
ಮುಂಬೈ (ಏ.13) ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸಿ ಶಾಂತಿ ಮಾತುಕತೆಗೆ ನಡೆಸಿದ ಪಾಕಿಸ್ತಾನ ಪ್ರಯತ್ನ ವಿಫಲಗೊಂಡಿದೆ. ಅಮೆರಿಕ ಹಾಗೂ ಇರಾನ್ ಇಬ್ಬರನ್ನು ಪಾಕಿಸ್ತಾನಕ್ಕೆ ಕರೆಯಿಸಿ ಸಂಧಾನ ಮಾತುಕತೆಗೆ ವೇದಿಕೆ ಸಿದ್ಧಪಡಿಸಿತ್ತು. ಅಮೆರಿಕ ಫೈಟರ್ ಜೆಟ್ ಮೂಲಕ ಅತಿಥಿಗಳಿಗೆ ಭಾರಿ ಭದ್ರತೆ ನೀಡಲಾಗಿತ್ತು. ಅಮರಿಕ ಹಾಗೂ ಇರಾನ್ ಆತಿಥಿಗಳಿಗೆ ಸ್ಟಾರ್ ಹೊಟೆಲ್‌ನಲ್ಲಿ ವಾಸ್ತವ್ಯ, ಮಾತುಕತೆಗೆ ವೇದಿಕೆ ಒದಗಿಸಿದ ಪಾಕಿಸ್ತಾನ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಮಾತುಕತೆ ಸಂಪೂರ್ಣ ವಿಫಲಗೊಂಡಿದೆ. ಇತ್ತ ಇರಾನ್ ಹಾಗೂ ಅಮೆರಿಕ ಅತಿಥಿಗಳಿಗೆ ಖರ್ಚು ಮಾಡಿದ ವೆಚ್ಚ ಯಾರು ಭರಿಸುತ್ತಾರೆ ಅನ್ನೋ ಪ್ರಶ್ನೆಗಳು ಪಾಕಿಸ್ತಾನದಲ್ಲೇ ಹರಿದಾಡುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಈ ವಿಫಲ ಪ್ರಯತ್ನ ಬೇಕಿತ್ತಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಅತಿಥಿಗಳ ಹೊಟೆಲ್ ಬಿಲ್ ಯಾರು ಭರಿಸುತ್ತಾರೆ ಅನ್ನೋ ಪ್ರಶ್ನೆಗೆ ಬಾಲಿವುಡ್ ನಟ ಪರೇಶ್ ರಾವಲ್ ಅವರ ಪ್ಯಾರಡಿ ಎಕ್ಸ್ ಖಾತೆಯಿಂದ ನೀಡಿದ ಉತ್ತರ ವೈರಲ್ ಆಗಿದೆ.
ಅಮೆರಿಕ ಹಾಗೂ ಇರಾನ್ ಪ್ರತಿನಿಧಿಗಳು ಪಾಕಿಸ್ತಾನಕ್ಕೆ ಆಗಮಿಸಿದಾಗ ಉಳಿದುಕೊಳ್ಳಲು ಹೊಟೆಲ್ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗೆ ಭಾರಿ ಖರ್ಚು ಮಾಡಲಾಗಿತ್ತು. ಆತಿಥಿಗಳು ಉಳಿದುಕೊಂಡ ಹೊಟೆಲ್ ಬಿಲ್ ಯಾರು ಕ್ಲೀಯರ್ ಮಾಡುತ್ತಾರೆ ಅನ್ನೋ ಪ್ರಶ್ನೆಯನ್ನು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಕೆಜಿಎಸ್ ದಿಲ್ಲೋನ್ ಪ್ರಶ್ನಿಸಿದ್ದರು. ಪಾಕಿಸ್ತಾನದ ಸದ್ಯದ ಅತ್ಯಂತ ತಲೆನೋವಿನ ಸಮಸ್ಯೆ ಎಂದರೆ ಹೊಟೆಲ್ ಬಿಲ್ ಯಾರು ಕ್ಲಿಯರ್ ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಕೆಜಿಎಸ್ ದಿಲ್ಲೋನ್ ಪಾಕಿಸ್ತಾನವನ್ನು ವ್ಯಂಗ್ಯವಾಡಿ ಕುಟುಕಿದ್ದರು. ಇದರ ಬೆನ್ನಲ್ಲೇ ಬಾಲಿವುಡ್ ನಟ ಪರೇಶ್ ರಾವಲ್ ಅವರ ಹೆಸರಿನಲ್ಲಿರುವ ಪ್ಯಾರಡಿ ಎಕ್ಸ್ ಖಾತೆ ಈ ಪೋಸ್ಟ್ ಮಾಡಿದೆ. ಈ ಬಿಲ್ ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಕ್ಲಿಯರ್ ಮಾಡಲಿದೆ ಎಂದಿದ್ದಾರೆ. ರಾವಲ್ ಒಂದೇ ಪದದಲ್ಲಿ ಐಎಂಎಫ್ ಎಂದು ಉತ್ತರಿಸಿದ್ದಾರೆ. ಪಾಕಿಸ್ತಾನದ ಸದ್ಯದ ಪರಿಸ್ಥಿತಿಯ ಸ್ಪಷ್ಟ ಉತ್ತರವನ್ನು ಪರೇಶ್ ರಾವಲ್ ನೀಡಿದ್ದಾರೆ.
ಪಾಕಿಸ್ತಾನದ 5 ಸ್ಟಾರ್ ಸೆರೆನಾ ಹೊಟೆಲ್‌ನಲ್ಲಿ ವಾಶಿಂಗ್ಟನ್ ಹಾಗೂ ಟೆಹ್ರಾನ್ ಪ್ರತಿನಿಧಿಗಳ ಮಾತುಕತೆ ನಡೆದಿತ್ತು. ಇದೇ ಹೊಟೆಲ್‌ನಲ್ಲಿ ಪಾಕಿಸ್ತಾನದ ಆತಿಥ್ಯ ಸ್ವೀಕರಿಸಿದ್ದರು. ಪಾಕಿಸ್ತಾನ ರಾಜಧಾನಿಯಲ್ಲಿನ ಈ ಆತಿಥ್ಯ ಇದೀಗ ಪಾಕಿಸ್ತಾನಕ್ಕೆ ಹೊರೆಯಾಗಿದೆ. ಒಂದೆಡೆ ಮಾತುಕತೆ ವಿಫಲವಾಗಿರುವ ಕಾರಣ ಪಾಕಿಸ್ತಾನ ಈ ಪ್ರಯತ್ನದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ