ಅಮೆರಿಕದ ಮಹಿಳೆಯೊಬ್ಬರು ತಮ್ಮ ಸಾಕು ನಾಯಿಗಾಗಿ 4 ಸಾವಿರಕ್ಕೂ ಅಧಿಕ ಕಿಲೋ ಮೀಟರ್ ಸೈಕ್ಲಿಂಗ್ ಮಾಡಿ ಹೊಸ ದಾಖಲೆಯನ್ನು ಮಾಡಿದ್ದಾರೆ. ನಾಯಿಯ ಜಿಪಿಎಸ್ ಡ್ರಾಯಿಂಗ್ ರಚನೆ ಮಾಡಿದ್ದಾರೆ.
ವಾಷಿಂಗಟನ್ ಡಿಸಿ: ಅಮೆರಿಕದ ಕ್ರಿಸ್ಟಿ ಬ್ಲೆಮರ್ ಎಂಬ ಮಹಿಳೆ ತನ್ನ ಮೃತ ನಾಯಿಯ ನೆನಪಿನಲ್ಲಿ ಸೈಕಲ್ ಮೂಲಕ ಜಗತ್ತಿನ ಹಲವು ದೇಶಗಳಿಗೆ ಭೇಟಿ ನೀಡಿ ಅತ್ಯಂತ ಉದ್ದದ ಜಿಪಿಎಸ್ ಮಾರ್ಗ ರಚಿಸಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಕ್ರಿಸ್ಟಿ ಬ್ಲೆಮರ್ ತಮ್ಮ ಜೊತೆಯಲ್ಲಿ ಸ್ಲಿಂಕಿ ಹೆಸರಿನ ಮುದ್ದಾದ ನಾಯಿಯನ್ನು ಸಾಕಿಕೊಂಡಿದ್ದರು. ಸ್ಲಿಂಕಿ ಸಾವನ್ನಪ್ಪಿದ ಬಳಿಕ ತಮ್ಮ ಹುಟ್ಟುಹಬ್ಬದ ದಿನ (ಮೇ 1) ಸೈಕಲ್ ಮೂಲಕ ಪ್ರವಾಸ ಆರಂಭಿಸಿದ್ದಾರೆ. ಎರಡು ತಿಂಗಳಲ್ಲಿ ಕ್ರಿಸ್ಟಿ ಬ್ಲೆಮರ್ ಬರೋಬ್ಬರಿ 4,707 ಕಿ.ಮೀ ಕ್ರಮಿಸಿ ನಾಯಿಯ ಚಿತ್ರದ ಜಿಪಿಎಸ್ ರಚಿಸಿ ದಾಖಲೆ ಬರೆದಿದ್ದಾರೆ.
ಈ ಮೂಲ ಡೇವಿಡ್ ಶ್ವಿಕರ್ಟ್ ಎಂಬವರ ಹೆಸರಿನಲ್ಲಿದ್ದ ದಾಖಲೆಯನ್ನು ಕ್ರಿಸ್ಟಿ ಅಳಿಸಿ ಹಾಕಿದ್ದಾರೆ. ಕಳೆದ ವರ್ಷ ಡೇವಿಡ್ ಶ್ವಿಕರ್ಟ್ ಎಂಬವರು ಸೈಕಲ್ ಮೂಲಕ 1,581.2 ಕಿಲೋ ಮೀಟರ್ ಕ್ರಮಿಸಿ ಜಿಪಿಎಸ್ ಡ್ರಾಯಿಂಗ್ ರಚನೆ ಮಾಡಿದ್ದರು. ಅತಿದೊಡ್ಡ ಜಿಪಿಎಸ್ ಡ್ರಾಯಿಂಗ್ ರಚನೆ ಬಳಿಕ ಮಾತನಾಡಿರುವ ಕ್ರಿಸ್ಟಿ ಬ್ಲೆಮರ್, ಸೈಕಲ್ ಪ್ರಯಾಣದ ಮೂಲಕ ಹೇಗೆ ಜಿಪಿಎಸ್ ಡ್ರಾಯಿಂಗ್ ರಚನೆ ಮಾಡಬೇಕು ಎಂಬುದಕ್ಕೆ ತುಂಬಾ ಸಮಯ ತೆಗೆದುಕೊಂಡಿದ್ದೇನೆ. ನನ್ನ ಜಿಪಿಎಸ್ ಡ್ರಾಯಿಂಗ್ ನಾಯಿ ರೀತಿ ಕಾಣಬೇಕು ಅನ್ನೋದು ನನ್ನಾಸೆ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.
undefined
ಕ್ರಿಸ್ಟಿ ಬ್ಲೆಮರ್ ನೆದರ್‌ಲ್ಯಾಂಡ್ ರಾಜಧಾನಿ ಆಮಸ್ಟರ್ಡಮ್‌ನಿಂದ ತಮ್ಮ ಸೈಕಲ್ ಪ್ರಯಾಣವನ್ನು ಮೇ 2ರಂದು ಆರಂಭಿಸಿದ್ದರು. ಕಾರಣ ಈ ಮಾರ್ಗ ಸೈಕಲ್ ಪ್ರಯಾಣಕ್ಕೆ ಅನುಕೂಲವಾಗಿರುವ ಕಾರಣ ಇದೇ ಪಥವನ್ನು ಆಯ್ಕೆ ಮಾಡಿಕೊಂಡಿದ್ದರು. ನಂತರ ಕ್ರಿಸ್ಟಿ ಬ್ಲೆಮರ್ ಪ್ಯಾರಿಸ್, ಬ್ರಸೆಲ್ಸ್, ಸ್ವಿಟ್ಜರ್ಲೆಂಡ್, ಜರ್ಮನಿ ಮತ್ತು ಚಕಿಯಾ ಸೇರಿದಂತೆ ಯುರೋಪಿನ ಹಲವು ಭಾಗಗಳಲ್ಲಿ ಸೈಕ್ಲಿಂಗ್ ಮಾಡುವ ಮೂಲಕ ತಮ್ಮ ಜಿಪಿಎಸ್ ರೇಖಾಚಿತ್ರವನ್ನು ರಚನೆ ಮಾಡಿದ್ದಾರೆ. ಈ ಸೈಕಲ್ ಯಾತ್ರೆಯಲ್ಲಿ ಕ್ರಿಸ್ಟಿ ಬ್ಲೆಮರ್ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಫ್ರಾನ್ಸ್ ಭಾಗದಲ್ಲಿ ಭಾರೀ ಮಳೆಯನ್ನು ಎದುರಿಸಿರೋದಾಗಿ ಹೇಳಿಕೊಂಡಿದ್ದಾರೆ.
ಮೃತಪಟ್ಟ ನಾಯಿಯಿಂದ 41 ಲಕ್ಷ ರೂಪಾಯಿ ಗೆದ್ದ ಮಾಲೀಕ, ಪೆಟ್ ಡಾಗ್ ನೆನೆದು ಭಾವುಕ!
2002ರ ವರ್ಷಾಂತ್ಯಕ್ಕೆ ಕ್ರಿಸ್ಟಿ ಬ್ಲೆಮರ್ ತಮ್ಮ ಇಂಜಿನೀಯರ್ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ಏನಾದ್ರೂ ಸಾಧನೆ ಮಾಡಬೇಕು ಎಂದು ಕಚೇರಿಯಿಂದ ಹೊರಗಡೆ ಬಂದಿದ್ದರು. ಮೊದಲು ಪೆಸಿಫಿಕ್ ಕರಾವಳಿ ಹೆದ್ದಾರಿಯಲ್ಲಿ ಸೈಕ್ಲಿಂಗ್, ಯುನೈಟೆಡ್ ಸ್ಟೇಟ್ಸ್ ಮತ್ತು ಪೋರ್ಚುಗಲ್‌ನ ಪಶ್ಚಿಮ ಕರಾವಳಿಯಿಂದ ಸ್ಪೇನ್‌ನ ಪೂರ್ವ ಕರಾವಳಿಯವರೆಗೂ ಸೈಕ್ಲಿಂಗ್ ಮಾಡಿದ್ದಾರೆ.
ಇನ್ನು ನನ್ನ ಜೀವನದಲ್ಲಿ ಹಲವು ಸಾಧನೆಗಳನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ. ಹೆಚ್ಚಿನ ತರಬೇತಿ ಇಲ್ಲದ ಕಾರಣ ಪ್ರಯಾಣದ ವೇಳೆ ಗಾಯಗೊಂಡಿದ್ದೇನೆ. ಈ ದಾಖಲೆ ನನ್ನ ಕನಸನ್ನು ನನಸು ಮಾಡಿದ್ದು, ಮುಂದಿನ ಸಾಧನೆಗಳಿಗೆಮ ಸ್ಪೂರ್ತಿಯನ್ನು ಒದಗಿಸುತ್ತಿದೆ. ಈ ಹಿಂದೆ ನಾನು ಹಲವು ಗಿನ್ನಿಸ್ ದಾಖಲೆ ಮಾಡಿದ್ದ ಜನರನ್ನು ಭೇಟಿಯಾಗಿದ್ದಾಗ ನಾನು ರೆಕಾರ್ಡ್ ಮಾಡಬೇಕು ಎಂಬ ಹುಮ್ಮಸ್ಸು ಬಂದಿತ್ತು ಎಂದು ಕ್ರಿಸ್ಟಿ ಬ್ಲೆಮರ್ ಹೇಳಿಕೊಂಡಿದ್ದಾರೆ.
ಸೌತೆಕಾಯಿಗೆ ಬರಗಾಲ ಸೃಷ್ಟಿಸಿದ ಟಿಕ್‌ಟಾಕ್ ವಿಡಿಯೋ - ಯುವಕನ ರೆಸಿಪಿಗೆ ಜನರು ಫಿದಾ