ಯುವಕರಲ್ಲಿ ಹೆಚ್ಚಾಗುತ್ತಿದೆ ಕೊರೋನಾ; ಆಘಾತಕಾರಿ ಅಂಕಿ ಅಂಶ ಬಿಚ್ಚಿಟ್ಟ WHO!

Published : Aug 18, 2020, 06:44 PM IST
ಯುವಕರಲ್ಲಿ ಹೆಚ್ಚಾಗುತ್ತಿದೆ ಕೊರೋನಾ; ಆಘಾತಕಾರಿ ಅಂಕಿ ಅಂಶ ಬಿಚ್ಚಿಟ್ಟ WHO!

ಸಾರಾಂಶ

ಕೊರೋನಾ ವೈರಸ್ ಮಹಾಮಾರಿ ವಕ್ಕರಿಸಿದ ಬಳಿಕ ಆಯಾ ದೇಶದ ಆರೋಗ್ಯ ಸಚಿವಾಲಯ ಅಂಕಿ ಅಂಶ ಬಿಡುಗಡೆ ಮಾಡುತ್ತಿದೆ. ಇದರೊಂದಿಗೆ ಹೊಸ ಸಂಶೋಧನೆ, ವೈರಸ್ ತೀವ್ರತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೊಸ ಹೊಸ ವರದಿ ಬಿಡುಗಡೆ ಮಾಡುತ್ತಿದೆ. ಇದೀಗ ಯುವಕರಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತೀವ್ ಕಳವಳ ವ್ಯಕ್ತಪಡಿಸಿದೆ.

ಜಿನೆವಾ(ಆ.18): ಕೊರೋನಾ ವೈರಸ್ ಹರಡುವಿಕೆ ಜನರಲ್ಲಿ ಮತ್ತಷ್ಟು ಆತಂಕ ತರುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ(WHO) ಹೊಸ ಅಂಕಿ ಅಂಶ ತೆರೆದಿಟ್ಟಿದೆ. ಇದು ಮತ್ತಷ್ಟು ಆತಂಕ ತರುವಂತಿದೆ. WHO ಪ್ರಕಾರಣ ಸದ್ಯ ಕೊರೋನಾ 20, 30, 40ರ ಆಸುಪಾಸಿನ ಯುವಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ.

ಕರ್ನಾಟಕದ ಬಿಜೆಪಿ ಶಾಸಕಿಗೆ ಕೊರೋನಾ ದೃಢ.

ಈ ಯುವಕರಿಗೆ ಕೊರೋನಾ ವೈರಸ್ ತಗುಲಿರುವ ಕುರಿತು ಅವರಿಗೆ ಅರಿವೇ ಇರುವುದಿಲ್ಲ. 20,30,40ರ ಆಸುಪಾಸಿನಲ್ಲಿರುವವರಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇಷ್ಟೇ ಅಲ್ಲ, ಈ ಗುಂಪು ಕೆಲಸ ಕಾರ್ಯಗಳು ಸೇರಿದಂತೆ ಹಲವು ಕಾರಣಗಳಿಂದ ಅನಿವಾರ್ಯವಾಗಿ ಮನೆಯಿಂದ ಹೊರಬರಬೇಕಿದೆ. ಇದರಿಂದ ಈ ವಯಸ್ಸಿನವರಲ್ಲಿ ಹೆಚ್ಚು ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿದೆ.

ಒತ್ತಡಕ್ಕೆ ಮಣಿದ ಬಿಎಸ್‌ವೈ, ಗಣೇಶ್ ಹಬ್ಬ ಆಚರಣೆಗೆ ರೂಲ್ಸ್ ಚೇಂಜ್...!

ಈ ವಯಸ್ಸಿನ ಯುವಕರಲ್ಲಿ ಕೊರೋನಾ ವೈರಸ್ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಆದರೆ ಇದೇ ಗುಂಪು ಹಿರಿಯರು, ಮಕ್ಕಳ ಸಂಪರ್ಕಕ್ಕೆ ಬರುತ್ತಿರುವ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸುತ್ತಿದೆ ಎಂದು WHO ಹೇಳಿದೆ. ಈ ಗುಂಪು ಇತರರಲ್ಲಿ ಕೊರೋನಾ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಕೊರೋನಾ ಸೋಂಕಿನಿಂದ ತೀವ್ರ ಸಮಸ್ಯೆಯಾಗಿ ಆಸ್ಪತ್ರೆ ದಾಖಲಾದರೂ, ಕೊರೋನಾ ವಕ್ಕರಿಸಿದ ರೀತಿ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ ಎಂದು WHO ಹೇಳಿದೆ.

ಕೊರೋನಾ ವೈರಸ್ ಅಬ್ಬರಕ್ಕೆ ವಿಶ್ವದಲ್ಲಿ 7,70,000 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 22 ಮಿಲಿಯನ್ ಮಂದಿಯಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ.  ಕೊರೋನಾ ವೈರಸ್ ಲಸಿಕೆ ಕುರಿತು  ವಿಶ್ವ ಆರೋಗ್ಯ ಸಂಸ್ಥೆ ತೀವ್ರ ನಿಘಾ ವಹಿಸಿದೆ. ಸಂಶೋಧನೆ, ಅಧ್ಯಯನ ವರದಿಗಳ ಮಹತ್ವ ಮಾಹಿತಿಗಳನ್ನು ಲಸಿಕೆ ಸಂಶೋಧಕರಿಗೆ ನೀಡುತ್ತಿದೆ ಎಂದು WHO ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ