ನವದೆಹಲಿ: ಒಂದು ಕಡೆ ಎಫ್-35 ಯುದ್ಧ ವಿಮಾನ ಮಾರಾಟ ಮಾಡಲು ಅಮೆರಿಕ ಪ್ರಯತ್ನ ನಡೆಸುತ್ತಿರುವಾಗಲೇ, ಇದೀಗ ಮಿತ್ರ ರಾಷ್ಟ್ರ ರಷ್ಯಾ 5ನೇ ತಲೆಮಾರಿನ ಎಸ್‌ಯು-57 ಯುದ್ಧವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ಮುಂದೆ ಬಂದಿದೆ. ಕೇವಲ ವಿಮಾನ ಮಾರಾಟ ಮಾತ್ರವಲ್ಲ, ಅತ್ಯಾಧುನಿಕ ಯುದ್ಧ ವಿಮಾನದ ಪೂರ್ಣ ತಂತ್ರಜ್ಞಾನ ವರ್ಗಾವಣೆಗೇ ಸಿದ್ಧ. ಯುದ್ಧ ವಿಮಾನದ ತಂತ್ರಜ್ಞಾನ ಸಂಬಂಧ ನಿಮಗೆ ಏನೇನು ಬೇಕೋ ಅದನ್ನೆಲ್ಲಾ ಕೊಡಲು ನಾವು ಸಿದ್ಧ ಎಂಬ ಕಂಡುಕೇಳರಿಯದ ಪ್ರಸ್ತಾಪವನ್ನು ಭಾರತದ ಮುಂದಿಟ್ಟಿದೆ ಎನ್ನಲಾಗಿದೆ.
ಮೊದಲಿನ ಪ್ರಸ್ತಾಪದ ಪ್ರಕಾರ, ಮೊದಲ ಹಂತದಲ್ಲಿ ವಿಮಾನ ಮಾರಾಟ, ಬಳಿಕ ಭಾರತದಲ್ಲೇ ಉತ್ಪಾದನೆಯ ಪ್ರಸ್ತಾಪ ಇತ್ತು. ಆದರೆ ಇದೀಗ ಮೊದಲ ಹಂತದಲ್ಲೇ ಯುದ್ಧ ವಿಮಾನ ಪೂರ್ಣ ತಂತ್ರಜ್ಞಾನದ ಹಸ್ತಾಂತರದ ಪ್ರಸ್ತಾಪವನ್ನು ರಷ್ಯಾ ಮುಂದಿಟ್ಟಿದೆ. ಯಾವುದೇ ದೇಶವೊಂದು, ಯುದ್ಧ ವಿಮಾನದ ತಂತ್ರಜ್ಞಾನವನ್ನೇ ಈ ಮಟ್ಟಿಗೆ ಭಾರತಕ್ಕೆ ಹಸ್ತಾಂತರ ಮಾಡಲು ಮುಂದಾಗಿರುವುದು ಇದೇ ಮೊದಲು. ಒಂದು ವೇಳೆ ಒಂದು ವೇಳೆ ಭಾರತ ಇದಕ್ಕೇನಾದರೂ ಒಪ್ಪಿಗೆ ಸೂಚಿಸಿದರೆ, ಪಾಶ್ಟಿಮಾತ್ಯ ರಾಷ್ಟ್ರಗಳು ಪದೇ ಪದೆ ನಿರಾಕರಿಸುತ್ತಲೇ ಬಂದಿದ್ದ ತಂತ್ರಜ್ಞಾನ ಭಾರತದ ಕೈಸೇರಲಿದೆ. ಭಾರತದ ವೈಮಾನಿಕ ತಂತ್ರಜ್ಞಾನ ಅಭಿವೃದ್ಧಿಯ ದಿಕ್ಕೇ ಬದಲಾಗುವ ನಿರೀಕ್ಷೆ ಇದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಎಸ್‌ಯು-57 ಯುದ್ಧ ವಿಮಾನ ಮಾರಾಟದ ಪ್ರಸ್ತಾಪ ಸಲ್ಲಿಸುವ ನಿರೀಕ್ಷೆ ಇದೆ. ಇದರ ಜತೆಗೆ ಸಿಂಗಲ್ ಎಂಜಿನ್ ಯುದ್ಧವಿಮಾನ ಎಸ್‌ಯು-75 ಚೆಕ್ ಮೇಟ್ ಅನ್ನೂ ಭಾರತಕ್ಕೆ ನೀಡಲು ರಷ್ಯಾ ಮುಂದೆ ಬಂದಿದೆ ಎಂದು ವರದಿಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ