು ತಮ್ಮ ಕಾರು ಹಾಗೂ ಕೆಲಸವನ್ನೂ ಕಳೆದುಕೊಂಡಿದ್ದರು. ಅವರನ್ನು 2007 ಹಾಗೂ 2012ರ ನಡುವೆ ಅವರನ್ನು ಬರೋಬ್ಬರಿ 16 ಬಾರಿ ಜೈಲಿಗೆ ಕಳುಹಿಸಲಾಗಿತ್ತು. ಅಲಲ್ದೇ ಅವರ ಹೆಸರು ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲೂ ಇತ್ತು. ಈ ವೇಳೆ ಅವರನ್ನು ಅರೆಸ್ಟ್ ಮಾಡಿದ್ದ ಅಧಿಕಾರಿಗಳಲ್ಲಿ ಪಾಟರ್‌ ಕೂಡಾ ಒಬ್ಬರು.

ಒಂದು ರಾತ್ರಿ ಅವರು ಟಿವಿಯಲ್ಲಿ ತಮ್ಮ ಹೆಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿ ನೋಡಿದರು. ಇದಾಧ ಮರುದಿನವೇ ಅವರು ಪೊಲೀಸರಿಗೆ ಶರಣಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು. ಬಳಿಕ ಒಂಭತ್ತು ತಿಂಗಳು ಡ್ರಗ್ಸ್‌ ರಿಹ್ಯಾಬಿಲಿಯೇಷನ್ ಮಾಡಿದರು. ಸದ್ಯ ಅವರು ಡ್ರಗ್ಸ್‌ ದಾಸರಾಗಿರುವ ಮಹಿಳೆಯರನ್ನು ಈ ಚಟದಿಂದ ಹೊರ ಬರಲು ಸಹಾಯ ಮಾಡಿಕೊಂಡಿದ್ದಾರೆ. 

click me!