ಎಣ್ಣೆ ಕುಡಿಯಿರಿ, ಇಲ್ಲಾಂದ್ರೆ ಕಿಸ್ ಮಾಡಿ- ಆಫಿಸ್‌ ಪಾರ್ಟಿಯಲ್ಲಿನ ಆಟ ಕಂಡು ಕಣ್ಣೀರಿಟ್ಟ ಮಹಿಳಾ ಉದ್ಯೋಗಿಗಳು

By Mahmad Rafik  |  First Published Aug 25, 2024, 5:43 PM IST

ಆಫಿಸ್ ಪಾರ್ಟಿಗೆ ಹೋದ ಯುವತಿ ಅಲ್ಲಿಯ ಗೇಮ್ ಚಾಲೆಂಜ್‌ಗಳನ್ನು ನೋಡಿ ಫುಲ್ ಶಾಕ್ ಆಗಿದ್ದಳು. ಮದ್ಯ ಕುಡಿಯಬೇಕು, ಇಲ್ಲಾಂದ್ರೆ ತಂದೆಯ ವಯಸ್ಸಿನ ವ್ಯಕ್ತಿಗೆ ಕಿಸ್ ಮಾಡಬೇಕಿತ್ತು.


ಇಂದು ಪಾರ್ಟಿ ಅನ್ನೋದು ಸಾಮಾನ್ಯ ಪದವಾಗಿದೆ. ಕುಟುಂಬ ಸದಸ್ಯರೆಲ್ಲಾ ಒಂದೆಡೆ ಸೇರಿ ಔತಣಕೂಟ ಏರ್ಪಡಿಸೋದನ್ನು ಸಹ ಪಾರ್ಟಿ ಎಂದು ಕರೆಯಲಾಗುತ್ತದೆ. ಇನ್ನು ಗೆಳೆಯರೆಲ್ಲಾ ಸೇರಿ ಪಾರ್ಟಿ ಮಾಡಿದರೆ ಅಲ್ಲಿ ಮದ್ಯ ಇದ್ದೇ ಇರುತ್ತದೆ. ಮದ್ಯ ಸೇವಿಸುವ ಗೆಳೆಯರೆಲ್ಲಾ ಎಣ್ಣೆ ಕುಡಿದು ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿಯೂ ಇಂದು ಉದ್ಯೋಗಿಗಳಿಗಾಗಿ ಕಂಪನಿಗಳೇ ಪಾರ್ಟಿ ಆಯೋಜನೆ ಮಾಡುತ್ತವೆ. ಇಂತಹ ಪಾರ್ಟಿಗಳಲ್ಲಿ ಮಹಿಳಾ ಉದ್ಯೋಗಿಗಳು ಸಹ ಭಾಗಿಯಾಗುತ್ತಾರೆ. ಇಂತಹ ಪಾರ್ಟಿಗಳಲ್ಲಿ ಮದ್ಯ ಸೇರಿದಂತೆ ಎಲ್ಲಾ ಬಗೆಯ ಆಹಾರಗಳನ್ನು ಇರಿಸಲಾಗುತ್ತದೆ. ಇಂದು ಮಹಿಳೆಯರಲ್ಲಿಯೂ ಕೆಲವರು ಮದ್ಯ ಸೇವನೆ ಮಾಡುತ್ತಾರೆ. ಮದ್ಯ ಸೇವನೆ ಮಾಡುವ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. ಆದ್ರೆ ಇಲ್ಲೊಂದು ಕಂಪನಿ ಆಯೋಜಿಸಿದ ಪಾರ್ಟಿಯಲ್ಲಿ ಪ್ಲಾನ್ ಮಾಡಿದ್ದ ಗೇಮ್ ನೋಡಿ ಮಹಿಳ ಉದ್ಯೋಗಿಗಳು ಕಣ್ಣೀರು ಹಾಕಿದ್ದಾರೆ. 

ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಗುರುತಿಸಿಕೊಂಡಿದ್ದಾರೆ. ಹಾಗಾಗಿ ಯಾವುದೇ ಕಾರ್ಯಕ್ರಮ ಇದ್ದರೂ ಅಲ್ಲಿ ಮಹಿಳೆಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿರುತ್ತದೆ. ಕೆಲವೊಮ್ಮೆ ಮಹಿಳೆಯರು ಅಪರಿಚಿತ ಸ್ಥಳ ಅಥವಾ ತಮ್ಮವರೇ ನಡುವೆ ಮುಜುಗರಕ್ಕೊಳಗಾಗುವ ಸನ್ನಿವೇಶಗಳು  ಸೃಷ್ಟಿಯಾಗುತ್ತವೆ. ಇದೀಗ ಇಂತಹವುದೇ ಒಂದು ಘಟನೆ ನಡೆದಿದ್ದು, ಆಫಿಸ್ ಪಾರ್ಟಿಯಲ್ಲಿ ತಮಗಾದ ಕಹಿ ಅನುಭವಗಳ ಬಗ್ಗೆ ಮಹಿಳೆಯರು ಸೋಶಿಯಲ್ ಮೀಡಿಯಾದಲ್ಲಿನ ಬರೆದುಕೊಂಡಿದ್ದಾರೆ. 

Tap to resize

Latest Videos

undefined

ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಮಹಿಳಾ ಉದ್ಯೋಗಿಗಳನ್ನು 'ಟೀಂ ಬಿಲ್ಡಿಂಗ್ ಇವೆಂಟ್' ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದ್ರೆ ಈ ಇವೆಂಟ್‌ಗೆ ತೆರಳಿದ ಮೇಲೆ ಅಲ್ಲಾದ ಅನುಭವಗಳ ಬಗ್ಗೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ. 

Huynh Anh My told Dantri ಎಂಬ ಪತ್ರಿಕೆಯಲ್ಲಿ ಈ ಘಟನೆ  ಬಗ್ಗೆ ವರದಿ ಪ್ರಕಟಿಸಲಾಗಿದೆ. ಓರ್ವ ಯುವತಿ ಈ ಕಂಪನಿಯಲ್ಲಿ ಇಂಟರ್‌ನಿಯಾಗಿ ಕೆಲಸ ಮಾಡಿಕೊಂಡಿದ್ದಳು. ಆಕೆಗೂ ಟೀಂ ಬಿಲ್ಡಿಂಗ್ ಇವೆಂಟ್‌ಗೆ ಆಹ್ವಾನಿಸಲಾಗಿತ್ತು. ಒಂದು ವೇಳೆ ಇವೆಂಟ್‌ಗೆ ಗೈರಾದ್ರೆ ಹೆಚ್ಚಿನ ಕೆಲಸ ನೀಡಬಹುದು ಮತ್ತು ಎಲ್ಲರ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಭಯವಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ ಯುವತಿ ತೆರಳಿದ್ದಳು. ಆದ್ರೆ ಅಲ್ಲಿಗೆ ಹೋದ ನಂತರ ಇವೆಂಟ್‌ ರಹಸ್ಯ ತಿಳಿದು ಯುವತಿ ಶಾಕ್ ಆಗಿದ್ದಳು. ಟೀಂ ಬಿಲ್ಡಿಂಗ್ ಹೆಸರಿನಲ್ಲಿ ಹಲವು ಗೇಮ್ ಚಾಲೆಂಜ್‌ಗಳನ್ನು ಆಯೋಜಿಸಲಾಗಿತ್ತು.

 ಸಿಕ್ ಲೀವ್‌ಗೆ 7 ದಿನ ಮೊದಲೇ ತಿಳಿಸಬೇಕು, ಬಾಸ್ ಮೆಸೇಜ್‌ಗೆ ನೆಟ್ಟಿಗರ ಕ್ಲಾಸ್!

ತಂದೆಯ ವಯಸ್ಸಿನ ವ್ಯಕ್ತಿಯೋರ್ವ ಯುವತಿಗೆ ಸತತವಾಗಿ ಮೂರು ಗ್ಲಾಸ್ ಮದ್ಯ  ಕುಡಿಯಬೇಕೆಂದು ಚಾಲೆಂಜ್ ಹಾಕಿದ್ದನು. ಒಂದು ವೇಳೆ  ಮದ್ಯ ಕುಡಿಯದಿದ್ದರೆ ತಂದೆ ವಯುಸ್ಸಿನ ವ್ಯಕ್ತಿಗೆ ಯುವತಿ ಕಿಸ್ ಮಾಡಬೇಕಿತ್ತು. ಆದ್ರೆ ಗೇಮ್ ಆಡಲು ಒಪ್ಪದೇ ಯುವತಿ ಅಲ್ಲಿಂದ ಹೊರಟರೆ ವ್ಯಕ್ತಿಯ ಆಕೆ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದನು. ಕೊನೆಗೆ ಯುವತಿ ಅಳುತ್ತಾ ಮೂರು ಗ್ಲಾಸ್ ಮದ್ಯ ಕುಡಿದಳು.ಪಾರ್ಟಿಯಿಂದ ಬಂದ ನಂತರ ಯುವತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ ಎಂದು ವರದಿಯಾಗಿದೆ. 

ಈ ಬಗ್ಗೆ ಯುವತಿ ಕಚೇರಿಯಲ್ಲಿ ಮ್ಯಾನೇಜರ್‌ಗೆ ದೂರು ನೀಡಿದ್ದಳು. ಆದ್ರೆ ಮ್ಯಾನೇಜರ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡದಿದ್ದಾಗ ಯುವತಿ ಕಂಪನಿಯನ್ನೇ ತೊರೆದಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜನರು, ಈ ರೀತಿಯ ಟೀಮ್ ಚಟುವಟಿಕೆ ನಡೆಯಬಾರದು. ಪ್ರತಿಯೊಬ್ಬರೂ ಕೆಲಸದ ಸ್ಥಳದಲ್ಲಿ ಶೋಷಣೆಗೆ ಒಳಗಾಗುತ್ತಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

ಮದುವೆ ದಿನ ಬಾಸ್‌ನಿಂದ ಬಂದ ಮೆಸೇಜ್ ನೋಡಿ ಯುವತಿ ಶಾಕ್; ಆ ಕ್ಷಣ ಉಸಿರು ನಿಂತತಾಯ್ತು ಎಂದ ವಧು!

click me!