Asianet Suvarna News

ಬಾಹ್ಯಾಕಾಶಕ್ಕೆ ಹೋಗ್ತಾರಾ ಜಗತ್ತಿನ ಮೊದಲ ವಿಶೇಷ ಚೇತನ ಗಗನಯಾತ್ರಿ?

ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು, ವಿಶೇಷ ಚೇತನ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಕೂಡ ಆಹ್ವಾನಿಸಿದೆ. ಜೊತೆಗೆ ಬಹಳಷ್ಟು ಮಹಿಳಾ ಗಗನಯಾತ್ರಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ, ಖಾಸಗಿ ಸಂಸ್ಥೆಗಳಿಂದಲೂ ಇತ್ತೀಚಿನ ವರ್ಷಗಳಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಏಜೆನ್ಸಿಯ ಈ ನಡೆ ಕುತೂಹಲ ಮೂಡಿಸಿದೆ.

European Space Agency to hire first specially abled astronaut
Author
Bengaluru, First Published Jun 28, 2021, 2:04 PM IST
  • Facebook
  • Twitter
  • Whatsapp

ಬಾಹ್ಯಾಕಾಶ ಎಂಬುದು ಕುತೂಹಲದ ಆಗರ. ಬಾಹ್ಯಾಕಾಶಕ್ಕೆ ಹೋಗಲು ಯಾರಿಗೆ ಇಷ್ಟವಿಲ್ಲ ಹೇಳಿ? ಈಗಾಗಲೇ ಹಲವು ಗಗನಯಾತ್ರಿಗಳು ಸ್ಪೇಸ್‌ವಾಕ್ ಮಾಡಿದ್ದಾರೆ. ಆದರೆ, ಯುರೋಪಿಯನ್ ಸ್ಪೇಸ್ ಏಜೆನ್ಸಿಯೊಂದು ಹೊಸ ಸಾಹಸಕ್ಕೆ ಮುಂದಾಗಿದೆ. ಎಲ್ಲವು ಅಂದುಕೊಂಡಂತೆಯಾದರೆ, ಜಗತ್ತಿನ ಮೂದಲ ವಿಶೇಷ ಚೇತನ ಗಗನಯಾತ್ರಿ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. 

ಯುರೋಪಿಯನ್ ಸ್ಪೇಸ್ ಏಜೆನ್ಸಿ ಮುಖ್ಯಸ್ಥ ಜೊಸೆಫ್ ಆಸ್‌ಬಾಚೆರ್ ಅವರು, ಜಗತ್ತಿನ ಮೊದಲ ಅಂಗವಿಕಲ ಗಗನಯಾತ್ರಿಯನ್ನು ನೇಮಕ ಮಾಡಿಕೊಂಡು, ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ನೂರಾರು ದಿವ್ಯಾಂಗ ಗಗನಯಾತ್ರಿಗಳು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

ಈ ಯುರೋಪಿಯನ್ ಸ್ಪೇಸ್ ಏಜೆನ್ಸಿ ಇಬ್ಬರು ಮಹಿಳಾ ಗಗನಯಾತ್ರಿಗಳನ್ನು ಈವರೆಗೆ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಈ ಏಜೆನ್ಸಿ ಮೂಲಕ ಬಾಹ್ಯಾಕಾಶಕ್ಕೆ ಕ್ಲೌಡೀ ಹೈಗ್ನೇರ್ ಮತ್ತು ಸಮಂತಾ ಕ್ರಿಸ್ಟೋಪೊರೆಟ್ಟಿ ಎಂಬ ಮಹಿಳೆಯರು ತೆರಳಿದ್ದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಗಗನಯಾತ್ರಿಗಳಿಗೆ ಆದ್ಯತೆ ನೀಡುವ ಉದ್ದೇಶವನ್ನು ಏಜೆನ್ಸಿ ಹೊಂದಿದೆ. ಇವರ ಜೊತೆಗೆ ಅಂಗವಿಕಲ ಗಗನಯಾತ್ರಿಗಳನ್ನೂ ಕಳುಹಿಸುವ ಯೋಜನೆಯನ್ನು ಹಾಕಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಂಬಂಧ ವಿಶ್ವದ ನಾನಾ ದೇಶಗಳ 560 ಮಹಿಳೆಯರನ್ನು ಗುರುತಿಸಲಾಗಿತ್ತು, ಈ ಪೈಕಿ 65 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಬಹುತಕೇರು ಅಮೆರಿಕನ್ನರೇ ಆಗಿದ್ದಾರೆ.

ವಾಣಿಜ್ಯ ಉದ್ದೇಶದ ಉಪಗ್ರಹಗಳ ಉಡಾವಣೆಯಲ್ಲಿ ಒಂದು ಕಾಲದಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಭಾರೀ ಮುಂಚೂಣಿಯಲ್ಲಿತ್ತು. ಆದರೆ, ಜೆಫ್ ಬೆಜೂಸ್ ಅವರ ಬ್ಲೂ ಒರಿಜಿನ್ ಮತ್ತು ಎಲಾನ್ ಮಸ್ಕ್‌ ಅವರ ಎಸ್ಪೇಸ್ ಎಕ್ಸ್‌ ಸಂಸ್ಥೆಗಳಿಂದ ಈಗ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿದೆ.

ಅಮೆಜಾನ್ ಸ್ಥಾಪಕ ಬೆಜಾಸ್ ಅವರು ಮುಂದಿನ ತಿಂಗಳು ತಮ್ಮ ಸ್ವಂತ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಹೀಗೆ ತೆರಳುತ್ತಿರುವ ಜಗತ್ತಿನ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಜೆಫ್ ಬೆಜೂಸ್ ಅವರು ಪಾತ್ರವಾಗಲಿದ್ದಾರೆ. ಸಾರ್ವಜನಿಕ ಸಂಸ್ಥೆಗಳಿಂದಲೇ ಹೆಚ್ಚು ಪ್ರಾಬಲ್ಯದಲ್ಲಿ ಬಾಹ್ಯಾಕಾಶದಲ್ಲೀಗ ಖಾಸಗಿ ಕಂಪನಿಗಳು ಪೈಪೋಟಿ ನೀಡುವುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಮನುಷ್ಯ ಮುಖದ ಭಾವನೆ ಅಭಿವ್ಯಕ್ತಿಸುವ ಎಐ ಆಧರಿತ ರೊಬೋಟ್ ಅಭಿವೃದ್ಧಿ

ಬಾಹ್ಯಾಕಾಶ  ಬಹಳ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಈ ಹಂತದಲ್ಲಿ ಅದರ ಮೇಲೆ ಪ್ರಭುತ್ವ ಸಾಧಿಸದಿದ್ದರೆ ಮುಂದೆ ಎಂದಿಗೂ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತುಕೊಂಡಿರುವ ಹಲವು ಕಂಪನಿಗಳು ಈ ವಿಷಯದಲ್ಲಿ ಸಾಕಷ್ಟು ಹೂಡಿಕೆಯನ್ನು ಮಾಡುತ್ತಿವೆ. ಹಾಗಾಗಿಯೇ ಯುರೋಪಿಯನ್‌ನ ಅನೇಕ ಸ್ಟಾರ್ಟ್‌ಅಪ್‌ಗಳು ದಿಸೆಯಲ್ಲಿ ಕಾರ್ಯನಿರತವಾಗಿವೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮುಖ್ಯಸ್ಥರಾಗಿರುವ ಆಶ್‌ಬೆಚರ್, ಅವರು ಈ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಇದೇ ಏಜೆನ್ಸಿಯಲ್ಲಿ ಗಗನಯಾತ್ರಿಯಾಗಲು ಮುಂದಾಗಿದ್ದರು. ಈಗ ಅವರ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮುಖ್ಯಸ್ಥರಾಗಿದ್ದು, ಉತ್ಸಾಹಿ ಗಗನಯಾತ್ರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ.

ಈ ವರ್ಷ ಕರೆಯಲಾಗಿದ್ದು ಉದ್ಯೋಗಗಳಿಗೆ ದಶಕಗಳ ಹಿಂದೆ ಬರುತ್ತಿದ್ದ 8000 ಅರ್ಜಿಗಳ ಮೂರುಪಟ್ಟು ಹೆಚ್ಚಾಗಿದೆ. ಮತ್ತು ಈ ಪೈಕಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಈ ಹಿಂದೆ ಮಹಿಳೆಯ ಸಂಖ್ಯೆ ಶೇ.15ರಷ್ಟು ಮೀರುತ್ತಿರಲಿಲ್ಲ. ಈಗ ಮಹಿಳೆಯರೇ ಗಗನಯಾತ್ರಿಗಳಾಗಲು ಅರ್ಜಿ ಹಾಕುತ್ತಿದ್ದಾರೆ. ಹಾಗಾಗಿ, ಈ ಬೆಳವಣಿಗೆ ಆಶಾದಾಯಕವಾಗಿದೆ.

Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?

ಕೆಲವು ಗಗನಯಾತ್ರಿಗಳು ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ ಮೀರಿ ಬೆಳೆಯಬಹುದು. ಕೆಲವರು ಮೂನ್ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಅಮೆರಿಕದ ನಾಸಾ ಯೋಜಿತ ಗೇಟ್‌ವೇ ನಿಲ್ದಾಣಕ್ಕೆ ನಿಯೋಜನೆಗೊಳ್ಳಬಹುದು. ಆದರೆ ಇಎಸ್ಎ ಸದಸ್ಯ ರಾಷ್ಟ್ರಗಳು ಚೀನಾದ ಮತ್ತು ರಷ್ಯಾದ ಬಾಹ್ಯಾಕಾಶ ಏಜೆನ್ಸಿಗಳು ತಮ್ಮ ಇದೇ ರೀತಿಯ ಯೋಜನೆಯಲ್ಲಿ ಭಾಗವಹಿಸಲು ಆಹ್ವಾನವನ್ನು ಪರಿಗಣಿಸುತ್ತಿವೆ.

Follow Us:
Download App:
  • android
  • ios