ಕೊರೋನಾ ನಿಯಂತ್ರಿಸುವಲ್ಲಿ ಟ್ರಂಪ್ ಸರ್ಕಾರ ಸಂಪೂರ್ಣ ವಿಫಲ| ಅಮೆಎರಿಕದಲ್ಲಿ ಅರಜಕತೆ ಸೃಷ್ಟಿ| ಮಾಜಿ ಸಹೋದ್ಯೋಗಿಗಳೊಂದಿಗೆ ಒಬಾಮಾ ನಡೆಸಿದ್ದ ಸಂಭಾಷಣೆ ಲೀಕ್
ವಾಷಿಂಗ್ಟನ್(ಮೇ.10): ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಅಮೆರಿಕ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ದಿನೇ ದಿನೇ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚತ್ತಲೇ ಇದೆ. ಹೀಗಿರುವಾಗ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗುಡುಗಿದ್ದಾರೆ. ಮಾಜಿ ಸಹೋದ್ಯೋಗಿಗಳೊಂದಿಗೆ ಒಬಾಮಾ ನಡೆಸಿದ್ದ ಫೋನ್ ಸಂಭಾಷಣೆಯ ಆಡಿಯೋ ಸದ್ಯ ಲೀಕ್ ಆಗಿದ್ದು, ಅಮೆರಿಕದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದಾಗಿ ಒಬಾಮಾ ಹೇಳಿದ್ದಾರೆ. ಸದ್ಯ ಈ ಆಡಿಯೋ ಭಾರೀ ವೈರಲ್ ಆಗಿದೆ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಅತಿ ಹೆಚ್ಚು ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆಯೂ ಅತಿ ಹೆಚ್ಚು ಇಲ್ಲೇ ದಾಖಲಾಗಿದೆ. ಸೋಂಕಿತರ ಸಂಖ್ಯರೆ 13 ಲಕ್ಷ ದಾಟಿದ್ದರೆ, ಸಾವಿನ ಸಂಖ್ಯೆ 80 ಸಾವಿರದತ್ತ ಸಾಗಿದೆ. ಇದೀಗ ಅಮೆರಿಕದ ಈ ದುಸ್ಥಿಗೆ ಟ್ರಂಪ್ ನೇರ ಕಾರಣ ಎಂದು ಒಬಾಮಾ ಆರೋಪಿಸಿದ್ದಾರೆ.
undefined
ಲಾಕ್‌ಡೌನ್ ಎಫೆಕ್ಟ್: ಈ ಒಂದು ವಿಚಾರದಲ್ಲಿ ಅಮೆರಿಕವನ್ನೇ ಮೀರಿಸಿದ ಭಾರತ!
ಒಬಾಮಾ ವೆಬ್ ಕಾಲ್ ಲೀಕ್
ಬರಾಕ್ ಒಬಾಮಾ ಟ್ರಂಪ್ ವಿರುದ್ಧ ಗುಡುಗಿರುವ ಹಾಗೂ ಅಸಮಾಧಾನ ವ್ಯಕ್ತಪಡಿಸಿರುವ ವೆಬ್ ಕಾಲ್ ಲೀಕ್ ಆಗಿದೆ. ಇದಾದ ಬಳಿಕ ಲಭ್ಯವಾದ ಮಾಹಿತಿಯಲ್ಲಿ ಒಬಾಮಾ ತಮ್ಮ ಆಡಳಿತಾವಧಿಯಲ್ಲಿದ್ದ ಕೆಲ ಸಹೋದ್ಯೋಗಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಇಷ್ಟೇ ಅಲ್ಲದೇ ನ್ಯಾಯಾಂಗವು ಟ್ರಂಪ್ ಮಾಜಿ ರಕ್ಷಣಾ ಸಲಹೆಗಾರ ಮೈಕಲ್ ಫ್ಲಿನ್ ಮೇಲಿರುವ ಆರೋಪಗಳನ್ನು ಅಳಿಸಿ ಹಾಕಲು ನಿರ್ಧರಿಸಿದ್ದು, ಅಮೆರಿಕದ ಕಾನೂನನ್ನು ಅಪಾಯಕ್ಕೀಡು ಮಾಡಿದೆ ಎಂದೂ ಹೇಳಿದ್ದಾರೆ. ಮೈಕಲ್ ಫ್ಲಿನ್ ವಿರುದ್ಧ ರಷ್ಯಾ ವಿಚಾರದಲ್ಲಿ FBI ಎದುರು ಸುಳ್ಳು ಹೇಳಿದ್ದ ಆರೋಪವಿತ್ತು. ಯಾಹೂ ನ್ಯೂಸ್‌ಗೆ ಒಬಾಮಾರ ಈ ವೆಬ್ ಕಾಲ್ ಲಭ್ಯವಾಗಿದೆ.
ಕೊರೋನಾ ನಿಯಂತ್ರಿಸುವಲ್ಲಿ ಟ್ರಂಪ್ ಸರ್ಕಾರ ಸಂಪೂರ್ಣ ವಿಫಲ
ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಟ್ರಂಪ್ ಸರ್ಕಾರ ತೆಗೆದುಕೊಂಡ ನಿಯಮಗಳ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಅವರ ನೇತೃತ್ವ ಕುರಿತಾಗಿ ಸವಾಲುಗಳು ಎದ್ದಿವೆ. ಈ ಮಹಾಮಾರಿ ವಿರುದ್ಧ ಹೋರಾಡುವಲ್ಲಿ ಟ್ರಂಪ್ ಸಂಪೂರ್ಣ ವಿಫಲವಾಗಿದೆ. ಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ ಪರಿಸ್ಥಿತಿ ನಿಭಾಯಿಸಲು ಇಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆ ಎದುರಾಗಿದೆ. ಹೀಗಾಗಿ ಸದ್ಯ ಅನ್ಯ ದೇಶಗಳಿಗೆ ವೈದ್ಯಕೀಯ ಸಲಕರಣೆ ಒದಗಿಸುವಂತೆ ಮನವಿ ಮಾಡಿಕೊಳ್ಳುತ್ತಿದೆ.
ಅಮೆರಿಕದಲ್ಲಿ ಪ್ರತಿದಿನ 3000 ಸಾವು, 2 ಲಕ್ಷ ಕೇಸು?: ಆಂತರಿಕ ರಹಸ್ಯ ದಾಖಲೆ ಬಹಿರಂಗ!
ಇನ್ನು ಟ್ರಂಪ್ ಕೊರೋನಾ ವಿರುದ್ಧ ಕ್ರಮ ಕೈಗೊಳ್ಳಲು ಬಹಳ ತಡ ಮಾಡಿದರು. ಅಲ್ಲದೇ ಫೆಬ್ರವರಿಯಲ್ಲಿ ಇಲ್ಲಿ ಮೊದಲ ಕೊರೋನಾ ಪ್ರಕರಣ ವರದಿಯಾದಾಗ ಟೆಸ್ಟಿಂಗ್ ಕಿಟ್ ದಾಸ್ತಾನು ಮಾಡಲಿಲ್ಲ, ಜೊತೆಗೆ ಅನ್ಯ ವೈದ್ಯಕೀಯ ಉಪಕರಣಗಳನ್ನು ಒಗ್ಗೂಡಿಸಲಿಲ್ಲ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.
ಇನ್ನು ಕೊರೋನಾ ನಿಯಂತ್ರಣಕ್ಕಿಂತ ಹೆಚ್ಚು ಟ್ರಂಪ್‌ಗೆ ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ಇರುವಂತಿದೆ. ಹೀಗಾಗೇ ಅವರು ದೇಶದಲ್ಲಿ ಸಾಧ್ಯವಾದಷ್ಟು ಬೇಗ ಎಲ್ಲಾ ಸೇವೆಎಗಳನ್ನು ಪುನರಾರಂಭಿಸುವ ಯೋಚನೆಯಲ್ಲಿದ್ದಾರೆ ಎಂಬುವುದು ತಜ್ಞರ ಮಾತಾಗಿದೆ.
ನಾವು ಈ ಸಮರವನ್ನು ಸ್ವಾರ್ಥಿಗಳಾಗಿ ಎದುರಿಸುತ್ತಿದ್ದೇವೆ. ನಾವು ಹಳೆಯ ಕ್ರಮಗಳನ್ನೇ ಅನುಸರಿಸುತ್ತಿದ್ದೇವೆ. ಹೀಗಾಗೇ ಪರಸ್ಪರ ದೂರವಿದ್ದು, ಶತ್ರುಗಳಂತೆ ಕಾಣುತ್ತಿದ್ದೇವೆ ಎಂದು ಒಬಾಮಾ ವೆಬ್ ಕಾಲ್‌ನಲ್ಲಿ ಹೇಳಿದ್ದಾರೆ.