ಅಮೆರಿಕ ಸಂಸತ್ತಲ್ಲಿ ನಾಳೆ ಟ್ರಂಪ್‌ ವಜಾಕ್ಕೆ ಮತದಾನ!

Published : Jan 13, 2021, 08:26 AM IST
ಅಮೆರಿಕ ಸಂಸತ್ತಲ್ಲಿ ನಾಳೆ ಟ್ರಂಪ್‌ ವಜಾಕ್ಕೆ ಮತದಾನ!

ಸಾರಾಂಶ

ಅಮೆರಿಕ ಸಂಸತ್ತಲ್ಲಿ ನಾಳೆ ಟ್ರಂಪ್‌ ವಜಾಕ್ಕೆ ಮತದಾನ| ಡೆಮಾಕ್ರಟಿಕ್‌ ಸಂಸದರ ಬಹುಮತವಿರುವ ಕೆಳಮನೆ| ಅಧಿಕಾರದಿಂದ ಕೆಳಗಿಳಿವ ಮುನ್ನ ತೀವ್ರ ಮುಖಭಂಗ

ವಾಷಿಂಗ್ಟನ್(ಜ.13): ಇನ್ನು ಏಳು ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಅದಕ್ಕೂ ಮುನ್ನವೇ ಪಟ್ಟದಿಂದ ವಜಾಗೊಳಿಸುವ ಪ್ರಕ್ರಿಯೆಯೊಂದು ಅಮೆರಿಕದಲ್ಲಿ ಆರಂಭವಾಗಿದೆ. ಅಮೆರಿಕದ ಸಂಸತ್‌ ಭವನದಲ್ಲಿ ಹಿಂಸಾಚಾರ ನಡೆಸುವುದಕ್ಕೆ ಕುಮ್ಮಕ್ಕು ನೀಡಿದ ಸಂಬಂಧ ಟ್ರಂಪ್‌ ವಿರುದ್ಧ ಅಮೆರಿಕ ಸಂಸತ್ತಿನ ಕೆಳಮನೆಯಾಗಿರುವ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌್ಸನಲ್ಲಿ ವಾಗ್ದಂಡನೆ (ವಜಾ) ಗೊತ್ತುವಳಿ ಮಂಡನೆಯಾಗಿದ್ದು, ಅದರ ಮತದಾನ ಬುಧವಾರ ನಡೆಯಲಿದೆ.

435 ಸದಸ್ಯ ಬಲದ ಅಮೆರಿಕ ಸಂಸತ್ತಿನ ಕೆಳಮನೆಯಲ್ಲಿ ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತವಿದೆ. ಹೀಗಾಗಿ ಸರಳ ಬಹುಮತದೊಂದಿಗೆ ಟ್ರಂಪ್‌ ವಿರುದ್ಧದ ವಾಗ್ದಂಡನೆ ನಿರ್ಣಯ ಅಂಗೀಕರಿಸುವ ವಿಶ್ವಾಸದಲ್ಲಿ ಆ ಪಕ್ಷದ ಸಂಸದರು ಇದ್ದಾರೆ. ಇದಾದ ಬಳಿಕ ನಿರ್ಣಯ ಅಮೆರಿಕ ಸಂಸತ್ತಿನ ಮೇಲ್ಮನೆಯಾಗಿರುವ ಸೆನೆಟ್‌ನಲ್ಲಿ ಮಂಡನೆಯಾಗಿದೆ. ಅಲ್ಲೂ ಅಂಗೀಕಾರವಾದರೆ ಟ್ರಂಪ್‌ ಅವರು ಅಧಿಕಾರಾವಧಿ ಮುಗಿವ ಮುನ್ನವೇ ಕೆಳಗಿಳಿದು ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ.

ಆದರೆ ಮೇಲ್ಮನೆಯಲ್ಲಿ ಟ್ರಂಪ್‌ ಅವರ ಪಕ್ಷ ರಿಪಬ್ಲಿಕನ್‌ ಪಾರ್ಟಿಗೆ ಬಹುಮತವಿದೆ. ಅದೂ ಅಲ್ಲದೆ ವಾಗ್ದಂಡನೆ ನಿರ್ಣಯ ಮೂರನೇ ಎರಡರಷ್ಟುಬಹುಮತ ಪಡೆಯಬೇಕಾಗುತ್ತದೆ. ಜ.20ರಂದು ಹೊಸ ಅಧ್ಯಕ್ಷರ ಪದಗ್ರಹಣ ನಡೆಯಲಿದ್ದು, ಅದಕ್ಕೂ ಮುನ್ನ ಸೆನೆಟ್‌ ಈ ನಿರ್ಣಯ ಅಂಗೀಕರಿಸುವುದಿಲ್ಲ ಎಂದು ಆ ಸದನದ ನಾಯಕ ಮಿಚ್‌ ಮೆಕ್‌ಕಾನೆಲ್‌ ಅವರು ತಿಳಿಸಿದ್ದಾರೆ. ಹೀಗಾಗಿ ಟ್ರಂಪ್‌ ಅವರು ಅಧಿಕಾರಾವಧಿಗೆ ಮುನ್ನವೇ ಕೆಳಗಿಳಿಯುತ್ತಾರಾ? ಅಥವಾ ಪಾರಾಗುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ