
ಫಿಲಿಪೈನ್ಸ್ (ಜ.13) ದೇವರಿಗೆ ಪೂಜೆ ಮಾಡಿ ದಿನ ಆರಂಭಿಸುವುದು ಬಹುತೇಕರ ರೂಢಿಸಿಕೊಂಡಿರುತ್ತಾರೆ. ಇದು ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಇದೇ ಪದ್ಧತಿ. ವಿಶೇಷ ಅಂದರೆ ಫಿಲಿಪೈನ್ಸ್ ಮಹಿಳೆಯೊಬ್ಬರು ಬುದ್ಧನ ಭಕ್ತೆ. ಬದ್ಧ ತನ್ನ ಜೀವನದಲ್ಲಿ ಯಶಸ್ಸು, ಶಾಂತಿ, ನೆಮ್ಮದಿ, ಸಂತೋಷ ಕರುಣಿಸುತ್ತಾನೆ ಅನ್ನೋ ನಂಬಿಕೆಯಿಂದ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಟ್ಟು ಪೂಜೆ ಆರಂಭಿಸಿದ್ದಾಳೆ. ಬುದ್ಧನ ತತ್ವಗಳಿಂದ ಪ್ರಭಾವಿತಳಾದ ಮಹಿಳೆ, ಪ್ರತಿ ದಿನ ಬುದ್ಧನಿಗೆ ಪೂಜೆ ಮಾಡಿ, ಪ್ರತಿಮೆ ಮುಂದೆ ಧ್ಯಾನ ಮಾಡುತ್ತಿದ್ದರು. ಬರೋಬ್ಬರಿ ನಾಲ್ಕು ವರ್ಷಗಳಿಂದ ಬುದ್ಧನಿಗೆ ಪೂಜೆ ಸಲ್ಲಿಸಿ ಪ್ರತಿ ದಿನದ ಕಾರ್ಯ ಆರಂಭಿಸುತ್ತಿದ್ದರು. ಆದರೆ ನಾಲ್ಕು ವರ್ಷದ ಬಳಿಕ ತಾನು ಪೂಜಿಸುತ್ತಿದ್ದ ಪ್ರತಿಮೆ ಬುದ್ಧನದ್ದಲ್ಲ ಅನ್ನೋ ಸತ್ಯ ಬಯಲಾದ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಫಿಲಿಪೈನ್ಸ್‌ನ ಮಹಿಳೆಯೊಬ್ಬಳ ಕಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವರ್ಷಗಳಿಂದ ತಾನು ಭಕ್ತಿಯಿಂದ ಪೂಜಿಸುತ್ತಿದ್ದ ಮೂರ್ತಿ ಬುದ್ಧನದ್ದಲ್ಲ. ಆಕೆ ಭಕ್ತಿಯಿಂದ ಪೂಜಿಸಿದ್ದ ಮೂರ್ತಿ ಬುದ್ಧನಲ್ಲ. ಬದಲಿಗೆ ಪ್ರಸಿದ್ಧ ಕಾರ್ಟೂನ್ ಪಾತ್ರದ್ದು ಎಂದು ತಿಳಿದಾಗ ಆಕೆ ಮತ್ತು ಆಕೆಯ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ, ಫಿಲಿಪೈನ್ಸ್‌ನ ಈ ಮಹಿಳೆ ಸ್ಥಳೀಯ ಅಂಗಡಿಯಿಂದ ಹಸಿರು ಬಣ್ಣದ ಮೂರ್ತಿಯನ್ನು ಖರೀದಿಸಿದ್ದಳು. ಅದರ ದುಂಡಗಿನ ಆಕಾರ ಮತ್ತು ಮುಖದ ಮೇಲಿನ ಶಾಂತ ಭಾವವನ್ನು ನೋಡಿ, ಅದು ಬುದ್ಧನ ಪ್ರತಿಮೆ ಎಂದು ಆಕೆ ದೃಢವಾಗಿ ನಂಬಿದ್ದಳು. ಮನೆಗೆ ಬಂದ ನಂತರ, ತನ್ನ ಪೂಜಾ ಕೋಣೆಯಲ್ಲಿ ಈ ಮೂರ್ತಿಯನ್ನು ಸ್ಥಾಪಿಸಿದಳು. ಕಳೆದ ನಾಲ್ಕು ವರ್ಷಗಳಿಂದ ಪ್ರತಿದಿನ ಊದು ಕಡ್ಡಿ ಹಚ್ಚಿ, ಪ್ರಾರ್ಥನೆ ಸಲ್ಲಿಸುತ್ತಾ ಭಕ್ತಿಯಿಂದ ಈ ರೂಪವನ್ನು ಪೂಜಿಸುತ್ತಿದ್ದಳು. ಕುಟುಂಬಕ್ಕೆ ಶಾಂತಿ ಮತ್ತು ಸಮೃದ್ಧಿ ಸಿಗಲೆಂದು ಆಕೆಯ ಪ್ರಾರ್ಥನೆಗಳೆಲ್ಲವೂ ಇದ್ದವು. ಇತ್ತೀಚೆಗೆ ತಾನು ಪೂಜಿಸುತ್ತಿರುವುದು ಬುದ್ಧನನ್ನಲ್ಲ ಅನ್ನೋ ಸತ್ಯ ಗೊತ್ತಾಗಿದೆ.
ಆ ಹಸಿರು ಬಣ್ಣದ ಮೂರ್ತಿಯು ವಿಶ್ವಪ್ರಸಿದ್ಧ ಆನಿಮೇಷನ್ ಚಿತ್ರ 'ಶ್ರೆಕ್'ನ ನಾಯಕ ಪಾತ್ರದ್ದಾಗಿತ್ತು. 3D ಪ್ರಿಂಟರ್ ಬಳಸಿ ತಯಾರಿಸಿದ ಶ್ರೆಕ್‌ನ ಮಾದರಿಯನ್ನು ಬುದ್ಧನೆಂದು ತಪ್ಪಾಗಿ ಭಾವಿಸಿ ಆಕೆ ಮನೆಯಲ್ಲಿಟ್ಟು ಪೂಜಿಸುತ್ತಿದ್ದಳು. ತಾನು ಪೂಜಿಸುತ್ತಿರುವುದು ಬುದ್ಧನಲ್ಲ ಎಂಬ ಸತ್ಯ ಆಕೆಗೆ ಅನಿರೀಕ್ಷಿತವಾಗಿ ತಿಳಿಯಿತು. ಒಂದು ದಿನ ಆಕೆಯ ಮನೆಗೆ ಬಂದ ಸ್ನೇಹಿತೆಯೊಬ್ಬಳು ಆ 'ಬುದ್ಧನ ಪ್ರತಿಮೆ'ಯನ್ನು ಗಮನಿಸಿದಳು. ಚಲನಚಿತ್ರಗಳು ಮತ್ತು ಕಾರ್ಟೂನ್‌ಗಳನ್ನು ನೋಡಿ ಪರಿಚಯವಿದ್ದ ಆ ಸ್ನೇಹಿತೆಗೆ, ಆ ರೂಪವನ್ನು ನೋಡಿದ ತಕ್ಷಣ ಅದು ಪ್ರಸಿದ್ಧ ಕಾರ್ಟೂನ್ ಪಾತ್ರವಾದ ಶ್ರೆಕ್ ಎಂದು ಗೊತ್ತಾಯಿತು. ಆಕೆ ತಕ್ಷಣವೇ ಈ ವಿಷಯವನ್ನು ತನ್ನ ಸ್ನೇಹಿತೆಗೆ ಹೇಳಿದ್ದಾಳೆ.
ತಾನು ಕಳೆದ ನಾಲ್ಕು ವರ್ಷಗಳಿಂದ ಪೂಜಿಸುತ್ತಿದ್ದ ಮೂರ್ತಿ ಬುದ್ಧನಲ್ಲ, ಶ್ರೇಕ್ ಕಾರ್ಟೂನ್ ಕ್ಯಾರೆಕ್ಟರ್ ಅನ್ನೋ ಮಾಹಿತಿ ಗೊತ್ತಾದಾಗ ಆಘಾತದ ಜೊತೆ ನಕ್ಕು ನೀರಾಗಿದ್ದಾಳೆ. ಇತ್ತ ಮನೆಯವರು ಇಷ್ಟು ದಿನ ಮಾಡಿದ ಪೂಜೆ ವ್ಯರ್ಥವಾಯಿತಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ.
ಸತ್ಯ ತಿಳಿದಾಗ ಆ ಮಹಿಳೆ ಮೊದಲು ಒಂದು ಕ್ಷಣ ಸ್ತಬ್ಧಳಾದಳು. ಆದರೆ, ನಂತರ ತನ್ನ ಮುಗ್ಧ ತಪ್ಪನ್ನು ನೆನೆದು ನಕ್ಕಳು. ಅವಮಾನ ಪಡುವ ಬದಲು, ಈ ವಿಷಯವನ್ನು ತಮಾಷೆಯಾಗಿ ತೆಗೆದುಕೊಳ್ಳಲು ನಿರ್ಧರಿಸಿದಳು. ತಾನು ನಾಲ್ಕು ವರ್ಷಗಳಿಂದ ಪ್ರಾರ್ಥಿಸುತ್ತಿದ್ದುದು ಒಂದು ಕಾರ್ಟೂನ್ ಪಾತ್ರಕ್ಕೆ ಎಂದು ತಿಳಿದರೂ, ಆ ಮೂರ್ತಿಯನ್ನು ಬಿಟ್ಟುಕೊಡಲು ಆಕೆ ಸಿದ್ಧಳಿಲ್ಲ. ವರದಿಗಳ ಪ್ರಕಾರ, ಆ ಶ್ರೆಕ್ ಮೂರ್ತಿಯನ್ನೇ ಪೂಜಿಸುವುದನ್ನು ಮುಂದುವರಿಸಲು ಆಕೆ ನಿರ್ಧರಿಸಿದ್ದಾಳೆ. ರೂಪ ಯಾವುದೇ ಇರಲಿ, ತನ್ನ ಭಕ್ತಿ ಪ್ರಾಮಾಣಿಕವಾಗಿದೆ ಎಂಬ ದೃಢ ನಂಬಿಕೆಯಲ್ಲಿ ಆಕೆ ಇದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ