ಕೊರೋನಾ ವಿರುದ್ಧ ಗೆದ್ದ ಕೆನಡ; ಸತತ 2ನೇ ದಿನ ಸಾವಿನ ಸಂಖ್ಯೆ ಶೂನ್ಯ!

By Suvarna NewsFirst Published Sep 12, 2020, 8:40 PM IST
Highlights

ಕೊರೋನಾ ವೈರಸ್ ವಿರುದ್ಧ ಪ್ರತಿ ದೇಶ ಹೋರಾಡುತ್ತಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಕೊರೋನಾ  ಹರಡುವಿಕೆ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕೆಲ ದೇಶಗಳು ಮಾತ್ರ ಪ್ರಗತಿ ಕಂಡಿದೆ. ಇದೀಗ ಕೆನಡ ಕೊರೋನಾ ವಿರುದ್ಧದ ಸಮರದಲ್ಲಿ ಮಹತ್ವದ ಗೆಲುವು ಸಾಧಿಸಿದೆ. 

ಕೆನಡ(ಸೆ.12):  ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್‌ಗೆ ನಲುಗಿದೆ. ಕೊರೋನಾ ತಡೆಯಲು ಹಲವು ಕ್ರಮಗಳನ್ನೂ ಕೈಗೊಂಡರೂ ಸಂಪೂರ್ಣ ಯಶಸ್ಸು ಸಿಗುತ್ತಿಲ್ಲ. ಆದರೆ ಕೆನಡಾ ಕೊರೋನಾ ವಿರುದ್ಧ ಹೋರಾಟದಲ್ಲಿ ಭಾಗಶಃ ಯಶಸ್ಸು ಸಾಧಿಸಿದೆ. ಕಳೆದ 24 ಗಂಟೆಯಲ್ಲಿ ಕೆನಡಾದಲ್ಲಿ ಕೊರೋನಾ ಸಾವಿನ ಸಂಖ್ಯೆ ಶೂನ್ಯವಾಗಿದೆ. 

ದೇಶದಲ್ಲಿ ಕೊರೋನಾ ಸೋಂಕು ಈಗ ಆರಂಭಿಕ ಹಂತದಲ್ಲಿದೆ: ಸಮೀಕ್ಷೆಯಲ್ಲಿ ಅಚ್ಚರಿಯ ವಿವರ!

ಸೆಪ್ಟೆಂಬರ್ 10ಕ್ಕೆ ಕೆನಡಾದಲ್ಲಿ ಕೊರೋನಾ ವೈರಸ್‌ ಸೋಂಕಿಗೆ ಬಲಿಯಾದವರ ಸಂಖ್ಯೆ 9,163. ಇನ್ನು ಸೋಂಕಿತರ ಸಂಖ್ಯೆ  135,626. ಸೆಪ್ಟೆಂಬರ್ 11 ಮತ್ತು 12ರಂದು ಕೆನಡಾದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಶೂನ್ಯವಾಗಿದೆ. ಮಾರ್ಚ್ 15 ರಂದ ಕೆನಡಾದಲ್ಲಿ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿತ್ತು. ಬಳಿಕ ಸಾವಿನ ಸಂಖ್ಯೆ ಏರುತ್ತಲೇ ಹೋಯಿತು. ಆದರೆ ಮಾರ್ಚ್ 15 ರಿಂದ ಇಲ್ಲೀವರೆಗೆ ಸೋಂಕಿತರನ್ನು ಬಲಿಪಡೆದ ಕೊರೋನಾ ಇದೀಗ ಸಂಪೂರ್ಣ ತಣ್ಣಗಾಗಿದೆ.

ಮಕ್ಕಳ ಶಾಲಾ-ಕಾಲೇಜು ಶುಲ್ಕ ಮನ್ನಾ ಕೂಗು: ಮೋದಿ ಸರ್ಕಾರ ಪೋಷಕರಲ್ಲಿ ತರಿಸುತ್ತಾ ನಗು..!.

ಕೊರೋನಾ ವೈರಸ್ ನಿಯಂತ್ರಣಕ್ಕೆ ಕೆನಡಾದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಲಾಕ್‌ಡೌನ್ ಹೇರಲಾಗಿತ್ತು. ಆದರೆ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದ ಬಳಿಕ ಲಾಕ್‌ಡೌನ್ ಸಡಿಲಗೊಳಿಸಲಾಗಿತ್ತು. ಶಾಲಾ ಕಾಲೇಜುಗಳು ಆರಂಭಗೊಂಡಿದೆ. ಇದೀಗ ಸಾವಿನ ಸಂಖ್ಯೆಗೆ ಬ್ರೇಕ್ ಬಿದ್ದಿದೆ. ಶೀಘ್ರದಲ್ಲೇ ಸೋಂಕಿತರ ಸಂಖ್ಯೆ ಶೂನ್ಯವಾಗಲಿದೆ ಎಂದು ಕೆನಡಾ ವೈದ್ಯಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!