
ಲಂಡನ್ (ಡಿ.23) ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ ಹಾಗೂ ಐಪಿಎಲ್ ಅವ್ಯವಹಾರದಿಂದ ವಿದೇಶಕ್ಕೆ ಪರಾರಿಯಾದ ಲಲಿತ್ ಮೋದಿ ಇಬ್ಬರು ಜೊತೆಯಾಗಿ ಪಾರ್ಟಿ ಮಾಡಿದ ಫೋಟೋ, ವಿಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ವಿಜಯ್ ಮಲ್ಯ ಹುಟ್ಟು ಹಬ್ಬಕ್ಕೆ ಲಲಿತ್ ಮೋದಿ ಲಂಡನ್‌ನಲ್ಲಿ ಅತೀ ದೊಡ್ಡ ಪಾರ್ಟಿ ಆಯೋಜನೆ ಮಾಡಿದ್ದರು. ಹಲವು ಗಣ್ಯರು ಈ ಪಾರ್ಟಿಗೆ ಆಗಮಿಸಿದ್ದರು. ಈ ವೇಳೆ ಮಲ್ಯ ಹಾಗೂ ಮೋದಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಫೋಟೋ ಕ್ಲಿಕ್ಕಿಸಲು ಬಂದವರಿಗೆ ಲಲಿತ್ ಮೋದಿ ನೀಡಿದ ಉತ್ತರ ಇದೀಗ ವೈರಲ್ ಆಗಿದೆ. ಭಾರತದಿಂದ ಪರಾರಿಯಾಗಿರುವ ಅತೀ ದೊಡ್ಡ ವ್ಯಕ್ತಿಗಳು ನಾವೇ ಎಂದು ಲಲಿತ್ ಮೋದಿ ಹೇಳಿದ್ದಾರೆ.
ಈ ವಿಡಿಯೋವನ್ನು ಲಲಿತ್ ಮೋದಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಈ ವಿಡಿಯೋ ಜೊತೆ ಸಣ್ಣ ಬರಹವನ್ನು ಹಾಕಿದ್ದರೆ. ನಾವು ಇಂಟರ್ನೆಟ್ ಬ್ರೇಕ್ ಮಾಡೋಣ, ಮಾಧ್ಯಮವರಿಗೆ ಕೆಲ ವಿಷಯ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರತದಲ್ಲಿ ವೈರಲ್ ಆಗಿದೆ.
ವಿಜಯ್ ಮಲ್ಯ ಡಿಸೆಂಬರ್ 18ರಂದು 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತದಿಂದ ಪರಾರಿಯಾಗಿರುವ ವಿಜಯ್ ಮಲ್ಯ ಲಂಡನ್‌ನಲ್ಲಿದ್ದರೆ, ಇತ್ತ ಲಲಿತ್ ಮೋದಿ ಕೂಡ ಲಂಡನ್‌ನಲ್ಲೇ ನೆಲೆಸಿದ್ದಾರೆ. ವಿಜಯ್ ಮಲ್ಯ 70ನೇ ವರ್ಷದ ಹುಟ್ಟುಹಬ್ಬಕ್ಕೆ ಲಲಿತ್ ಮೋದಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಇಬ್ಬರು ಜೊತೆಯಾಗಿದ್ದರು. ಲಲಿತ್ ಮೋದಿ ಖುದ್ದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಲ್ಯ ಬರ್ತಡೇ ಪಾರ್ಟಿ ಕುರಿತು ಹಂಚಿಕೊಂಡಿದ್ದರು. ಇದರ ಜೊತೆಗೆ ಈ ವಿಡಿಯೋ ಕೂಡ ವೈರಲ್ ಆಗಿದೆ.
ಭಾರತ ಸರ್ಕಾರವನ್ನು ಲಲಿತ್ ಮೋದಿ ಅಣಕಿಸಿದ್ದಾರೆ. ಭಾರತ ಸರ್ಕಾರದ ಪ್ರಕಾರ ನಾವು ಭಾರತದಿಂದ ಪರಾರಿಯಾಗಿರುವ ಅತೀ ದೊಡ್ಡ ವ್ಯಕ್ತಿಗಳು, ಒಂದೇ ಫ್ರೇಮ್‌ನಲ್ಲಿ ಎಂದಿದ್ದಾರೆ. ವಿಡಿಯೋ ಮೇಲ್ನೋಟಕ್ಕೆ ತಮಗೆ ತಾವೇ ವ್ಯಂಗ್ಯವಾಡಿದ ರೀತಿಯಲ್ಲಿದ್ದರೂ ಅಸಲಿಗೆ ಹೇಳಿದ್ದ ಭಾರತ ಸರ್ಕಾರದ ವಿರುದ್ದ.
2016ರಿಂದ ವಿಜಯ್ ಮಲ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ. ಒಂದೆಡೆ ಯುಕೆ ಕೋರ್ಟ್‌ನಲ್ಲಿ ಮಲ್ಯ ಗಡೀಪಾರು ಕಾನೂನು ಹೋರಾಟಗಳು ನಡೆಯುತ್ತಿದೆ. ಇತ್ತ ಭಾರತದ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟಗಳು ನಿರಂತರವಾಗಿ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ