
ವಾಷಿಂಗ್ಟನ್(ಅ.14): ಅಮೆರಿಕಾ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಉಳಿದಿಲ್ಲ. ಅಧ್ಯಕ್ಷೀಯ ಅಭ್ಯರ್ಥಿಗಳು ತಮ್ಮ ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ. ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾಗಿ ಮತ್ತೆ ಪ್ರಚಾರಕ್ಕೆ ಧುಮುಕಿರುವ ಡೊನಾಲ್ಡ್ ಟ್ರಂಪ್, ಮಹಿಳಾ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಮಂಗಳವಾರ ಪೆನ್ಸಿಲ್ವೇನಿಯಾದ ಜಾನ್ಸ್‌ಟೌನ್‌ನಲ್ಲಿ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್, ನೀವು ನನ್ನನ್ನು ಇಷ್ಟಪಡುತ್ತೀರೋ ಇಲ್ವೋ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರು ನನ್ನನ್ನ ಇಷ್ಟಪಡುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ನಿಮ್ಮ ನೆರೆಹೊರೆಯನ್ನು ಹಾಳುಮಾಡುವ, ಅಪರಾಧ ಪ್ರಕರಣಗಳಿಗೆ ಕಾರಣವಾಗುವ ಹಿಂದಿನ ಸರ್ಕಾರದ ಯೋಜನೆಗಳನ್ನು ನಾನು ಕೈಬಿಟ್ಟಿದ್ದೇನೆ. ಆ ಮೂಲಕ ನಿಮ್ಮನ್ನು ಸುರಕ್ಷಿತವಾಗಿಟ್ಟಿದ್ದೇನೆ. ಹಾಗಾಗಿ ನೀವು ನನ್ನನ್ನ ಹೆಚ್ಚು ಇಷ್ಟಪಡಬೇಕು ಎಂದು ಟ್ರಂಪ್ ಹೇಳಿದ್ರು.
ಹೌದು, ಟ್ರಂಪ್ ಬೊಟ್ಟು ಮಾಡಿರುವುದು ಬರಾಕ್ ಒಬಾಮಾ ಜಾರಿಗೊಳಿಸಿದ್ದ ಯೋಜನೆ ಬಗ್ಗೆ. ಜನಾಂಗೀಯ ಪಕ್ಷಪಾತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸಬ್‌ಅರ್ಬನ್ ಪ್ರದೇಶಗಳಲ್ಲಿ ಕಡಿಮೆ ಆದಾಯವುಳ್ಳವರಿಗೆ ಮನೆ ನಿರ್ಮಿಸುವ ಯೋಜನೆಯನ್ನು ಒಬಾಮಾ ಆರಂಭಿಸಿದ್ರು. ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅದಕ್ಕೆ ಬ್ರೇಕ್ ಹಾಕಿದ್ದರು.
ನವೆಂಬರ್ ಮೂರಕ್ಕೆ ಅಮೆರಿಕಾದಲ್ಲಿ ಚುನಾವಣೆ ನಡೆಯಲಿದೆ. ರಿಪಬ್ಲಿಕ್ ಪಕ್ಷದಿಂದ ಪುನಾರಾಯ್ಕೆ ಬಯಸಿ ಟ್ರಂಪ್ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಜೋ ಬಿಡೆನ್ ಅವರ ಎದುರಾಳಿಯಾಗಿದ್ದಾರೆ.
ಇದು ಇಶ್ತಿಯಾಕ್ ಮಾಡಿದ್ದು. ಸ್ವಲ್ಪ ಡೆವಲಪ್ ಮಾಡಿ ವರ್ಲ್ಡ್ ನ್ಯೂಸ್ ಗೆ ಪೋಸ್ಟ್ ಮಾಡು. ಅಷ್ಟು ಟೈಮ್ ವೈಸ್ಟ್ ಮಾಡಿದ್ದಕ್ಕೆ ಸ್ವಲ್ಪನಾದರೂ ನಂಬರ್ಸ್ ಬರಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ