* ವಿಶ್ವವ್ಯಾಪಿ ‘ಮಣ್ಣು ಉಳಿಸಿ’ ಅಭಿಯಾನಕ್ಕೆ ಸದ್ಗುರು ಕರೆ
* ಮಣ್ಣಿನ ಅವನತಿ ತಡೆದರಷ್ಟೇ ಬೆಳೆ ಸಾಧ್ಯ
* ಜಿನೇವಾ ತಲುಪಿದ ‘ಮಣ್ಣು ಉಳಿಸಿ’ ಬೈಕ್ ರಾರಯಲಿ
*ಸದ್ಗುರು ನೇತೃತ್ವದ ‘ಸೇವ್ ಸಾಯಿಲ್’ ಅಭಿಯಾನ
ಬೆಂಗಳೂರು(ಏ. 07) ವಿಶ್ವದಾದ್ಯಂತ ನಾಗರಿಕರು ತಮ್ಮ ದೇಶಗಳಲ್ಲಿ ‘ಮಣ್ಣು ಉಳಿಸಿ’(Save Soil) ಆಂದೋಲನ ಆರಂಭಿಸಬೇಕು. ಬೆಳೆ ಬೆಳೆಯಲು ಪೂರಕವಾದ ಫಲವತ್ತಾದ ಮಣ್ಣಿನ ಅವನತಿ ತಡೆಗಟ್ಟಬೇಕು ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಹೇಳಿದರು.
ಸದ್ಗುರು (Sadguru) ನೇತೃತ್ವದ ‘ಸೇವ್ ಸಾಯಿಲ್’ ಬೈಕ್ ರಾರಯಲಿ ಜಾಗೃತಿ ಆಂದೋಲನ ಮಂಗಳವಾರ ಸ್ವಿಜರ್ಲ್ಯಾಂಡ್ ದೇಶದ ಜಿನೇವಾ ನಗರ ತಲುಪಿತು. ಈ ವೇಳೆ ವಿಶ್ವಸಂಸ್ಥೆ ಕಚೇರಿಯಲ್ಲಿ ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಗುರು, ನಿರಂತರ ಮಣ್ಣಿನ ಸವಕಳಿಯಿಂದಾಗಿ ಭವಿಷ್ಯದಲ್ಲಿ ಆಹಾರ ಕೊರತೆ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
undefined
ಕಳೆದ 30 ವರ್ಷಗಳಿಂದ ಮಣ್ಣು, ಪರಿಸರ ರಕ್ಷಣೆ ಕುರಿತು ಮಾತನಾಡುತ್ತಿದ್ದೇನೆ. ಆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಎಲ್ಲರು ಮಣ್ಣಿನ ಮಹತ್ವ ಮರೆತು ಬಿಡುತ್ತಿದ್ದಾರೆ. ಭವಿಷ್ಯದ ಕಾಳಜಿ, ಮಣ್ಣಿನ ಸವಕಳಿ ಸೇರಿದಂತೆ ಮೂಲ ವಿಷಯ ಅಲ್ಲಿಯೆ ಸಾಯುತ್ತಿದೆ. ಹೀಗಾಗದಂತೆ ಜಾಗತಿಕವಾಗಿ ಎಚ್ಚರದ ಹೆಜ್ಜೆ ಇಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಮನವಿ ಮಾಡಿದರು.
‘ಯುವ ಸಮೂಹ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಆಹಾರ ಬರುತ್ತದೆ ಎಂದು ಭಾವಿಸುವುದು ತಪ್ಪು. ಮಕ್ಕಳಲ್ಲಿ ಆಹಾರ, ಮಣ್ಣು, ನೀರಿನ ಉಳಿಸುವ ಬಗ್ಗೆ ಅರಿವು ಮೂಡಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರು ವಿಶ್ವಕ್ಕಾಗಿ, ಮುಂದಿನ ಭವಿಷ್ಯ ದೃಷ್ಟಿಯಿಂದ ಧ್ವನಿ ಎತ್ತಬೇಕು. ಇಂದಿನ ಯುವ ಪೀಳಿಗೆ ಒಂದಾಗಿ ಸಾಗಿದರೆ ಅದೊಂದು ದೊಡ್ಡ ಅಭಿಯಾನವಾಗಿ ಮಾರ್ಪಡುತ್ತದೆ’ ಎಂದು ಭವಿಷ್ಯದ ಆಹಾರ, ಮಣ್ಣು, ನೀರಿನ ಸವಾಲು, ಸಮಸ್ಯೆಗಳ ಕುರಿತು ವಿವರಿಸಿದರು.
ಕೈವಾರ ಸದ್ಗುರು ನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ : ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ ಸಂಯುಕ್ತವಾಗಿ ಏ.10ರ ಬೆಳಗ್ಗೆ 8ಕ್ಕೆ ಕೈವಾರ ಸದ್ಗುರು ನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ ಸಮಾರಂಭವನ್ನು ಲಲಿತಕಲೆಗಳ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ತಿಳಿಸಿದರು.
ಈ ಕಾರ್ಯಕ್ರಮವನ್ನು ಅಂದು ಬೆಳಗ್ಗೆ 10ಕ್ಕೆ ಶ್ರೀ ಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಉದ್ಘಾಟಿಸುವರು. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಿರ್ಮಾಪಕಿ ಮೀನಾ ತೂಗುದೀಪ ಅತಿಥಿಯಾಗುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳಗ್ಗೆ 11.30ಕ್ಕೆ ಡಾ.ಟಿ. ರಮೇಶ್ ಅವರು ಸಂಪಾದಿಸಿರುವ ಕೈವಾರ ತಾತಯ್ಯನವರ ಚಿಂತನೆಗಳು ಕೃತಿಯನ್ನು ಮಾಜಿ ಸಚಿವ ಎಂ.ಆರ್. ಸೀತಾರಾಂ ಬಿಡುಗಡೆಗೊಳಿಸುವರು. ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ನಿರಂಜನ ವಾನಳ್ಳಿ, ರಾಜ್ಯ ಕೈಗಾರಿಕಾ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಎಂಡಿ ಡಾ.ಎಂ.ಆರ್. ರವಿ, ಮೈಸೂರ ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.
ಇದೆ ವೇಳೆ ಯೋಗಿನಾರೇಯಣ ಯತೀಂದ್ರರ ರಥಯಾತ್ರೆಗೆ ಸಹಕರಿಸಿದ ಹಿರಿಯರಾದ ಎಂ. ನಾರಾಯಣ, ಎಂ.ಎಸ್. ವೆಂಕಟೇಶಬಾಬು, ಸಿ.ವಿ. ಶ್ರೀನಿವಾಸಶೆಟ್ಟಿಮತ್ತು ರೇಣು ಅವರನ್ನು ಅಭಿನಂದಿಸಲಾಗುವುದು. ಇದಕ್ಕೂ ಮುನ್ನ ಬೆಳಗ್ಗೆ 9ಕ್ಕೆ ವಾನರಾಶಿ ಬಾಲಕೃಷ್ಣ ಭಾಗವತರ್ ಅವರಿಂದ ಶ್ರೀ ಯೋಗಿನಾರೇಯಣ ಕೀರ್ತನೆಗಳ ಗಾಯನ ಏರ್ಪಡಿಸಲಾಗಿದೆ ಎಂದರು.
ಮಧ್ಯಾಹ್ನ 2.30ಕ್ಕೆ ನಡೆಯುವ ಯತೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಧ್ವನ್ಯಾಲೋಕದ ಅಧ್ಯಕ್ಷ ಪೊ›.ಸಿ.ಎನ್. ಶ್ರೀನಾಥ್ ಅವರಿಗೆ ಡಾ.ಎಂ.ಆರ್. ಜಯರಾಮ್ ಪ್ರಶಸ್ತಿ ಪ್ರದಾನ ಮಾಡುವರು.